ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ ಟೀಂ ಇಂಡಿಯಾ ಗೆಲುವಿನೊಂದಿಗೆ ಟೂರ್ನಿಯನ್ನು ಆರಂಭಿಸಿದೆ. ಪಾಕ್ ಸದೆ ಬಡಿದ ಭಾರತೀಯ ವನಿತೆಯರು 7 ವಿಕೆಟ್‌ಗಳಿಂದ ಗೆದ್ದು ಭರ್ಜರಿ ದಿಗ್ವಿಜಯ ಸಾಧಿಸಿದ್ದಾರೆ.

ಶ್ರೀಲಂಕಾದ ಡಂಬುಲ್ಲಾ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ 2024ರ ಮಹಿಳಾ ಏಷ್ಯಾಕಪ್ ಟೂರ್ನಿಯ ಎ ಗುಂಪಿನ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ವನಿತೆಯರು ಗೆದ್ದು ಬೀಗಿದ್ದಾರೆ. ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಅಬ್ಬರದ ಬ್ಯಾಟಿಂಗ್ ಪ್ರದರ್ಶನದಿಂದ ಭಾರತ ತಂಡ ಪಾಕ್ ಎದುರು ಗೆದ್ದು ಬೀಗಿದೆ. ಪಾಕಿಸ್ತಾನ ನೀಡಿದ್ದ 109ರನ್ ಗುರಿಯನ್ನ ಭಾರತ ವನಿತೆಯರು 14.1 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಯಶಸ್ವಿಯಾಗಿ ಬೆನ್ನಟ್ಟಿದೆ. ಈ ಮೂಲಕ ಟೀಮ್ ಇಂಡಿಯಾ ಮಹಿಳಾ ಏಷ್ಯಾಕಪ್ 2024ರಲ್ಲಿ ಮೊದಲು ಗೆಲುವು ಸಾಧಿಸಿದೆ. ಮಹಿಳಾ ಏಷ್ಯಾಕಪ್ ಇತಿಹಾಸದಲ್ಲಿ ಪಾಕಿಸ್ತಾನ ವಿರುದ್ಧ ಆಡಿರುವ 7 ಪಂದ್ಯದಲ್ಲಿ 6 ರಲ್ಲಿ ಜಯಗಳಿಸಿ ಹರ್ಮನ್‌ಪ್ರೀತ್ ಕೌರ್ ಪಡೆ ಗೆದ್ದು ಬೀಗಿದೆ.
ಸ್ಮೃತಿ ಮಂಧಾನ ಅಬ್ಬರ ಬ್ಯಾಟಿಂಗ್!
109 ರನ್‌ಗಳ ಗುರಿ ಬೆನ್ನತ್ತಲು ಬ್ಯಾಟಿಂಗ್‌ಗೆ ಬಂದ ಸ್ಮೃತಿ ಮಂಧಾನ 31 ಎಸೆತಗಳಲ್ಲಿ 9 ಭರ್ಜರಿ ಬೌಂಡರಿ ಬಾರಿಸಿ 45 ರನ್‌ಗಳಿಸಿದ್ರು. ಅರ್ಧಶತಕ ಹೊಸ್ತಿಲಲ್ಲಿ ಎಡವಿದ್ರು. ಬಳಿಕ ಸ್ಕ್ರೀಜ್‌ಗೆ ಬಂದ ದಯಾಳನ್ ಹೇಮಲತಾ ಅವರು ಶಫಾಲಿ ವರ್ಮಾ ಜೊತೆಗೂಡಿ ಉತ್ತಮ ಇನ್ನಿಂಗ್ಸ್ ಆಡಿದರು. ಅಬ್ಬರದಿಂದ ಬ್ಯಾಟ್ ಬೀಸಿದ ಶಫಾಲಿ 30 ಎಸೆತಗಳಲ್ಲಿ 6 ಬೌಂಡರಿ ಹಾಗು 1 ಸಿಕ್ಸರ್ ಮೂಲಕ 40 ರನ್ ಗಳಿಸಿ ವಿಕೆಟ್ ಕಳೆದುಕೊಂಡರು.
ಹೇಮಲತಾ (14) ರನ್‌ಗಳಿಸಿ ಔಟಾದರು. ಕೊನೆಯಲ್ಲಿ ಹರ್ಮನ್‌ಪ್ರೀತ್ ಕೌರ್ (5) ಹಾಗು ಜೆಮಿಮಾ ರಾಡ್ರಿಗಸ್ (3) ಭಾರತಕ್ಕೆ ಗೆಲ್ಲಲು ನೆರವಾದರು.
ಭಾರತ ವನಿತೆಯರ ಭರ್ಜರಿ ಬೌಲಿಂಗ್!
ಭರ್ಜರಿ ಬೌಲಿಂಗ್ ದಾಳಿ ನಡೆಸಿ ಭಾರತ ಮಹಿಳಾ ತಂಡದ ಬೌಲರ್ಸ್ ಪಾಕಿಸ್ತಾನವನ್ನು ಆಲೌಟ್ ಆದ್ರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ 19.2 ಓವರ್‌ಗಳಲ್ಲಿ ಕೇವಲ 108 ರನ್‌ಗಳಿಗೆ ಆಲೌಟ್ ಆಗಿದ್ರು.
ಟೀಮ್ ಇಂಡಿಯಾ ಪರ ದೀಪ್ತಿ ಶರ್ಮಾ 3 ವಿಕೆಟ್ ಕಬಳಿಸಿ ಮಿಂಚಿದರು. ಇನ್ನೊಂದೆಡೆ ಪೂಜಾ ವಸ್ತ್ರಾಕರ್, ಶ್ರೇಯಾಂಕ ಪಾಟೀಲ್ ಮತ್ತು ರೇಣುಕಾ ಠಾಕೂರ್ ಸಿಂಗ್ ತಲಾ 2 ವಿಕೆಟ್ ಪಡೆದರು.
ಭಾರತ ಪ್ಲೇಯಿಂಗ್ 11: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ದಯಾಳನ್ ಹೇಮಲತಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್‌ಕೀಪರ್), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ಶ್ರೇಯಾಂಕ ಪಾಟೀಲ್, ರೇಣುಕಾ ಠಾಕೂರ್ ಸಿಂಗ್.
ಪಾಕಿಸ್ತಾನ ಪ್ಲೇಯಿಂಗ್ 11: ಸಿದ್ರಾ ಅಮೀನ್, ಗುಲ್ ಫಿರೋಜಾ, ಮುನೀಬಾ ಅಲಿ(ವಿಕೆಟ್‌ಕೀಪರ್), ನಿದಾ ದಾರ್(ನಾಯಕಿ), ಅಲಿಯಾ ರಿಯಾಜ್, ಇರಾಮ್ ಜಾವೇದ್, ಫಾತಿಮಾ ಸನಾ, ತುಬಾ ಹಸನ್, ಸಾದಿಯಾ ಇಕ್ಬಾಲ್, ನಶ್ರಾ ಸಂಧು, ಸೈಯದಾ ಅರೂಬ್ ಶಾ.