IND vs NZ: ಭಾರತ ವಿರುದ್ಧದ ಟಿ20 ಸರಣಿಗೆ ಕಿವೀಸ್ ತಂಡ ಪ್ರಕಟ; ಸ್ಪಿನ್ ಆಲ್​ರೌಂಡರ್​ಗೆ ತಂಡದ ನಾಯಕತ್ವ

IND vs NZ t20 series Uncapped pacer named in New Zealands T20I squad for India tour

ಪ್ರಸ್ತುತ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯನ್ನಾಡುತ್ತಿರುವ ಟೀಂ ಇಂಡಿಯಾ (India Vs Sri Lanka), ಈ ಸರಣಿ ಬಳಿಕ ಕಿವೀಸ್ ವಿರುದ್ಧ ಭಾರತದಲ್ಲಿಯೇ ಸೆಣಸಾಡಲಿದೆ. ಈ ಪ್ರವಾಸದಲ್ಲಿ ಎರಡು ತಂಡಗಳ ನಡುವೆ ಏಕದಿನ ಮತ್ತು ಟಿ20 ಸರಣಿಗಳು ನಡೆಯಲಿವೆ. ಈ ಪ್ರವಾಸಕ್ಕಾಗಿ ನ್ಯೂಜಿಲೆಂಡ್ (New Zealand) ತಂಡ ತನ್ನ ಟಿ20 ತಂಡವನ್ನು ಪ್ರಕಟಿಸಿದೆ. ಅಚ್ಚರಿಯ ಸಂಗತಿಯೆಂದರೆ, ಕಿವೀಸ್ ಟಿ20 ತಂಡದಲ್ಲಿ ಖಾಯಂ ನಾಯಕ ಕೇನ್ ವಿಲಿಯಮ್ಸನ್ (Kane Williamson) ಮತ್ತು ಉಪನಾಯಕ ಟಿಮ್ ಸೌಥಿ (Tim Southee) ಹೆಸರಿಲ್ಲ. ಅವರ ಬದಲಿಗೆ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ನಾಯಕತ್ವವನ್ನು ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ (Mitchell Santner) ಅವರಿಗೆ ವಹಿಸಲಾಗಿದೆ.

ಕಿವೀ ಬೋರ್ಡ್ ಭಾರತ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ತನ್ನ ತಂಡವನ್ನು ಪ್ರಕಟಿಸಿದ್ದು, ಇದರಲ್ಲಿ ಕೆಲವು ಹೊಸ ಆಟಗಾರರಿಗೂ ಅವಕಾಶ ಸಿಕ್ಕಿದೆ. 16 ಸದಸ್ಯರ ಈ ತಂಡದಲ್ಲಿ, ಡೆವೊನ್ ಕಾನ್ವೇ, ಫಿನ್ ಅಲೆನ್, ಗ್ಲೆನ್ ಫಿಲಿಪ್ಸ್ ಅವರಂತಹ ಪ್ರಮುಖ ಬ್ಯಾಟ್ಸ್‌ಮನ್‌ಗಳು ಮತ್ತು ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಲಾಕಿ ಫರ್ಗುಸನ್ ಅವರಂತಹ ಬೌಲರ್‌ಗಳು ಈ ತಂಡದ ಭಾಗವಾಗಿದ್ದಾರೆ.

IND vs SL: ಸರಣಿ ಗೆದ್ದ ಬಳಿಕ ಫ್ಯಾನ್ಸ್ ಮುಂದೆ ಭರ್ಜರಿ ಸ್ಟೆಪ್ ಹಾಕಿದ ಕೊಹ್ಲಿ- ಕಿಶನ್; ವಿಡಿಯೋ ನೋಡಿ

ಸ್ಯಾಂಟ್ನರ್​ಗೆ ತಂಡದ ನಾಯಕತ್ವ

ನ್ಯೂಜಿಲೆಂಡ್ ತಂಡ ಪ್ರಸ್ತುತ ಪಾಕಿಸ್ತಾನ ಪ್ರವಾಸದಲ್ಲಿದೆ. ಅಲ್ಲಿ ಮೊದಲು ಟೆಸ್ಟ್, ನಂತರ ಈಗ ಏಕದಿನ ಸರಣಿಯನ್ನು ಆಡುತ್ತಿದೆ. ಈ ಪ್ರವಾಸದ ನಂತರ, ನ್ಯೂಜಿಲೆಂಡ್ ಭಾರತಕ್ಕೆ ಬರಲಿದೆ. ಅಲ್ಲಿ ಮೊದಲು ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಾಗುತ್ತದೆ. ನಂತರ ಟಿ20 ಆಕ್ಷನ್ ಪ್ರಾರಂಭವಾಗುತ್ತದೆ. ಆದಾಗ್ಯೂ, ಈ ಎರಡೂ ಸರಣಿಗಳಲ್ಲಿ ತಂಡದ ಮುಖ್ಯ ನಾಯಕ ಕೇನ್ ವಿಲಿಯಮ್ಸನ್‌ಗೆ ವಿಶ್ರಾಂತಿ ನೀಡಲಾಗಿದ್ದು, ಅವರು ಪಾಕಿಸ್ತಾನದಿಂದಲೇ ದೇಶಕ್ಕೆ ಮರಳಲಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ 80 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿರುವ ಹಿರಿಯ ಸ್ಪಿನ್ ಆಲ್ ರೌಂಡರ್ ಸ್ಯಾಂಟ್ನರ್ ಅವರಿಗೆ ತಂಡದ ನಾಯಕತ್ವ ವಹಿಸಲಾಗಿದೆ. ಈ ಹಿಂದೆ 11 ಟಿ20 ಪಂದ್ಯಗಳಲ್ಲಿ ನ್ಯೂಜಿಲೆಂಡ್ ತಂಡದ ನಾಯಕತ್ವ ವಹಿಸಿದ್ದ ಅನುಭವವನ್ನು ಸ್ಯಾಂಟ್ನರ್ ಹೊಂದಿದ್ದಾರೆ.

27 ವರ್ಷದ ವೇಗಿಗೆ ಸ್ಥಾನ

ನಾವು ತಂಡದಲ್ಲಿ ಹೊಸ ಮುಖಗಳ ಬಗ್ಗೆ ಮಾತನಾಡಿದರೆ, ಕಿವೀ ಆಯ್ಕೆಗಾರರು ನ್ಯೂಜಿಲೆಂಡ್ ತಂಡದಲ್ಲಿ ಮೊದಲ ಬಾರಿಗೆ 27 ವರ್ಷದ ವೇಗದ ಬೌಲರ್ ಬೆನ್ ಲಿಸ್ಟರ್​ಗೆ ಮಣೆ ಹಾಕಿದ್ದಾರೆ. ಎಡಗೈ ಸ್ವಿಂಗ್ ಬೌಲರ್ ಕಳೆದ ವರ್ಷ ನ್ಯೂಜಿಲೆಂಡ್ ಎ ತಂಡದೊಂದಿಗೆ ಭಾರತ ಪ್ರವಾಸ ಕೈಗೊಂಡಿದ್ದರು. ಈ ಆಕ್ಲೆಂಡ್ ಬೌಲರ್ ಕಳೆದ ವರ್ಷ ತಂಡದ ಅತ್ಯುತ್ತಮ ಬೌಲರ್ ಎನಿಸಿಕೊಂಡಿದ್ದು, ಆಡಿರುವ 39 ಟಿ20 ಪಂದ್ಯಗಳಲ್ಲಿ 40 ವಿಕೆಟ್ ಪಡೆದಿದ್ದಾರೆ.

ಇವರಲ್ಲದೆ, ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಪಾದಾರ್ಪಣೆ ಮಾಡಿದ ಹೆನ್ರಿ ಶಿಪ್ಲಿ ಕೂಡ ಈ ಪ್ರವಾಸಕ್ಕೆ ಸ್ಥಾನ ಪಡೆದಿದ್ದಾರೆ. ಉಭಯ ತಂಡಗಳ ನಡುವಿನ ಏಕದಿನ ಸರಣಿಯು ಜನವರಿ 18 ರಿಂದ ಪ್ರಾರಂಭವಾಗಲಿದ್ದು, ನಂತರ ಜನವರಿ 27, ಜನವರಿ 29 ಮತ್ತು ಫೆಬ್ರವರಿ 1 ರಂದು 3 ಟಿ20 ಪಂದ್ಯಗಳು ನಡೆಯಲಿವೆ.

ನ್ಯೂಜಿಲೆಂಡ್ ಟಿ20 ತಂಡ

ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್ವೆಲ್, ಮಾರ್ಕ್ ಚಾಪ್ಮನ್, ಡೇನ್ ಕ್ಲೀವರ್, ಡೆವೊನ್ ಕಾನ್ವೇ, ಜಾಕೋಬ್ ಡಫಿ, ಲಾಕಿ ಫರ್ಗುಸನ್, ಬೆನ್ ಲಿಸ್ಟರ್, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮೈಕೆಲ್ ರಿಪ್ಪನ್, ಹೆನ್ರಿ ಶಿಪ್ಲಿ, ಇಶ್ ಸೋಧಿ, ಬ್ಲೇರ್ ಟಿಕ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/ind-vs-nz-t20-series-uncapped-pacer-named-in-new-zealands-t20i-squad-for-india-tour-psr-au14-500743.html

Leave a Reply

Your email address will not be published. Required fields are marked *