
Champions Trophy 2025: 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ನ್ಯೂಜಿಲೆಂಡ್ನ್ನು ಸೋಲಿಸಿ ಮೂರನೇ ಬಾರಿಗೆ ಪ್ರಶಸ್ತಿ ಗೆದ್ದಿದೆ. ಕಿವೀಸ್ ತಂಡದ ರಚಿನ್ ರವೀಂದ್ರ ಅತಿ ಹೆಚ್ಚು ರನ್ ಗಳಿಸಿ ಗೋಲ್ಡನ್ ಬ್ಯಾಟ್ ಮತ್ತು ಪಂದ್ಯಾವಳಿಯ ಅತ್ಯುತ್ತಮ ಆಟಗಾರ ಪ್ರಶಸ್ತಿಗಳನ್ನು ಪಡೆದರು. ಶ್ರೇಯಸ್ ಅಯ್ಯರ್ ಮತ್ತು ವಿರಾಟ್ ಕೊಹ್ಲಿ ಕೂಡ ಗೋಲ್ಡನ್ ಬ್ಯಾಟ್ ರೇಸ್ನಲ್ಲಿದ್ದರು. ಆದರೆ ಸ್ವಲ್ಪ ಅಂತರದಿಂದ ಗೋಲ್ಡನ್ ಬ್ಯಾಟ್ ಗೆಲ್ಲುವುದರಿಂದ ವಂಚಿತರಾದರು.





