Rohit Sharma century: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಬಿರುಗಾಳಿಯ ಶತಕ ಸಿಡಿಸಿದ್ದಾರೆ. ಕೇವಲ 76 ಎಸೆತಗಳಲ್ಲಿ ಶತಕ ಪೂರೈಸಿದ ರೋಹಿತ್ ಅವರ ಇನ್ನಿಂಗ್ಸ್ನಲ್ಲಿ 7 ಸಿಕ್ಸರ್ ಮತ್ತು 9 ಬೌಂಡರಿಗಳು ಸೇರಿವೆ. ಈ ಮೂಲಕ ರೋಹಿತ್ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 338 ದಿನಗಳ ನಂತರ ಮತ್ತು ಏಕದಿನ ಪಂದ್ಯದಲ್ಲಿ 475 ದಿನಗಳ ನಂತರ ಶತಕದ ಬರ ನೀಗಿಸಿಕೊಂಡಿದ್ದಾರೆ.

ಹಿಟ್ಮ್ಯಾನ್ ಎಂದೇ ಖ್ಯಾತರಾಗಿರುವ ರೋಹಿತ್ ಶರ್ಮಾ ಅವರ ಬ್ಯಾಟ್ ಇತ್ತೀಚ್ಚಿನ ದಿನಗಳಲ್ಲಿ ಮೌನಕ್ಕೆ ಶರಣಾಗಿತ್ತು. ಹೀಗಾಗಿ ಭಾರತ ಕ್ರಿಕೆಟ್ನಲ್ಲಿ ರೋಹಿತ್ ಯುಗಾಂತ್ಯವಾಯಿತೆಂದೇ ಹಲವರು ಅಭಿಪ್ರಾಯಟ್ಟಿದ್ದರು. ಆದರೆ ಇಂಗ್ಲೆಂಡ್ ವಿರುದ್ಧ ಕಟಕ್ನಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ತಮ್ಮ ಹಳೆಯ ಅವತಾರವನ್ನು ತೋರಿಸಿದ್ದಾರೆ. ಆಂಗ್ಲರ ವಿರುದ್ಧ ಉಗ್ರರೂಪ ತಾಳಿರುವ ರೋಹಿತ್ ಶರ್ಮಾ ಕೇವಲ 76 ಎಸೆತಗಳಲ್ಲಿ ತಮ್ಮ ಏಕದಿನ ವೃತ್ತಿಜೀವನದ 32 ನೇ ಶತಕವನ್ನು ಬಾರಿಸಿದ್ದಾರೆ. ಈ ಮೂಲಕ ರೋಹಿತ್ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 338 ದಿನಗಳ ನಂತರ ಮತ್ತು ಏಕದಿನ ಪಂದ್ಯದಲ್ಲಿ 475 ದಿನಗಳ ನಂತರ ತಮ್ಮ ಶತಕದ ಬರವನ್ನು ನೀಗಿಸಿಕೊಂಡಿದ್ದಾರೆ.
ಮೇಲೆ ಹೇಳಿದಂತೆ ರೋಹಿತ್ ಶರ್ಮಾ ಅವರ ಕಳಪೆ ಬ್ಯಾಟಿಂಗ್ ಬಗ್ಗೆ ಸಾಕಷ್ಟು ಪ್ರಶ್ನೆಗಳು ಉದ್ಭವಿಸಿದ್ದವು.ಆದಾಗ್ಯೂ ರೋಹಿತ್ಗೆ ಒಂದೇ ಒಂದು ಗಮನಾರ್ಹ ಇನ್ನಿಂಗ್ಸ್ ಆಡಲು ಸಾಧ್ಯವಾಗಿರಲಿಲ್ಲ. ಆದರೆ ಕಟಕ್ನಲ್ಲಿ ಬೇರೆಯದೇ ಶೈಲಿಯಲ್ಲಿ ಕಾಣಿಸಿಕೊಂಡ ರೋಹಿತ್ ಈ ಪಂದ್ಯದಲ್ಲಿ ಮೊದಲು 3 ಡಾಟ್ ಬಾಲ್ಗಳನ್ನು ಆಡಿದ ನಂತರ ಬೌಂಡರಿ ಬಾರಿಸುವುದರೊಂದಿಗೆ ತಮ್ಮ ಇನ್ನಿಂಗ್ಸ್ ಅನ್ನು ಪ್ರಾರಂಭಿಸಿದರು. ಮುಂದಿನ ಎಸೆತದಲ್ಲೇ ಅವರು ಸಿಕ್ಸರ್ ಬಾರಿಸಿದರು. ಅದಾದ ನಂತರ ರೋಹಿತ್ ಶತಕ ಬಾರಿಸುವವರೆಗೂ ಹಿಂತಿರುಗಿ ನೋಡಲಿಲ್ಲ. ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರಿಸಿದ ರೋಹಿತ್ 75 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 9 ಬೌಂಡರಿಗಳ ಸಹಾಯದಿಂದ 96 ರನ್ ಗಳಿಸಿದರು. ಇದಾದ ನಂತರ, 26 ನೇ ಓವರ್ನಲ್ಲಿ ಆದಿಲ್ ರಶೀದ್ ಬೌಲಿಂಗ್ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಮ್ಮ ಶತಕವನ್ನು ಪೂರ್ಣಗೊಳಿಸಿದರು.
What a way to get to the HUNDRED! 🤩
A treat for the fans in Cuttack to witness Captain Rohit Sharma at his best 👌👌
Follow The Match ▶️ https://t.co/NReW1eEQtF#TeamIndia | #INDvENG | @IDFCFIRSTBank | @ImRo45 pic.twitter.com/oQIlX7fY1T
— BCCI (@BCCI) February 9, 2025
ಮೂರನೇ ಸ್ಥಾನಕ್ಕೇರಿದ ರೋಹಿತ್
ಈ ಶತಕದ ಇನ್ನಿಂಗ್ಸ್ನೊಂದಿಗೆ ರೋಹಿತ್ ತಮ್ಮ ಏಕದಿನ ವೃತ್ತಿಜೀವನದಲ್ಲಿ ಆಡಿರುವ 266 ಪಂದ್ಯಗಳಲ್ಲಿ 48 ಸರಾಸರಿಯಲ್ಲಿ 10868 ರನ್ ಪೂರ್ಣಗೊಳಿಸಿದ್ದಾರೆ. ಇದಲ್ಲದೆ ರೋಹಿತ್ ತಮ್ಮ ಶತಕದೊಂದಿಗೆ ಸ್ಟೀವ್ ಸ್ಮಿತ್ರನ್ನು ಹಿಂದಿಕ್ಕಿದ್ದು, ಇದೀಗ ರೋಹಿತ್ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಸಕ್ರಿಯ ಕ್ರಿಕೆಟಿಗರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. ರೋಹಿತ್ 526 ಇನ್ನಿಂಗ್ಸ್ಗಳಲ್ಲಿ 49 ಶತಕಗಳನ್ನು ಗಳಿಸಿದ್ದರೆ, ಸ್ಮಿತ್ 410 ಇನ್ನಿಂಗ್ಸ್ಗಳಲ್ಲಿ 48 ಶತಕಗಳನ್ನು ಬಾರಿಸಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 81 ಶತಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಜೋ ರೂಟ್ 52 ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.