ಭಾರತ ತಂಡ ರಾಜ್ಕೋಟ್ನಲ್ಲಿ ನಡೆದ 3ನೇ ಟಿ20ಯಲ್ಲಿ 26ರನ್ಗಳ ಮುಖಭಂಗ ಅನುಭವಿಸಿದೆ. ಇಂಗ್ಲೆಂಡ್ ನೀಡಿದ್ದ 172ರನ್ಗಳ ಗುರಿಯನ್ನ ಬೆಟ್ಟಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 145ರನ್ಗಳಲಷ್ಟೆ ಶಕ್ತವಾಗಿ ಸೋಲು ಕಂಡಿತು.

ಭಾರತ ತಂಡ ರಾಜ್ಕೋಟ್ನಲ್ಲಿ ನಡೆದ 3ನೇ ಟಿ20ಯಲ್ಲಿ 26ರನ್ಗಳ ಮುಖಭಂಗ ಅನುಭವಿಸಿದೆ. ಇಂಗ್ಲೆಂಡ್ ನೀಡಿದ್ದ 172ರನ್ಗಳ ಗುರಿಯನ್ನ ಬೆಟ್ಟಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 145ರನ್ಗಳಲಷ್ಟೆ ಶಕ್ತವಾಗಿ ಸೋಲು ಕಂಡಿತು. ಎಲ್ಲಾ ಬ್ಯಾಟರ್ಗಳು ತಾಳ್ಮೆ ತೋರದೇ ಬೇಕಾಬಿಟ್ಟಿ ಶಾಟ್ ಮಾಡಿ ವಿಕೆಟ್ ಕೈಚೆಲ್ಲಿದರು. ಇನ್ನು ಆಲ್ರೌಂಡರ್ಗಳಾದ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಹಾಗೂ ವಾಷಿಂಗ್ಟನ್ ವಿಕೆಟ್ ಕಾಯ್ದುಕೊಳ್ಳುವ ಯತ್ನದಲ್ಲಿ ಹೆಚ್ಚು ಎಸೆತಗಳನ್ನು ವ್ಯರ್ಥ ಮಾಡಿ ಕೊನೆಯಲ್ಲಿ ಒತ್ತಡಕ್ಕೆ ಒಳಗಾಗಿ ದೊಡ್ಡ ಶಾಟ್ ಮಾಡುವ ಪ್ರಯತ್ನದಲ್ಲಿ ಔಟ್ ಆದರು. ಪಾಂಡ್ಯ 35 ಎಸೆತಗಳಲ್ಲಿ 40 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಇಂಗ್ಲೆಂಡ್ ನೀಡಿದ 172 ರನ್ಗಳ ಗುರಿಯನ್ನ ಬೆನ್ನಟ್ಟಿದ ಟೀಮ್ ಇಂಡಿಯಾಗೆ ಉತ್ತಮ ಆರಂಭ ಸಿಗಲಿಲ್ಲ. ಮೊದಲೆರಡು ಪಂದ್ಯಗಳಲ್ಲಿ ವಿಫಲರಾಗಿದ್ದ ಸಂಜು ಸ್ಯಾಮ್ಸನ್ ಕೇವಲ 3 ರನ್ಗಳಿಸಿ ಔಟಾದರು. ನಂತರ ಬಂದ ನಾಯಕ ಸೂರ್ಯಕುಮಾರ್ (14), ಕಳೆದ ಪಂದ್ಯದ ಹೀರೋ ತಿಲಕ್ ವರ್ಮಾ (18) ಕೂಡ ವಿಫಲರಾದರು.
ಟೆಸ್ಟ್ ಇನ್ನಿಂಗ್ಸ್ ಆಡಿದ ಸುಂದರ್-ಹಾರ್ದಿಕ್
5ನೇ ವಿಕೆಟ್ಗೆ ಒಂದಾದ ವಾಷಿಂಗ್ಟನ್ ಸುಂದರ್ ಹಾರ್ದಿಕ್ ಪಾಂಡ್ಯ ಜೊತೆ ಸೇರಿ 27 ಎಸೆತಗಳ ಜೊತೆಯಾಟ ನಡೆಸಿ ಕೇವಲ 17 ರನ್ಗಳಿಸಿದರು. ಸುಂದರ್ 17 ಎಸೆತಗಳಲ್ಲಿ ಕೇವಲ 6 ರನ್ಗಳಿಸಿದರು. ನಂತರ ಬಂದ ಅಕ್ಷರ್ ಪಟೇಲ್ ಕೂಡ ನಿಧಾನಗತಿ ಬ್ಯಾಟಿಂಗ್ ಮಾಡಿ 16 ಎಸೆತಗಳಲ್ಲಿ 15 ರನ್ಗಳಿಸಿ ಔಟ್ ಆದರು. 19ನೇ ಓವರ್ವರೆಗೆ ಕ್ರೀಸ್ನಲ್ಲಿದ್ದ ಹಾರ್ದಿಕ್ ಪಾಂಡ್ಯ 12 ಎಸೆತಗಳಿಗೆ 40 ರನ್ಗಳ ಅಗತ್ಯವಿದ್ದಾಗ ಔಟ್ ಆದರು. ಅವರು 35 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ಗಳ ಸಹಿತ 40 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಎರಡಂಕಿ ದಾಟದ ಕೆಳ ಕ್ರಮಾಂಕ
ನಂತರ ದ್ರುವ್ ಜುರೆಲ್ 2, ಮೊಹಮ್ಮದ್ ಶಮಿ 7, ರವಿ ಬಿಷ್ಭೋಯ್ ಅಜೇಯ 4, ವರುಣ್ ಚಕ್ರವರ್ತಿ ಅಜೇಯ 1 ರನ್ಗಳಿಸಿದರು. ಇಂಗ್ಲೆಂಡ್ ಪರ ಜೇಮೀ ಓವರ್ಟನ್ 24ಕ್ಕೆ3, ಬ್ರಿಡನ್ ಕಾರ್ಸ್ 28ಕ್ಕೆ2, ಜೋಫ್ರಾ ಆರ್ಚರ್ 33ಕ್ಕೆ 2, ಮಾರ್ಕ್ ವುಡ್ 29ಕ್ಕೆ1 ಹಾಗೂ ಆದಿಲ್ ರಶೀದ್ 15ಕ್ಕೆ 1 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ ಕೂಡ ಮೊದಲ ವಿಕೆಟ್ ಬೇಗನೆ ಕಳೆದುಕೊಂಡಿತು. ತಂಡದ ಮೊತ್ತ 7 ರನ್ಗಳಾಗುವಷ್ಟರಲ್ಲಿ ಆರಂಭಿಕ ಫಿಲ್ ಸಾಲ್ಟ್(5) ಔಟಾಗಿ ಪೆವಿಲಿಯನ್ ಸೇರಿಕೊಂಡರು. ಇದು ಅವರ ಸತತ 3ನೇ ವೈಫಲ್ಯ ಅನುಭವಿಸಿದರು.
ಮಿಂಚಿದ ಡಕೆಟ್
ಆದರೆ ಕಳೆದ ಎರಡು ಪಂದ್ಯಗಳಲ್ಲಿ ವಿಫಲರಾಗಿದ್ದ ಬೆನ್ ಡಕೆಟ್ ಹಾಗೂ ನಾಯಕ ಜೋಸ್ ಬಟ್ಲರ್ 2ನೇ ವಿಕೆಟ್ಗೆ 76 ರನ್ ಸೇರಿಸಿದರು. ಮೊದಲೆರಡು ಪಂದ್ಯಗಳಲ್ಲಿ ಮಿಂಚಿದ್ದ ಬಟ್ಲರ್ ಇಂದು 22 ಎಸೆತಗಳಲ್ಲಿ 24 ರನ್ಗಳಿಸಿ ವಿಫಲರಾದರು. ಅವರು 9ನೇ ಓವರ್ನಲ್ಲಿ ಚಕ್ರವರ್ತಿ ಬೌಲಿಂಗ್ನಲ್ಲಿ ಸ್ಯಾಮ್ಸನ್ಗೆ ಕ್ಯಾಚ್ ನೀಡಿ ಔಟಾದರು. ನಂತರದ ಓವರ್ನಲ್ಲೇ ಅಕ್ಷರ್ ಪಟೇಲ್ ಬೌಲಿಂಗ್ನಲ್ಲಿ 28 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ಗಳ ಸಹಿತ 51 ರನ್ಗಳಿಸಿದ ಬೆನ್ ಡಕೆಟ್ ಬೌಲ್ಡ್ ಆದರು.
ದಿಢೀರ್ ಕುಸಿತ ಕಂಡ ಇಂಗ್ಲೆಂಡ್
ಈ ಹಂತದಲ್ಲಿ ದಿಡೀರ್ ಕುಸಿತ ಕಂಡ ಇಂಗ್ಲೆಂಡ್ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದರು. ಹ್ಯಾರು ಬ್ರೂಕ್ (8),ಜೇಮೀ ಸ್ಮಿತ್ (6), ಜೇಮೀ ಓವರ್ಟನ್ (0), ಬ್ರಿಡನ್ ಕಾರ್ಸ್ (3) ಹಾಗೂ ಜೋಫ್ರಾ ಆರ್ಚರ್ (0) 27 ರನ್ಗಳ ಅಂತರದಲ್ಲಿ ಔಟ್ ಆದರು. ಆದರೆ ಕೊನೆಯಲ್ಲಿ ಅಬ್ಬರಿಸಿದ ಲಿಯಾಮ್ ಲಿವಿಂಗ್ಸ್ಟೋನ್ 24 ಎಸೆತಗಳಲ್ಲಿ 1 ಬೌಂಡರಿ, 5 ಸಿಕ್ಸರ್ಗಳ ನೆರವಿನಿಂದ 43 ರನ್ಗಳಿಸಿದರು. ಬಿಷ್ಣೋಯ್ ಒಂದೇ ಓವರ್ನಲ್ಲಿ 19 ರನ್ಗಳಿಸಿ ಅಬ್ಬರಿಸಿದರು. ಆದರೆ ನಂತರದ ಓವರ್ನಲ್ಲೆ ಅವರು ಹಾರ್ದಿಕ್ ಪಾಂಡ್ಯ ಬೌಲಿಂಗ್ನಲ್ಲಿ ಔಟಾದರು. ಕೊನೆಯ ವಿಕೆಟ್ಗೆ ಆದಿಲ್ ರಶೀದ್ (10) ಹಾಗೂ ಮಾರ್ಕ್ ವುಡ್ (10) 24 ರನ್ ಸೇರಿಸಿದರು. ಒಟ್ಟಾರೆ ಇಂಗ್ಲೆಂಡ್ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 171 ರನ್ಗಳಿಸಿತು
ಭಾರತದ ಪರ ವರುಣ್ ಚಕ್ರವರ್ತಿ ಕರಿಯರ್ ಬೆಸ್ಟ್ 24ಕ್ಕೆ 5 ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ 33ಕ್ಕೆ2, ರವಿ ಬಿಷ್ಣೋಯ್ 46ಕ್ಕೆ1, ಅಕ್ಷರ್ ಪಟೇಲ್ 19ಕ್ಕೆ 1 ವಿಕೆಟ್ ಪಡೆದಿದ್ದರು.
ಈ ಗೆಲುವಿನೊಂದಿಗೆ ಇಂಗ್ಲೆಂಡ್ ಸರಣಿ ಗೆಲ್ಲುವ ಆಸೆಯನ್ನ ಇನ್ನೂ ಜೀವಂತವಾಗಿರಿಸಿಕೊಂಡಿದೆ. ನಾಲ್ಕನೇ ಪಂದ್ಯ ಪುಣೆಯಲ್ಲಿ ನಡೆಯಲಿದ್ದು, ಈ ಪಂದ್ಯ ಗೆದ್ದ ಸರಣಿ 2-2ರಲ್ಲಿ ಸಮಬಲವಾಗಲಿದೆ. ಆದ ಮುಂಬೈನ ವಾಂಖೆಡೆಯಲ್ಲಿ ನಡೆಯುವ ಅಂತಿಮ ಪಂದ್ಯ ಸರಣಿಗೆ ಫೈನಲ್ ಆಗಲಿದೆ.