ಟೀಂ ಇಂಡಿಯಾ 30 ಎಸೆತಗಳಲ್ಲಿ 50 ರನ್ ಗಳಿಸಿದ ಅಂಬಾಟಿ ರಾಯುಡು ಹಾಗೂ ಕೇವಲ 16 ಎಸೆತಗಳಲ್ಲಿ ನಿರ್ಣಾಯಕ 30 ರನ್ ಗಳಿಸಿದ ಯೂಸುಫ್ ಪಠಾಣ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ 157 ರನ್ ಗುರಿಯನ್ನು 5 ಎಸೆತಗಳು ಬಾಕಿ ಇರುವಂತೆಯೇ ತಲುಪಿ ಐತಿಹಾಸಿಕ ಗೆಲುವು ಪಡೆದುಕೊಂಡಿದೆ.

ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (World Championship of Legends 2024 ) ಟೂರ್ನಿಯಲ್ಲಿ ಯುವರಾಜ್ ಸಿಂಗ್ ನೇತೃತ್ವದ ಭಾರತ ತಂಡ ಪಾಕಿಸ್ತಾನ ತಂಡ ವಿರುದ್ಧ ಫೈನಲ್‌ನಲ್ಲಿ ಗೆದ್ದು ಬೀಗಿದೆ.
ಮುಖಾಮುಖಿಯಾಗುತ್ತಿವೆ. ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್‌ನ ಮಾಜಿ ಕ್ರಿಕೆಟಿಗರು ಈ ಲೀಗ್‌ನಲ್ಲಿ ಭಾಗವಹಿಸಿದ್ದರು. ಸೆಮಿಸ್‌ನಲ್ಲಿ ಪಾಕಿಸ್ತಾನ ವೆಸ್ಟ್ ಇಂಡೀಸ್ ವಿರುದ್ಧ ಮತ್ತು ಭಾರತ ಆಸ್ಟ್ರೇಲಿಯಾ ವಿರುದ್ಧ ಜಯಗಳಿಸಿತ್ತು. ಶನಿವಾರ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ 2024 ರ ಫೈನಲ್‌ನಲ್ಲಿ ಪಾಕಿಸ್ತಾನ ತಂಡಕ್ಕೆ ಸೋಲುಣಿಸಿ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಟೀಂ ಇಂಡಿಯಾ 30 ಎಸೆತಗಳಲ್ಲಿ 50 ರನ್ ಗಳಿಸಿದ ಅಂಬಾಟಿ ರಾಯುಡು ಹಾಗೂ ಕೇವಲ 16 ಎಸೆತಗಳಲ್ಲಿ ನಿರ್ಣಾಯಕ 30 ರನ್ ಗಳಿಸಿದ ಯೂಸುಫ್ ಪಠಾಣ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ 157 ರನ್ ಗುರಿಯನ್ನು 5 ಎಸೆತಗಳು ಬಾಕಿ ಇರುವಂತೆಯೇ ತಲುಪಿ ಐತಿಹಾಸಿಕ ಗೆಲುವು ಪಡೆದುಕೊಂಡಿದೆ.
ಭಾರತ ತಂಡದ ಆರಂಭಿಕ ಆಟಗಾರರ ವಿಕೆಟ್ ಅನ್ನು ಕಬಳಿಸಿದ ಆಮೆರ್ ಯಾಮಿನ್ ಪಾಕಿಸ್ತಾನ ತಂಡವನ್ನು ಪಂದ್ಯದಲ್ಲಿ ಜೀವಂತವಾಗಿ ಇರುವಂತೆ ಮಾಡಿದ್ದರು. ಆದರೆ ಸೊಹೈಲ್ ಖಾನ್ ಮತ್ತು ಸೊಹೈಲ್ ತನ್ವೀರ್ ಅವರು ವಿಕೆಟ್ ತೆಗೆದುಕೊಳ್ಳಲು ವಿಫಲರಾಗಿದ್ದು, ಭಾರತ ತಂಡದ ಗೆಲುವು ಕಾರಣವಾಯ್ತು ಅಂತ ಹೇಳಬಹುದು.
ಫೈನಲ್ ಓವರ್: ಭಾರತ ಗೆಲುವಿಗೆ ಕೊನೆಯ ಓವರ್ ನಲ್ಲಿ 6 ಎಸೆತಗಳಲ್ಲಿ ಕೇವಲ 2 ರನ್ ಗಳ ಅಗತ್ಯವಿತ್ತು. ಇರ್ಫಾನ್ ಪಠಾಣ್ ಓವರ್ ನ ಮೊದಲ ಎಸೆತದಲ್ಲೇ ಬೌಂಡರಿ ಸಿಡಿಸಿ ತಂಡಕ್ಕೆ ಗೆಲುವು ತಂಡುಕೊಟ್ಟರು. ಇದರೊಂದಿಗೆ ಟೀಂ ಇಂಡಿಯಾ 19.1 ಓವರ್ ನಲ್ಲಿ 5 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿ ಐದು ಎಸೆತಗಳು ಬಾಕಿ ಇರುವಂತೆಯೇ ಐದು ವಿಕೆಟ್ ಗಳಿಂದ ಗೆಲುವು ಪಡೆದುಕೊಂಡಿತ್ತು.
ಇದಕ್ಕೂ ಮುನ್ನ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಯೂನಿಸ್ ಖಾನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಭಾರತಕ್ಕೆ ಬೌಲ್ ಮಾಡಲು ಅವಕಾಶ ನೀಡಿದ್ದರು. ಪಾಕಿಸ್ತಾನ ಪರ ಶೋಯೆಬ್ ಮಲಿಕ್ 36 ಎಸೆತಗಳಲ್ಲಿ 41 ರನ್, ಅಕ್ಮಲ್ 19 ಎಸೆತಗಳಲ್ಲಿ 24 ರನ್, ಸಾಹಿಬ್ ಮಸೂದ್ 12 ಎಸೆತಗಳಲ್ಲಿ 21 ರನ್, ಮಿಸ್ಬಾ ಉಲ್ ಹಕ್ 15 ಎಸೆತಗಳಲ್ಲಿ 28 ರನ್ ಗಳಿಸಿದ ಪರಿಣಾಮ ನಿಗದಿತ 20 ಓವರ್ ಗಳಲ್ಲಿ ಪಾಕಿಸ್ತಾನ 6 ವಿಕೆಟ್ ಕಳೆದುಕೊಂಡು 156 ರನ್ ಗಳಿಸಿತ್ತು.
ಟೀಂ ಇಂಡಿಯಾ ಪರ ಅನುರೀತ್ ಸಿಂಗ್ 4 ಓವರ್ ಗಳಲ್ಲಿ 43 ನೀಡಿ 3 ವಿಕೆಟ್, ವಿನಯ್ ಕುಮಾರ್, ಇರ್ಫಾನ್ ಪಠಾಣ್ ಹಾಗೂ ಪವನ್ ನೇಗಿ ತಲಾ ಒಂದು ವಿಕೆಟ್ ಪಡೆದುಕೊಂಡರು. ಟೂರ್ನಿಯಲ್ಲಿ ಟೀಂ ಇಂಡಿಯಾ ಸ್ಥಿರ ಪ್ರದರ್ಶನ ನೀಡಲು ವಿಫಲವಾಗಿದ್ದರೂ ಅದೃಷ್ಟದೊಂದಿಗೆ ಸೆಮಿಫೈನಲ್ ಗೆ ಎಂಟ್ರಿ ಕೊಟ್ಟಿತ್ತು. ಆದರೆ ಸೆಮಿಸ್ ನಲ್ಲಿ ಆಸ್ಟ್ರೇಲಿಯಾ ತಂಡ ವಿರುದ್ಧ ಅಮೋಘ ಪ್ರದರ್ಶನ ನೀಡಿ ಫೈನಲ್ ಗೆ ಅರ್ಹತೆ ಪಡೆದುಕೊಂಡಿತ್ತು.
ಭಾರತ ತಂಡ ಟೂರ್ನಿಯಲ್ಲಿ ತನ್ನ ಮೊದಲ ಎರಡು ಪಂದ್ಯಗಳನ್ನು ಗೆದ್ದುಕೊಂಡಿತ್ತು. ಆದರೆ ಗ್ರೂಪ್ ಹಂತಗಳಲ್ಲಿ ಪಾಕಿಸ್ತಾನದ ವಿರುದ್ಧದ ಹೀನಾಯವಾಗಿ ಸೋಲುಡಿತ್ತು. ಆದರೆ ಆ ಬಳಿಕ ಮಹತ್ವದ ಪಂದ್ಯಗಳಲ್ಲಿ ಗೆಲುವು ಪಡೆದುಕೊಂಡಿತ್ತು. ಸೆಮಿಸ್ ಎಂಟ್ರಿ ಕೊಡುವ ವೇಳೆ ದಕ್ಷಿಣ ಆಫ್ರಿಕಾದೊಂದಿಗೆ ಸಮಾನವಾಗಿ ಅಂಕಗಳನ್ನು ಹೊಂದಿದ್ದ ಕಾರಣ ಉತ್ತಮ ರನ್ ರೇಟ್ ಮೇರೆಗೆ ಟೀಂ ಇಂಡಿಯಾ ನಾಕೌಟ್ ಹಂತಕ್ಕೆ ತಲುಪಿತ್ತು. ಅಲ್ಲದೇ ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್ ನಲ್ಲಿ ಸೂಪರ್ ಫಾರ್ಮ್‌ಗೆ ಮರಳಿದ ಟೀಂ ಇಂಡಿಯಾ ಫೈನಲ್ ಪ್ರವೇಶಿಸಿತ್ತು.
ಟೀಂ ಇಂಡಿಯಾ ತಂಡ: ರಾಬಿನ್ ಉತ್ತಪ್ಪ (WK), ಅಂಬಟಿ ರಾಯುಡು, ಸುರೇಶ್ ರೈನಾ, ಯುವರಾಜ್ ಸಿಂಗ್ (c), ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ಪವನ್ ನೇಗಿ, ವಿನಯ್ ಕುಮಾರ್, ಹರ್ಭಜನ್ ಸಿಂಗ್, ರಾಹುಲ್ ಶುಕ್ಲಾ, ಅನುರೀತ್ ಸಿಂಗ್.