IND vs BAN: 6,2,4,4..! ಒಂದೇ ಓವರ್​ನಲ್ಲಿ ಬಾಂಗ್ಲಾ ಬೌಲರ್​ನ ಹುಟ್ಟಡಗಿಸಿದ ಅಶ್ವಿನ್

IND vs BAN Ravichandran Ashwin Scored 16 Runs off the Bowling of Mehdi Hasan in 2nd test

ಬಾಂಗ್ಲಾದೇಶ ವಿರುದ್ಧ ಢಾಕಾದಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾ (India Vs Bangladesh) ಮೂರು ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ ಭಾರತ ತಂಡ ಎರಡು ಟೆಸ್ಟ್‌ಗಳ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ. ಮತ್ತೊಂದೆಡೆ 145 ರನ್​ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಟೀಂ ಇಂಡಿಯಾ (Team India) 74 ರನ್​ಗಳಿಗೆ ಏಳು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬಾಂಗ್ಲಾ ಸ್ಪಿನ್ನರ್ ಮೆಹದಿ ಹಸನ್ ಮಿರಾಜ್ (Mehdi Hasan Mirage) ಭಾರತ ತಂಡದ ಅಗ್ರ ಕ್ರಮಾಂಕವನ್ನು ಪೆವಿಲಿಯನ್​ಗಟ್ಟುವಲ್ಲಿ ಯಶಸ್ವಿಯಾದರು. ಅಲ್ಲದೆ ಪಿಚ್ ಸ್ಪಿನ್ನರ್​ಗಳಿಗೆ ಹೆಚ್ಚು ನೆರವಾಗುತ್ತಿದ್ದರಿಂದ ಟೀಂ ಇಂಡಿಯಾದ ಐದು ವಿಕೆಟ್ ಪಡೆದು ಭಾರತ ತಂಡವನ್ನು ಕಂಗೆಡಿಸಿದರು. ಆದರೆ ಶ್ರೇಯಸ್ ಅಯ್ಯರ್ ಮತ್ತು ರವಿಚಂದ್ರನ್ ಅಶ್ವಿನ್ (Shreyas Iyer and R Ashwin) ಅವರ ಮುರಿಯದ ಜೊತೆಯಾಟ ಬಾಂಗ್ಲಾ ಪಾಳಯಕ್ಕೆ ಸೋಲಿನ ಶಾಕ್ ನೀಡಿತು. ಅದರಲ್ಲೂ ತಂಡವನ್ನು ಗೆಲುವಿನ ಸನಿಹಕ್ಕೆ ತಂದ ಬಳಿಕ ಸ್ಫೋಟಕ ಆಟಕ್ಕೆ ಮುಂದಾದ ಅಶ್ವಿನ್, ಟೀಂ ಇಂಡಿಯಾದ 5 ವಿಕೆಟ್ ಉರುಳಿಸಿ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಹಸನ್ ಅವರ ಒಂದೇ ಓವರ್​ನಲ್ಲಿ ಒಂದು ಸಿಕ್ಸರ್ ಹಾಗೂ 2 ಬೌಂಡರಿ ಬಾರಿಸಿ, ಭಾರತಕ್ಕೆ ಗೆಲುವಿನ ಉಡುಗೊರೆ ನೀಡಿದರು.

ರೋಚಕ ಘಟ್ಟ ತಲುಪಿದ 4ನೇ ದಿನದಾಟ

ಬಾಂಗ್ಲಾ ನೀಡಿದ 145 ರನ್​ಗಳ ಗುರಿ ಬೆನ್ನಟ್ಟಿದ್ದ ಭಾರತ 3ನೇ ದಿನದಾಟದಂತ್ಯಕ್ಕೆ ಕೇವಲ 45 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇಲ್ಲಿಂದ 4ನೇ ದಿನದಾಟ ಆರಂಭಿಸಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ನೈಟ್ ವಾಚ್​ಮಾನ್ ಆಗಿ ಕಣಕ್ಕಿಳಿದಿದ್ದ ಜಯದೇವ್ ಉನದ್ಕಟ್ 13 ರನ್​ಗಳಿಸಿ ತಮ್ಮ ವಿಕೆಟ್ ಒಪ್ಪಿಸಿದರು. ಆ ನಂತರ ಬಂದ ರಿಷಭ್ ಪಂತ್ ಕೂಡ 9 ರನ್​ಗಳಿಗೆ ಸುಸ್ತಾದರು. ಹೀಗಾಗಿ ಪಂತ್ ವಿಕೆಟ್ ಪಡೆದ ಬಾಂಗ್ಲಾ ತಂಡ ಆಗಲೇ ಪಂದ್ಯ ಗೆದ್ದ ಖುಷಿಯಲ್ಲಿತ್ತು. ಏಕೆಂದರೆ ಇಡೀ ಟೆಸ್ಟ್ ಸರಣಿಯಲ್ಲಿ ಬಾಂಗ್ಲಾ ತಂಡವನ್ನು ಹೆಚ್ಚಾಗಿ ಕಾಡಿದ್ದು ರಿಷಭ್ ಪಂತ್ ಮಾತ್ರ.

IND vs BAN: ಸೋಲಿನ ದವಡೆಯಲ್ಲಿದ್ದ ಭಾರತ ಗೆದ್ದಿದ್ದು ಈ ನಾಲ್ಕು ಕಾರಣಗಳಿಂದ..!

ಹೀಗಾಗಿ 74 ರನ್​ಗಳಿಗೆ ಪ್ರಮುಖ 7 ವಿಕೆಟ್ ಕಳೆದುಕೊಂಡಿದ್ದ ಭಾರತ ಸೋಲಿನ ಸುಳಿಯಲ್ಲಿತ್ತು. ಆದರೆ ಅಜೇಯ ಅರ್ಧಶತಕದ ಜೊತೆಯಾಟವಾಡಿದ ಅಯ್ಯರ್ ಹಾಗೂ ಅಶ್ವಿನ್ ಟೀಂ ಇಂಡಿಯಾವನ್ನು ಗೆಲುವಿನ ಹಾದಿಗೆ ಮರಳಿಸಿದರು. ಅದರಲ್ಲೂ ಕೊನೆಯ ಓವರ್​ನಲ್ಲಿ ಉಗ್ರರೂಪ ತಾಳಿದ ಅಶ್ವಿನ್ 2 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವು ತಂದಿತ್ತರು.

ಒಂದೇ ಓವರ್​ನಲ್ಲಿ 16 ರನ್ ಸಿಡಿಸಿದ ಅಶ್ವಿನ್

ವಾಸ್ತವವಾಗಿ ಭಾರತದ ಗೆಲುವಿಗೆ 16 ರನ್‌ಗಳ ಅಗತ್ಯವಿದ್ದ ಹಂತದಲ್ಲಿ ಮೆಹದಿ ಹಸನ್ ಮತ್ತೊಮ್ಮೆ ಬೌಲಿಂಗ್​ಗೆ ಇಳಿದರು. ಆ ಓವರ್‌ನ ಮೊದಲ ಎಸೆತವನ್ನು ಅಶ್ವಿನ್ ಒಂದು ಕೈಯಲ್ಲಿ ಬೃಹತ್ ಸಿಕ್ಸರ್ ಬಾರಿಸುವ ಮೂಲಕ ಆರಂಭಿಸಿದರು. ಆ ನಂತರ ಎರಡನೇ ಎಸೆತದಲ್ಲಿ ಎರಡು ರನ್ ಬಂದವು. ನಂತರ ಐದು ಮತ್ತು ಆರು ಎಸೆತಗಳನ್ನು ಸತತವಾಗಿ ಬೌಂಡರಿಗಟ್ಟಿ ಟೀಂ ಇಂಡಿಯಾದ ಗೆಲುವನ್ನು ಅಂತಿಮಗೊಳಿಸಿದರು. ಟೀಂ ಇಂಡಿಯಾಕ್ಕೆ ಸಾಕಷ್ಟು ತೊಂದರೆ ನೀಡಿದ ಮೆಹದಿ ಹಸನ್ ಬೌಲಿಂಗ್‌ನಲ್ಲಿ ಅಶ್ವಿನ್ 16 ರನ್ ಗಳಿಸಿದ್ದು ಇಲ್ಲಿ ಬಾಂಗ್ಲಾ ಬೌಲರ್​ಗಳಿಗೆ ಆಶ್ಷರ್ಯವನ್ನುಂಟು ಮಾಡಿತ್ತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/ind-vs-ban-ravichandran-ashwin-scored-16-runs-off-the-bowling-of-mehdi-hasan-in-2nd-test-psr-au14-490679.html

Leave a Reply

Your email address will not be published. Required fields are marked *