IND vs ZIM : ಟೀಂ ಇಂಡಿಯಾಗೆ ಭರ್ಜರಿ ಗೆಲುವು, ಅಗ್ನಿ ಪರೀಕ್ಷೆಯಲ್ಲಿ ಗೆದ್ದ ಯಂಗ್‌‌ಸ್ಟರ್ಸ್!

IND vs ZIM 5th T20: ಹರಾರೆಯಲ್ಲಿ ನಡೆದ ಭಾರತ ಮತ್ತು ಜಿಂಬಾಬ್ವೆ (IND vs ZIM) ನಡುವಿನ ಕೊನೆಯ 5 ನೇ T20 ನಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಗಳಿಸಿದೆ. ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ಚೇತರಿಸಿಕೊಂಡು ಎದುರಾಳಿಗಳ ಮುಂದೆ ಕಠಿಣ ಗುರಿ ನೀಡಿತ್ತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 167 ರನ್ ಗಳಿಸಿತು. ಸಂಜು ಸ್ಯಾಮ್ಸನ್ (45 ಎಸೆತಗಳಲ್ಲಿ 58; 1 ಬೌಂಡರಿ, 4 ಸಿಕ್ಸರ್) ಅರ್ಧಶತಕ ಗಳಿಸಿದರು. ಶಿವಂ ದುಬೆ (12 ಎಸೆತಗಳಲ್ಲಿ 26; 2 ಬೌಂಡರಿ, 2 ಸಿಕ್ಸರ್) ರನ್‌ಗಳಿಸಿದ್ರು. 167 ರನ್‌ಗಳ ಗುರಿ ಬೆನ್ನತ್ತಿದ್ದ ಜಿಂಬಾಬ್ವೆ ಕೇವಲ 125 ರನ್‌ಗಳಿಸುವ ಮೂಲಕ ಟೀಂ ಇಂಡಿಯಾ ಮುಂದೆ ಸೋಲೊಪ್ಪಿಕೊಂಡಿದೆ.

ಜಿಂಬಾಬ್ವೆ ತಂಡಕ್ಕೆ ಆರಂಭಿಕ ಆಘಾತ!

ಜಿಂಬಾಬ್ವೆ ತಂಡ 168 ರನ್‌ಗಳ ಗುರಿಯನ್ನು ಬೆನ್ನಟ್ಟಲು ಹೊರಟಿತ್ತು. ಮುಖೇಶ್ ಕುಮಾರ್ ಮೊದಲ ಓವರ್​ನಲ್ಲೇ ಶಾಕ್ ನೀಡಿದ್ದು ವೆಸ್ಲಿ ಮಾಧೆವೆರೆ ಖಾತೆ ತೆರೆಯದೆ ಔಟಾಗಿದ್ದಾರೆ. ಯಾನ್ ಬೆನೆಟ್ 10 ರನ್ ಗಳಿಸಿ ಔಟಾದರು. ಟಿ ಮರುಮಣಿ 27 ರನ್ ಗಳಿಸಿ ಔಟಾದರು. ವಾಷಿಂಗ್ಟನ್ ಸುಂದರ್ 9ನೇ ಓವರ್​ನಲ್ಲಿ ಮರುಮಣಿ ವಿಕೆಟ್ ಪಡೆದರು. ವಂ ದುಬೆ, ಡಿಯೋನ್ ಮೈಯರ್ಸ್ ಅವರ ವಿಕೆಟ್‌ ಪಡೆದುಕೊಂಡ್ರು.

ಭಾರತ ಬೌಲರ್ಸ್‌ಗಳ ಅಬ್ಬರ!

ಇದಾದ ಬಳಿಕ ನಾಯಕ ಸಿಕಂದರ್ ರಾಝಾ ರನ್ ಔಟ್ ಆದರು. ಶಿವಂ ದುಬೆ ಜೊನಾಥನ್ ಕ್ಯಾಂಪ್‌ಬೆಲ್ ಅವರ ವಿಕೆಟ್‌ ಅನ್ನು ಸಹ ಪಡೆದುಕೊಂಡ್ರು.ತುಷಾರ್ ದೇಶಪಾಂಡೆ ಬ್ರಾಂಡನ್ ಮಾವುಟಾ ಅವರ ವಿಕೆಟ್‌ ಪಡೆದುಕೊಂಡ್ರು. ಐದನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಭಾರತ 42 ರನ್‌ಗಳಿಂದ ಜಿಂಬಾಬ್ವೆಯನ್ನು ಸೋಲಿಸಿತು. 168 ರನ್‌ಗಳ ಗುರಿ ಬೆನ್ನತ್ತಿದ ಜಿಂಬಾಬ್ವೆ ತಂಡ 125 ರನ್‌ಗಳಿಗೆ ಸೀಮಿತವಾಯಿತು.

ಟೀಂ ಇಂಡಿಯಾ ಪ್ಲೇಯಿಂಗ್‌ 11: ಶುಭಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ರಿಯಾನ್ ಪರಾಗ್, ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ತುಷಾರ್ ದೇಶ್ ಪಾಂಡೆ, ಮುಖೇಶ್ ಕುಮಾರ್

ಜಿಂಬಾಬ್ವೆ ಪ್ಲೇಯಿಂಗ್‌ 11 : ವೆಸ್ಲಿ ಮಾಧೆವೆರೆ, ಮರುಮಣಿ, ಬ್ರಿಯಾನ್ ಬೆನೆಟ್, ಡಯಾನ್ ಮೇಯರ್ಸ್, ಸಿಕಂದರ್ ರಜಾ (ನಾಯಕ), ಜೊನಾಥನ್ ಕ್ಯಾಂಪ್‌ಬೆಲ್, ಫರಾಜ್ ಅಕ್ರಂ, ಕ್ಲೈವ್ ಮದಂಡೆ, ಬ್ರಾಂಡನ್ ಮಾವ್ಟಾ, ರಿಚರ್ಡ್ ನಗರವ, ಮುಜರಬಾನಿ

Source : https://kannada.news18.com/news/sports/ind-vs-zim-5th-t20-live-scores-india-vs-zimbabwe-5th-t20-match-updates-vdd-team-india-won-by-42-runs-vdd-1775113.html

Leave a Reply

Your email address will not be published. Required fields are marked *