Ind vs Pak, World Cup: ಪಾಕ್‌ ವಿರುದ್ಧ ಭಾರತಕ್ಕೆ ದಾಖಲೆಯ ಜಯ, ರೋಹಿತ್‌ ಅಬ್ಬರಕ್ಕೆ ಕಕ್ಕಾಬಿಕ್ಕಿಯಾದ ಬಾಬರ್ ಪಡೆ

Ind vs Pak, World Cup: ಸಾಂಪ್ರದಾಯಿಕ ಎದುರಾಳಿ ಪಾಕ್‌ ತಂಡವನ್ನು ಮತ್ತೊಮ್ಮೆ ಸೋಲಿಸುವ ಮೂಲಕ ಭಾರತ ತಂಡ ವಿಶ್ವಕಪ್‌ನಲ್ಲಿ ಸತತ 3ನೇ ಗೆಲುವು ಸಾಧಿಸಿದೆ.

ಏಕದಿನ ವಿಶ್ವಕಪ್‌ 2023ರ (World Cup 2023) 12ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ (IND vs PAK) ತಂಡಗಳು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮುಖಾಮುಖಿಮಾಗಿದ್ದವು. ಈ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕ್‌ ತಂಡವನ್ನು ಮತ್ತೊಮ್ಮೆ ಸೋಲಿಸುವ ಮೂಲಕ ಭಾರತ ತಂಡ ವಿಶ್ವಕಪ್‌ನಲ್ಲಿ ಸತತ 3ನೇ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ ತಂಡ 42.5 ಓವರ್‌ಗೆ 191 ರನ್‌ಗೆ ಆಲೌಟ್‌ ಆಯಿತು. ಈ ಸುಲಭ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಭರ್ಜರಿ ಬ್ಯಾಟಿಂಗ್‌ ಮಾಡುವ ಮೂಲಕ ವಿಶ್ವಕಪ್‌ ಇತಿಹಾಸದಲ್ಲಿ ಪಾಕ್ ವಿರುದ್ಧ 8ನೇ ಬಾರಿ ಗೆದ್ದುಬೀಗಿದೆ. ಈ ಪಂದ್ಯದಲ್ಲಿ ನಾಯಕ ರೋಹಿತ್‌ ಶರ್ಮಾ (Rohit Sharma) ಭರ್ಜರಿ ಬ್ಯಾಟಿಂಗ್‌ ಮಾಡುವ ಮೂಲಕ ಪಂದ್ಯದ ಗೆಲುವಿನ ಪ್ರಮುಖ ರುವಾರಿಯಾದರು. ಅಂತಿಮವಾಗಿ ಭಾರತ ತಂಡ 30.3 ಓವರ್‌ಗೆ 3 ವಿಕೆಟ್‌ ನಷ್ಟಕ್ಕೆ 192 ರನ್‌ ಗಳಿಸುವ ಮೂಲಕ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

ಪಾಕ್‌ ನೀಡಿದ ಸುಲಭ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭದಲ್ಲಿ ಕೊಂಚ ಹಿನ್ನಡೆಯಾದರೂ ರೋಹಿತ್‌ ಅಬ್ಬರದ ಮುಂದೆ ಯಾವುದೂ ಲೆಕ್ಕಕ್ಕೆ ಬಾರದಂತಾಯಿತು. ಡೆಂಗ್ಯೂ ಜ್ವರದ ಬಳಿಕ ಚೇತರಿಸಿಕೊಂಡು ಕಣಕ್ಕಿಳಿದ ಶುಭ್‌ಮನ್ ಗಿಲ್ 16 ರನ್ ಮತ್ತು ವಿರಾಟ್ ಕೊಹ್ಲಿ 16 ರನ್‌ ಗಳಿಸಿದರು. ಆದರೆ ಒಂದೆಡೆ ರೋಹಿತ್ ಶರ್ಮಾ ಅಬ್ಬರಿಸುವ ಮೂಲಕ ಭಾರತದ ಗೆಲುವನ್ನು ಖಚಿತಪಡಿಸಿದರು. ಅಂತಿಮವಾಗಿ ಹಿಟ್‌ಮ್ಯಾನ್ ರೋಹಿತ್ 63 ಎಸೆತದಲ್ಲಿ 6 ಸಿಕ್ಸ್ ಮತ್ತು 6 ಬೌಂಡರಿ ಮೂಲಕ 86 ರನ್‌ ಸಿಡಿಸಿ ವಿಕೆಟ್ ಒಪ್ಪಿಸಿದರು. ಉಳಿದಂತೆ ಶ್ರೇಯಸ್‌ ಅಯ್ಯರ್ ಸಹ 53 ರನ್‌ ಗಳ ಮೂಲಕ ಅರ್ಧಶತಕ ಸಿಡಿಸಿದರೆ, ಕೆಎಲ್ ರಾಹುಲ್ 19 ರನ್ ಗಳಿಸಿದರು.

ಬೌಲಿಂಗ್‌ ಅಬ್ಬರಿಸಿದ ಭಾರತೀಯರು:


ಟಾಸ್ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡ ಭಾರತ ತಂಡ ಪಾಕ್‌ ವಿರುದ್ಧ ಭರ್ಜರಿ ಬೌಲಿಂಗ್‌ ದಾಳಿ ನಡೆಸುವ ಮೂಲಕ ಪಾಕ್‌ ಆಟಗಾರರನ್ನು ಸರಿಯಾಗಿ ಬೆಂಡೆತ್ತಿತು. ಈ ವೇಳೆ ಭಾರತದ ಪರ ಕುಲ್‌ದೀಪ್‌ ಯಾದವ್ 10 ಓವರ್‌ಗೆ 35 ರನ್ ನೀಡಿ 2 ವಿಕೆಟ್, ಜಸ್ಪ್ರೀತ್‌ ಬುಮ್ರಾ 2 ವಿಕೆಟ್, ಮೊಹಮ್ಮದ್ ಸಿರಾಜ್ 2 ವಿಕೆಟ್, ಹಾರ್ದಿಕ್‌ ಪಾಂಡ್ಯ 2 ವಿಕೆಟ್ ಮತ್ತು ರವೀಂದ್ರ ಜಡೇಜಾ 2 ವಿಕೆಟ್ ಪಡೆದು ಪಾಕ್‌ ಕುಸಿತಕ್ಕೆ ಪ್ರಮುಖ ಕಾರಣೀಕರ್ತರಾದರು.

ಬ್ಯಾಟಿಂಗ್‌ನಲ್ಲಿ ಎಡವಿದ ಪಾಕ್:
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡವು ಭಾರತೀಯ ಬೌಲರ್‌ಗಳ ದಾಳಿಗೆ ತತ್ತರಿಸಿ ಹೋಯಿತು. ಮೊದಲು ಬ್ಯಾಟಿಂಗ್‌ ಆರಂಭಿಸಿದ ಪಾಕ್‌ ಮೊದಲ 10 ಓವರ್‌ನಲ್ಲಿ ಅಬ್ಬರಿಸುವ ಸೂಚನೆ ನೀಡಿತು. ಆದರೆ ಮೊಹಮ್ಮದ್ ಸಿರಾಜ್ ಮೊದಲ ವಿಕೆಟ್ ತೆಗೆಯುವ ಮೂಲಕ ಪಾಕ್‌ಗೆ ಆರಂಭಿಕ ಆಘಾತ ನೀಡಿದರು. ಆದರೂ ಬಾಬರ್ ಮತ್ತು ರಿಜ್ವಾನ್‌ ಉತ್ತಮ ಬ್ಯಾಟಿಂಗ್‌ ಮಾಡಿದರು. ಆದರೆ ಬಾಬರ್ ವಿಕೆಟ್ ಉರುಳುತ್ತಿದ್ದಂತೆ ಪಾಕ್‌ ಪೆವೆಲಿಯನ್‌ ಪೆರೇಡ್ ನಡೆಸಿತು. ಅಂತಿಮವಾಗಿ ಪಾಕಿಸ್ತಾನ ತಂಡದ ಪರ ಇಂದು ಅಬ್ದುಲ್ಲಾ ಶಫೀಕ್ 20 ರನ್, ಇಮಾಮ್-ಉಲ್-ಹಕ್ 36 ರನ್, ಬಾಬರ್ ಆ 58 ಎಸೆತದಲ್ಲಿ 7 ಬೌಮಡರಿ ಮೂಲಕ 50 ರನ್ ಮತ್ತು ಮೊಹಮ್ಮದ್ ರಿಜ್ವಾನ್‌ 49 ರನ್‌ ಗಳಿಸಿದರು. ಉಳಿದಂತೆ ಸೌದ್ ಶಕೀಲ್ 6 ರನ್, ಇಫ್ತಿಕರ್ ಅಹ್ಮದ್ 4 ರನ್, ಶಾದಾಬ್ ಖಾನ್ 2 ರನ್, ಮೊಹಮ್ಮದ್ ನವಾಝ್ 4 ರನ್ ಮತ್ತು ಹಸನ್ ಅಲಿ 12 ರನ್‌ ಗಳಿಸಿದರು.

Source : https://kannada.news18.com/news/sports/ind-vs-pak-world-cup-2023-team-india-won-by-7-wickets-skb-1395199.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

 WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Views: 0

Leave a Reply

Your email address will not be published. Required fields are marked *