IND vs BAN: 5+3+3: ಹೀಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್.

ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಗೆ ಚಾಲನೆ ದೊರೆತಿದೆ. ನಿನ್ನೆ ನಡೆದ (ಫೆ.19) ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿದು ನ್ಯೂಝಿಲೆಂಡ್ ಶುಭಾರಂಭ ಮಾಡಿದೆ. ಇದೀಗ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವಾಡಲು ಸಜ್ಜಾಗಿದೆ. ಇಂದು (ಫೆ.20) ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ 2ನೇ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ್ ತಂಡಗಳು ಮುಖಾಮುಖಿಯಾಗಲಿದೆ.

ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ ಹೇಗಿರಲಿದೆ ಎಂಬುದೇ ಕುತೂಹಲ. ಏಕೆಂದರೆ ಈ ಮ್ಯಾಚ್ ಬಳಿಕ ಭಾರತ ತಂಡವು ಬದ್ಧವೈರಿ ಪಾಕಿಸ್ತಾನ್ ತಂಡವನ್ನು ಎದುರಿಸಬೇಕಿದೆ. ಹೀಗಾಗಿ ಬಾಂಗ್ಲಾದೇಶ್ ವಿರುದ್ಧದವೇ ಸಮತೋಲಿತ ಪ್ಲೇಯಿಂಗ್ ಇಲೆವೆನ್ ರೂಪಿಸಬೇಕಾದ ಅನಿವಾರ್ಯತೆ ಟೀಮ್ ಇಂಡಿಯಾ ಮುಂದಿದೆ. ಅದರಂತೆ ಮೊದಲ ಪಂದ್ಯದಲ್ಲಿ ಭಾರತ ತಂಡವು 5+3+3 ಯೋಜನೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ಐದು+ಮೂರು+ಮೂರು:

5+3+3 ಪ್ಲ್ಯಾನಿಂಗ್​ ಮೂಲಕ ಟೀಮ್ ಇಂಡಿಯಾ ಐವರು ಬ್ಯಾಟರ್​ಗಳು, ಮೂವರು ಆಲ್​ರೌಂಡರ್​ಗಳು ಹಾಗೂ ಮೂವರು ಬೌಲರ್​ಗಳನ್ನು ಒಳಗೊಂಡಂತಹ ಪ್ಲೇಯಿಂಗ್ ಇಲೆವೆನ್ ರೂಪಿಸಬಹುದು.

  • ಟೀಮ್ ಇಂಡಿಯಾ ಪರ ಆರಂಭಿಕರಾಗಿ ರೋಹಿತ್ ಶರ್ಮಾ ಮತ್ತು ಶುಭ್​ಮನ್ ಗಿಲ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಐದನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕೆಎಲ್ ರಾಹುಲ್ ಕಣಕ್ಕಿಳಿಯಲಿದ್ದಾರೆ.
  • ಆಲ್​ರೌಂಡರ್​ಗಳಾಗಿ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ.
  • ಪರಿಪೂರ್ಣ ಬೌಲರ್​ಗಳಾಗಿ ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್ ಹಾಗೂ ಕುಲ್ದೀಪ್ ಯಾದವ್ ಕಣಕ್ಕಿಳಿಯಬಹುದು.

ಅತ್ತ ಮೂವರು ಆಲ್​ರೌಂಡರ್​ಗಳನ್ನು ಕಣಕ್ಕಿಳಿಸುವುದರೊಂದಿಗೆ ಟೀಮ್ ಇಂಡಿಯಾ ಒಟ್ಟು 6 ಬೌಲರ್​ಗಳನ್ನು ಬಳಸಿಕೊಳ್ಳಲು ಪ್ಲ್ಯಾನ್ ರೂಪಿಸಬಹುದು. ಅಲ್ಲದೆ ಐವರು ಬ್ಯಾಟರ್ ಹಾಗೂ ಮೂವರು ಆಲ್​ರೌಂಡರ್​ಗಳಿರುವುದರಿಂದ 8ನೇ ಕ್ರಮಾಂಕದವರೆಗೆ ಬ್ಯಾಟಿಂಗ್ ಲೈನಪ್ ಅನ್ನು ಹೊಂದಬಹುದು. ಈ ಮೂಲಕ ಟೀಮ್ ಇಂಡಿಯಾ ಬಲಿಷ್ಠ ಪಡೆಯೊಂದಿಗೆ ಬಾಂಗ್ಲಾ ವಿರುದ್ಧ ಕಣಕ್ಕಿಳಿಯುವ ಸಾಧ್ಯತೆಯಿದೆ. ಅದರಂತೆ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…

  1. ರೋಹಿತ್ ಶರ್ಮಾ (ನಾಯಕ)
  2. ಶುಭ್​ಮನ್ ಗಿಲ್
  3. ವಿರಾಟ್ ಕೊಹ್ಲಿ
  4. ಶ್ರೇಯಸ್ ಅಯ್ಯರ್
  5. ಕೆಎಲ್ ರಾಹುಲ್ (ವಿಕೆಟ್ ಕೀಪರ್)
  6. ಹಾರ್ದಿಕ್ ಪಾಂಡ್ಯ
  7. ಅಕ್ಷರ್ ಪಟೇಲ್
  8. ರವೀಂದ್ರ ಜಡೇಜಾ
  9. ಮೊಹಮ್ಮದ್ ಶಮಿ
  10. ಕುಲ್ದೀಪ್ ಯಾದವ್
  11. ಅರ್ಷದೀಪ್ ಸಿಂಗ್.

ಬಾಂಗ್ಲಾದೇಶ್ ಸಂಭಾವ್ಯ ಪ್ಲೇಯಿಂಗ್ ಇಲೆವೆನ್:

  1. ತಂಝಿದ್ ಹಸನ್
  2. ಸೌಮ್ಯ ಸರ್ಕಾರ್
  3. ನಜ್ಮುಲ್ ಹೊಸೈನ್ ಶಾಂತೋ (ನಾಯಕ)
  4. ತೌಹಿದ್ ಹೃದೋಯ್
  5. ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್)
  6. ಮಹಮ್ಮದುಲ್ಲಾ
  7. ಮೆಹಿದಿ ಹಸನ್ ಮಿರಾಝ್
  8. ರಿಶಾದ್ ಹೊಸೈನ್
  9. ತಸ್ಕಿನ್ ಅಹ್ಮದ್
  10. ನಹಿದ್ ರಾಣಾ
  11. ಮುಸ್ತಫಿಝುರ್ ರಹಮಾನ್.

Source : https://tv9kannada.com/sports/cricket-news/champions-trophy-2025-india-v-bangladesh-predicted-playing-xi-zp-980768.html

Leave a Reply

Your email address will not be published. Required fields are marked *