IND vs PAK: ಪಕಸತನ ತಡ ಭರತದ ವರದಧ ಆಡಬರದ: ಜವದ ಮಯದದ

ಏಷ್ಯಾಕಪ್ (Asia Cup 2023) ಆಯೋಜನಾ ಸಮಸ್ಯೆ ಬಗೆಹರಿದಿದೆ. ಈ ಬಾರಿಯ ಏಷ್ಯಾಕಪ್​ ಅನ್ನು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ (PCB) ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಿದೆ. ಅದರಂತೆ ಪಾಕಿಸ್ತಾನ್ ಹಾಗೂ ಶ್ರೀಲಂಕಾದಲ್ಲಿ ಟೂರ್ನಿ ನಡೆಯಲಿದೆ. ಇಲ್ಲಿ ಭಾರತ ತಂಡವು (Team India) ತನ್ನೆಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. ಇತ್ತ ಭಾರತಕ್ಕಾಗಿ ಹೈಬ್ರಿಡ್ ಮಾದರಿಯನ್ನು ಮುಂದಿಟ್ಟು ಟೂರ್ನಿ ಆಯೋಜಿಸಲು ಮುಂದಾಗಿರುವ ಪಿಸಿಬಿ ನಡೆಯನ್ನು ಪಾಕಿಸ್ತಾನ್ ತಂಡದ ಮಾಜಿ ಆಟಗಾರ ಜಾವೇದ್ ಮಿಯಾಂದಾದ್ ಕಟುವಾಗಿ ಟೀಕಿಸಿದ್ದಾರೆ.ಈ ಬಗ್ಗೆ ಮಾತನಾಡಿರುವ ಮಿಯಾಂದಾದ್ಮ, ಬಿಸಿಸಿಐ ತನ್ನ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಒಪ್ಪುವವರೆಗೂ ಪಾಕ್ ತಂಡ ಭಾರತಕ್ಕೆ ಪ್ರವಾಸ ಮಾಡಬಾರದು. ಅಲ್ಲದೆ ಇದರಿಂದ ಪಾಕಿಸ್ತಾನಕ್ಕೆ ಯಾವುದೇ ನಷ್ಟವಾಗುವುದಿಲ್ಲ ಎಂದಿದ್ದಾರೆ.ನಾನು ಇಂತಹ ನಿರ್ಧಾರ ಕೈಗೊಳ್ಳುವ ಸ್ಥಾನದಲ್ಲಿ ಇದ್ದಿದ್ದರೆ, ಖಂಡಿತವಾಗಿಯೂ ಪಾಕಿಸ್ತಾನ್ ತಂಡವನ್ನು ಏಕದಿನ ವಿಶ್ವಕಪ್ ಆಡಲು ಭಾರತಕ್ಕೆ ಕಳುಹಿಸುತ್ತಿರಲಿಲ್ಲ. ನಾವು ಅವರೊಂದಿಗೆ ಆಡಲು ಯಾವಾಗಲೂ ಸಿದ್ಧರಿರುತ್ತೇವೆ. ಇದೇ ಕಾರಣದಿಂದಾಗಿ ಅವರು ಈ ರೀತಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಮಿಯಾಂದಾದ್ ಆಕ್ರೋಶ ಹೊರಹಾಕಿದ್ದಾರೆ.ಪಾಕಿಸ್ತಾನ್ ಕ್ರಿಕೆಟ್ ಬಹಳ ದೊಡ್ಡದಿದೆ. ನಾವು ಅತ್ಯುತ್ತಮ ಆಟಗಾರರನ್ನು ವಿಶ್ವ ಕ್ರಿಕೆಟ್​ಗೆ ನೀಡುತ್ತಿದ್ದೇವೆ. ಹೀಗಾಗಿ ಏಕದಿನ ವಿಶ್ವಕಪ್​ಗಾಗಿ ಭಾರತಕ್ಕೆ ಹೋಗದಿದ್ದರೂ ಪಾಕಿಸ್ತಾನಕ್ಕೆ ಯಾವುದೇ ನಷ್ಟವಾಗುವುದಿಲ್ಲ ಎಂದು ಜಾವೇದ್ ಮಿಯಾಂದಾದ್ ಅಭಿಪ್ರಾಯಪಟ್ಟಿದ್ದಾರೆ.ಇದಾಗ್ಯೂ ಈ ಬಾರಿಯ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್​ನಲ್ಲಿ ಭಾರತ-ಪಾಕಿಸ್ತಾನ್ ಮುಖಾಮುಖಿಯಾಗುವುದು ಖಚಿತ. ಏಷ್ಯಾಕಪ್​ನ ಲೀಗ್​ನಲ್ಲಿ ಮೊದಲ ಮುಖಾಮುಖಿಯಾದರೆ, ಆ ಬಳಿಕ ಸೂಪರ್​-4 ನಲ್ಲಿ 2ನೇ ಬಾರಿ ಮುಖಾಮುಖಿಯಾಗಬಹುದು. ಇನ್ನು ಉಭಯ ತಂಡಗಳು ಫೈನಲ್​ ಪ್ರವೇಶಿಸಿದರೆ ಮೂರನೇ ಬಾರಿ ಸೆಣಸಲಿದೆ.ಹಾಗೆಯೇ ಐಸಿಸಿ ಸಿದ್ಧಪಡಿಸಿರುವ ODI ವಿಶ್ವಕಪ್‌ನ ಕರಡು ವೇಳಾಪಟ್ಟಿಯ ಪ್ರಕಾರ, ಅಕ್ಟೋಬರ್ 15 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ-ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಆದರೆ ಈ ಮಹತ್ವದ ಟೂರ್ನಿಯಲ್ಲೂ ಭಾಗವಹಿಸಬಾರದೆಂಬ ಹೇಳಿಕೆ ನೀಡಿ ಇದೀಗ ಜಾವೇದ್ ಮಿಯಾಂದಾದ್ ಹೊಸ ವಿವಾದ ಹುಟ್ಟುಹಾಕಲು ಯತ್ನಿಸಿದ್ದಾರೆ.

source https://tv9kannada.com/photo-gallery/cricket-photos/javed-miandad-says-pakistan-not-to-tour-india-kannada-news-zp-604180.html

Leave a Reply

Your email address will not be published. Required fields are marked *