
ಭಾರತ ಹಾಗೂ ಬಾಂಗ್ಲಾದೇಶ ನಡುವೆ ಢಾಕಾದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನ ಮೊದಲ ದಿನವೇ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಢಾಕಾದ ಶೇರ್-ಎ-ಬಾಂಗ್ಲಾ ಸ್ಟೇಡಿಯಂನಲ್ಲಿ ಡಿಸೆಂಬರ್ 22 ರಂದು ಆರಂಭವಾದ ಟೆಸ್ಟ್ ಪಂದ್ಯದ ಮೊದಲ ದಿನದಂದು ಉಮೇಶ್ ಯಾದವ್ ಮತ್ತು ರವಿಚಂದ್ರನ್ ಅಶ್ವಿನ್ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ ತಂಡ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 227 ರನ್‌ಗಳಿಗೆ ಆಲೌಟ್ ಆಗಿದೆ. ಆದರೆ ಬಾಂಗ್ಲಾದೇಶ ಪರ ಮಿಂಚಿದ ತಂಡದ ಮಾಜಿ ನಾಯಕ ಮೊಮಿನುಲ್ ಹಕ್ 84 ರನ್ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. ಇನ್ನುಳಿದಂತೆ ಬಾಂಗ್ಲಾ ಪರ ಮತ್ತ್ಯಾವ ಆಟಗಾರನೂ ಬಿಗ್ ಇನ್ನಿಂಗ್ಸ್ ಆಡುವಲ್ಲಿ ಸಫಲರಾಗಲಿಲ್ಲ. ಟೀಂ ಇಂಡಿಯಾ ಪರ ಉಮೇಶ್ ಯಾದವ್ ಮತ್ತು ರವಿಚಂದ್ರನ್ ಅಶ್ವಿನ್ ತಲಾ 4 ವಿಕೆಟ್ ಪಡೆದು ಮಿಂಚಿದರೆ, 12 ವರ್ಷಗಳ ಬಳಿಕ ತಂಡಕ್ಕೆ ಎಂಟ್ರಿಕೊಟ್ಟ ಜಯದೇವ್ ಉನದ್ಕಟ್ 2 ವಿಕೆಟ್ ಪಡೆದರು.