ಭಾರತ v/s ನ್ಯೂಜಿಲ್ಯಾಂಡ್ ನಾಲ್ಕನೇ T-20 ಸಂಜು ಸ್ಯಾಮ್ಸನ್‌ಗೆ ಗೇಟ್ ಪಾಸ್! ರಾಂಚಿಯಲ್ಲಿ ಟೀಮ್ ಇಂಡಿಯಾದಿಂದ ದೊಡ್ಡ ಬದಲಾವಣೆ.
ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಐದು ಪಂದ್ಯಗಳ T-20 ಸರಣಿಯಲ್ಲಿ ಈಗಾಗಲೇ ಮೂರು ಸೊನ್ನೆ ಅಂತರದ ಮುನ್ನಡೆ ಸಾಧಿಸಿ ಸರಣಿ ಕೈವಶ ಮಾಡಿಕೊಂಡಿರುವ ಟೀನ್ ಇಂಡಿಯಾ ಇದೀಗ ರಾಂಚಿಯ ಜೆಎಸ್‌ಸಿಎ (JSCA) ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿರುವ ನಾಲ್ಕನೇ ಪದ್ಯಕ್ಕೆ ಸಜ್ಜಾಗಿದೆ.
ಸರಣಿ ಗೆದ್ದಿರುವ ಹಿನ್ನೆಲೆಯಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ತಂಡದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿ ಪರೀಕ್ಷಿಸಲು ಮುಂದಾಗಿದ್ದಾರೆ ಸಂಜು ಸ್ಯಾಮ್ಸನ್ ಈ ಸರಣಿಯಲ್ಲಿ ಅತ್ಯಂತ ಚರ್ಚೆಯಾಗುತ್ತಿರುವ ವಿಷಯವೆಂದರೆ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ ಅವರ ಫಾರ್ಮ್ ಸತತ ಅವಕಾಶಗಳನ್ನು ನೀಡಿದರು. ಸಂಜು ಅವರು ಅದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಮೊದಲ ಪಂದ್ಯದಲ್ಲಿ 10 ರನ್ ಎರಡನೇ ಪಂದ್ಯದಲ್ಲಿ 6 ರನ್ ಮತ್ತು ಮೂರನೇ ಪಂದ್ಯದಲ್ಲಿ ಶೂನ್ಯಕ್ಕೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದ್ದಾರೆ. ಸಂಜು ಅವರ ಈ ಕಳಪೆ ಪ್ರದರ್ಶನದಿಂದಾಗಿ ಟೀಮ್ ಮ್ಯಾನೇಜ್ಮೆಂಟ್ ಕಠಿಣ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಮೂಲಗಳ ಪ್ರಕಾರ ನಾಲ್ಕನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರಿಗೆ ವಿಶ್ರಾಂತಿ ನೀಡಿ ಅವರ ಸ್ಥಾನದಲ್ಲಿ ಸ್ಪೋಟಕ ಬ್ಯಾಟ್ಸ್ಮನ್ ಇಶಾನ್ ಕಿಶನ್ ಅವರಿಗೆ ಆಡುವ ಬಳಗದಲ್ಲಿ ಅವಕಾಶ ನೀಡುವ ಸಾಧ್ಯತೆ ದಟ್ಟವಾಗಿದೆ. ಇಶಾನ್ ಕಿಶನ್ ಅವರು ಅಭಿಷೇಕ್ ಶರ್ಮ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಬಹುದು.
ಬೌಲಿಂಗ್ ವಿಭಾಗದಲ್ಲೂ ಬದಲಾವಣೆ ಕೇವಲ ಬ್ಯಾಟಿಂಗ್ ಮಾತ್ರವಲ್ಲದೆ ಭೌಲಿಂಗ ವಿಭಾಗದಲ್ಲೂ ನಾಯಕ ಸೂರ್ಯಕುಮಾರ್ ಯಾದವ್ ಬದಲಾವಣೆ ಮಾಡಲು ನಿರ್ಧರಿಸಿದ್ದಾರೆ. ಮೂರನೇ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಸ್ಟಾರ್ ಬೌಲರ್ಗಳಾದ ಹರ್ಷದೀಪ್ ಸಿಂಗ್ ಮಿಸ್ಟರೀ ಸ್ಪಿನ್ನರ್ ವರುಣ್ ಚಕ್ರವರ್ತಿ ತಂಡಕ್ಕೆ ಕಮ್ ಬ್ಯಾಕ್ ಮಾಡಲಿದ್ದಾರೆ.
ಇವರಿಬ್ಬರಿಗೂ ದಾರಿ ಮಾಡಿಕೊಡಲು ಯುವ ಬೌಲರ್ ಹರ್ಷಿತ್ ರಾಣ ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ ಅವರು ಬೆಂಜ್ ಕಾಯ ಬೇಕಾಗಬಹುದು. ಸಂಜು ಸ್ಯಾಮ್ಸನ್ ಬದಲಿಗೆ ತಂಡದ ಸಮತೋಲನ ಕಾಪಾಡಲು ಆಲ್ರೌಂಡರ್ ಅಕ್ಷರ ಪಟೇಲ್ ಅವರನ್ನು ಸೇರಿಸಿಕೊಳ್ಳುವ ಸಾಧ್ಯತೆ ಇದೆ, ಅಕ್ಷರ್ ಪಟೇಲ್ ಬರುವುದರಿಂದ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ತಂಡಕ್ಕೆ ಬಲ ಸಿಗಲಿದೆ.
ಕಿವೀಸ್ ಪಡೆಯನ್ನು ಕಂಗೆಡಿಸಿದ ಭಾರತದ ಬ್ಯಾಟಿಂಗ್
ಈ ಸರಣಿಯುದ್ದಕ್ಕೂ ಭಾರತ ತಂಡ ಅದ್ಭುತ ಪ್ರಾಬಲ್ಯ ಮೆರೆದಿದೆ.
* ಮೊದಲ ಪಂದ್ಯ: 48 ರನ್‌ಗಳ ಭರ್ಜರಿ ಜಯ.
* ಎರಡನೇ ಪಂದ್ಯ: 7 ವಿಕೆಟ್‌ಗಳ ಸುಲಭ ಜಯ.
* ಮೂರನೇ ಪಂದ್ಯ: 8 ವಿಕೆಟ್‌ಗಳ ಗೆಲುವು.
ವಿಶೇಷವಾಗಿ 3ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ್ದ 154 ರನ್‌ಗಳ ಗುರಿಯನ್ನು ಭಾರತ ಕೇವಲ 10 ಓವರ್‌ಗಳಲ್ಲಿ ಬೆನ್ನಟ್ಟಿ ವಿಶ್ವದಾಖಲೆ ಬರೆದಿತ್ತು. ಅಭಿಷೇಕ್ ಶರ್ಮಾ (68*) ಮತ್ತು ಸೂರ್ಯಕುಮಾರ್ ಯಾದವ್ (57*) ಅವರ ಸ್ಫೋಟಕ ಬ್ಯಾಟಿಂಗ್ ಮುಂದೆ ಕಿವೀಸ್ ಬೌಲರ್‌ಗಳು ಮಂಕಾಗಿದ್ದರು. ಇದೇ ಆತ್ಮವಿಶ್ವಾಸದೊಂದಿಗೆ ಭಾರತ 4ನೇ ಪಂದ್ಯದಲ್ಲೂ ಗೆದ್ದು ಬೀಗಲು ನೋಡುತ್ತಿದೆ.
ಭಾರತದ ಸಂಭಾವ್ಯ ಪ್ಲೇಯಿಂಗ್ XI (Probable Playing XI)
4ನೇ ಪಂದ್ಯಕ್ಕೆ ಕಣಕ್ಕಿಳಿಯಲಿರುವ ಭಾರತದ ಸಂಭಾವ್ಯ ತಂಡ ಈ ಕೆಳಗಿನಂತಿದೆ:
* ಅಭಿಷೇಕ್ ಶರ್ಮಾ
* ಇಶಾನ್ ಕಿಶನ್ (ವಿಕೆಟ್ ಕೀಪರ್)
* ಸೂರ್ಯಕುಮಾರ್ ಯಾದವ್ (ನಾಯಕ)
* ಶಿವಂ ದುಬೆ
* ರಿಂಕು ಸಿಂಗ್
* ಹಾರ್ದಿಕ್ ಪಾಂಡ್ಯ
* ಅಕ್ಷರ್ ಪಟೇಲ್
* ರವಿ ಬಿಷ್ಣೋಯ್
* ವರುಣ್ ಚಕ್ರವರ್ತಿ
* ಅರ್ಷದೀಪ್ ಸಿಂಗ್
* ಜಸ್ಪ್ರೀತ್ ಬುಮ್ರಾ
Views: 0