IND vs BAN: ಚೆನ್ನೈ ಟೆಸ್ಟ್‌ನಲ್ಲಿ ಅಶ್ವಿನ್ ಬರೆದ ದಾಖಲೆಗಳ ಸಂಖ್ಯೆ.

IND vs BAN: ನ್ನೈ ಟೆಸ್ಟ್‌ನಲ್ಲಿ ಅಶ್ವಿನ್ ನಿರ್ಮಿಸಿದ ದಾಖಲೆಗಳ ಸಂಖ್ಯೆ 8ಕ್ಕಿಂತ ಕಡಿಮೆಯಿಲ್ಲ. ಈ ಪಂದ್ಯದಲ್ಲಿ ಶತಕ ಸಿಡಿಸಿದ್ದಲ್ಲದೆ, 3 ವರ್ಷಗಳಲ್ಲಿ ಎರಡನೇ ಬಾರಿಗೆ ಚೆನ್ನೈ ಟೆಸ್ಟ್‌ನಲ್ಲಿ 5 ಪ್ಲಸ್ ವಿಕೆಟ್ ಪಡೆದರು. ಈ ಮೂಲಕ ಯಾವುದೇ ಒಂದು ಮೈದಾನದಲ್ಲಿ ಈ ದಾಖಲೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡರು.

ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 280 ರನ್‌ಗಳಿಂದ ಮಣಿಸಿದ ಟೀಂ ಇಂಡಿಯಾ ಸರಣಿಯಲ್ಲಿ ಶುಭಾರಂಭ ಮಾಡಿದೆ. ತಂಡದ ಈ ಗೆಲುವಿನ ಮಹತ್ವದ ಪಾತ್ರ ನಿರ್ವಹಿಸಿದ ಆಲ್‌ರೌಂಡರ್ ಅಶ್ವಿನ್, ತವರು ನೆಲದಲ್ಲಿ ಶತಕ ಸಿಡಿಸಿದ್ದಲ್ಲದೆ 6 ವಿಕೆಟ್ ಸಹ ಪಡೆದರು. ಈ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.

ಇದಲ್ಲದೆ ಚೆನ್ನೈ ಟೆಸ್ಟ್‌ನಲ್ಲಿ ಅಶ್ವಿನ್ ನಿರ್ಮಿಸಿದ ದಾಖಲೆಗಳ ಸಂಖ್ಯೆ 8ಕ್ಕಿಂತ ಕಡಿಮೆಯಿಲ್ಲ. ಈ ಪಂದ್ಯದಲ್ಲಿ ಶತಕ ಸಿಡಿಸಿದ್ದಲ್ಲದೆ, 3 ವರ್ಷಗಳಲ್ಲಿ ಎರಡನೇ ಬಾರಿಗೆ ಚೆನ್ನೈ ಟೆಸ್ಟ್‌ನಲ್ಲಿ 5 ಪ್ಲಸ್ ವಿಕೆಟ್ ಪಡೆದರು. ಈ ಮೂಲಕ ಯಾವುದೇ ಒಂದು ಮೈದಾನದಲ್ಲಿ ಈ ದಾಖಲೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡರು. ಇದಕ್ಕೂ ಮೊದಲು, ಅವರು 2021 ರಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ಟೆಸ್ಟ್‌ನಲ್ಲಿ ಚೆನ್ನೈನಲ್ಲಿ ಈ ಸಾಧನೆ ಮಾಡಿದ್ದರು.

ಹಾಗೆಯೇ ಅಶ್ವಿನ್ ಈ ಟೆಸ್ಟ್‌ನಲ್ಲಿ 69 ವರ್ಷಗಳ ಹಳೆಯ ದಾಖಲೆಯನ್ನು ಸಹ ಮುರಿದರು. ಬಾಂಗ್ಲಾದೇಶದ ವಿರುದ್ಧ ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ಗಳನ್ನು ಪಡೆಯುವ ಮೂಲಕ, ಅವರು ಇನ್ನಿಂಗ್ಸ್‌ನಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದ ಅತ್ಯಂತ ಹಿರಿಯ ಭಾರತೀಯ ಆಟಗಾರ ಎನಿಸಿಕೊಂಡರು.

ಚೆನ್ನೈ ಟೆಸ್ಟ್‌ನಲ್ಲಿ 6 ವಿಕೆಟ್ ಗಳಿಸುವುದರೊಂದಿಗೆ, ಅಶ್ವಿನ್ ಗರಿಷ್ಠ 37 ಬಾರಿ 5 ವಿಕೆಟ್ ಪಡೆದ ಶೇನ್ ವಾರ್ನ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಂದರೆ ಈಗ ಮುತ್ತಯ್ಯ ಮುರಳೀಧರನ್ ಮಾತ್ರ ಅಶ್ವಿನ್​ಗಿಂತ ಮುಂದಿದ್ದಾರೆ.

ಇದರೊಂದಿಗೆ ಅಶ್ವಿನ್ ಭಾರತದ ಪರ ಟೆಸ್ಟ್ ಪಂದ್ಯದ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಸ್ತುತ ಈ ಪಟ್ಟಿಯಲ್ಲಿ 99 ವಿಕೆಟ್‌ಗಳನ್ನು ಪಡೆದಿರುವ ಅಶ್ವಿನ್, 94 ವಿಕೆಟ್‌ಗಳನ್ನು ಪಡೆದಿದ್ದ ಅನಿಲ್ ಕುಂಬ್ಳೆ ಅವರ ದಾಖಲೆಯನ್ನು ಸಹ ಮುರಿದಿದ್ದಾರೆ.

ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕದ ಜೊತೆಗೆ 5 ವಿಕೆಟ್ ಸಾಧನೆ ಮಾಡಿದ ಅಶ್ವಿನ್, ಇದರೊಂದಿಗೆ 20 ಕ್ಕೂ ಹೆಚ್ಚು ಬಾರಿ 50 ಪ್ಲಸ್ ಸ್ಕೋರ್ ಕಲೆಹಾಕಿದೆ ಮತ್ತು ಇನ್ನಿಂಗ್ಸ್‌ನಲ್ಲಿ 30 ಕ್ಕೂ ಹೆಚ್ಚು ಬಾರಿ 5 ವಿಕೆಟ್ ಪಡೆದ ಮೊದಲ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ.

ಹಾಗೆಯೇ ಟೆಸ್ಟ್‌ನಲ್ಲಿ ಅತಿ ಹೆಚ್ಚು ಶತಕಗಳು ಮತ್ತು 5 ವಿಕೆಟ್‌ಗಳನ್ನು ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಶ್ವಿನ್ ಇದೀಗ 2ನೇ ಸ್ಥಾನಕ್ಕೇರಿದ್ದಾರೆ. ಅಶ್ವಿನ್ ಇದುವರೆಗೆ 4 ಬಾರಿ ಈ ಸಾಧನೆ ಮಾಡಿದ್ದು, 5 ಬಾರಿ ಸಾಧನೆ ಮಾಡಿರುವ ಇಯಾನ್ ಬೋಥಮ್ ಮೊದಲ ಸ್ಥಾನದಲ್ಲಿದ್ದಾರೆ.

ಬಾಂಗ್ಲಾದೇಶ ವಿರುದ್ಧ ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಪಡೆದ ಅಶ್ವಿನ್, ಎರಡನೇ ಇನ್ನಿಂಗ್ಸ್​ನಲ್ಲಿ ಅಧಿಕ ಬಾರಿ ಐದು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಅಶ್ವಿನ್ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಅಶ್ವಿನ್ ಇದುವರೆಗೆ 20 ಬಾರಿ ಈ ಸಾಧನೆ ಮಾಡಿದ್ದಾರೆ.

ತನ್ನ ಆಲ್‌ರೌಂಡರ್ ಪ್ರದರ್ಶನದ ಮೂಲಕ ಚೆನ್ನೈ ಟೆಸ್ಟ್‌ನ ಹೀರೋ ಎನಿಸಿಕೊಂಡ ಅಶ್ವಿನ್, ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 10ನೇ ಬಾರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.

Source: https://tv9kannada.com/photo-gallery/cricket-photos/ind-vs-ban-1st-test-r-ashwin-creats-many-records-against-bangladesh-in-chennai-test-psr-906531.html

Leave a Reply

Your email address will not be published. Required fields are marked *