ODI ವಿಶ್ವಕಪ್‌ ಸೋಲಿನ ಸೇಡು ತೀರಿಸಿಕೊಂಡ ಭಾರತ, ನಾಳೆ ಅಫ್ಘಾನ್‌ ಗೆದ್ರೆ ಸೆಮಿಸ್‌ನಿಂದ ಆಸೀಸ್‌ ಔಟ್‌!

ಇಂದು ಸೂಪರ್‌ 8 ರಣರೋಚಕ ಪಂದ್ಯದಲ್ಲಿ ರೋಹಿತ್‌ ಶರ್ಮಾ (Rohit Sharma) ನಾಯಕತ್ವದ ಭಾರತ (Team India) ಮತ್ತು ಮಿಚೆಲ್‌ ಮಾರ್ಷ್‌ (Mitchell Marsh) ನೇತೃತ್ವದ ಆಸ್ಟ್ರೇಲಿಯಾ (Australia) ನಡುವೆ ನಡೀತು. ಈ  ಟಾಸ್‌ ಗೆದ್ದ ಆಸ್ಟ್ರೇಲಿಯಾ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟ್‌ ಮಾಡಿದ ಟೀಂ ಇಂಡಿಯಾ 20 ಓವರ್‌‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಭರ್ಜರಿ 205 ರನ್‌ಗಳಿಸಿತ್ತು. 206 ರನ್‌‌ಗಳ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ ಭಾರತದ ಎದುರು ಮಂಡಿಯೂರಿದೆ. ಈ ಮೂಲಕ ODI ವಿಶ್ವಕಪ್‌ ಸೋಲಿನ ಸೇಡು ತೀರಿಸಿಕೊಂಡಿದೆ ಭಾರತ. ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 181 ರನ್‌‌ ಗಳಿಸುವ ಮೂಲಕ ಸೋಲೊಪ್ಪಿಕೊಳ್ತು.

ಆಸೀಸ್‌ಗೆ ಆರಂಭಿಕ ಆಘಾತ!

206 ರನ್‌ಗಳ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾಗೆ ಆರಂಭಿಕ ಆಘಾತ ಎದುರಾಯ್ತು. ತಂಡ 6 ರನ್‌ಗಳಿಸುವಷ್ಟರಲ್ಲಿ ಸ್ಫೋಟಕ ಬ್ಯಾಟ್ಸ್‌‌ಮೆನ್‌ ಡೇವಿಡ್ ವಾರ್ನರ್‌ ಔಟಾದ್ರು. ಇದಾದ ನಂತರ ಜೊತೆಯಾದ ಟ್ರಾವಿಸ್‌ ಹೆಡ್‌ ಹಾಗೂ ಮಿಚೆಲ್‌ ಮಾರ್ಷ್‌ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ಒಂದು ಹಂತದಲ್ಲಿ ಇವರಿಬ್ಬರ ಬ್ಯಾಟಿಂಗ್ ನೋಡಿ ಭಾರತಕ್ಕೆ ಸೋಲು ಅಂತಾನೇ ಎಲ್ಲರೂ ಅಂದುಕೊಂಡಿದ್ರು. ಇದೇ ವೇಳೆ ಅದ್ಭುತ ಕ್ಯಾಚ್ ಹಿಡಿದ ಅಕ್ಚರ್‌ ಆಸೀಸ್ ಗೆಲುವನ್ನು ಕಸಿದುಕೊಂಡ್ರೆ ಅಂದ್ರೆ ತಪ್ಪಾಗಲ್ಲ.

ಮಿಚೆಲ್ ಮಾರ್ಷ್‌ 37 ರನ್‌ಗಳಿಸಿ ಔಟಾದ್ರು. ಇದಾದ ಬಳಿಕ ಟ್ರಾವಿಸ್‌ ಹೆಡ್‌ ಜೊತೆ ಇನ್ನಿಂಗ್ಸ್‌ ಕಟ್ಟಿದ್ದು ಮ್ಯಾಕ್ಸ್‌ವೆಲ್‌. ಆದರೆ ಕುಲದೀಪ್‌ ಸ್ಪಿನ್‌ಗೆ 20 ರನ್‌ಗಳಿಸಿದ್ದ ಮ್ಯಾಕ್ಸ್‌ವೆಲ್‌ ಕ್ಲೀನ್‌ ಬೋಲ್ಡ್‌ ಆದ್ರು. ಇನ್ನೂ 76 ರನ್‌ಗಳಿಸಿದ್ದ ಡೇಂಜರಸ್‌ ಆಗಿ ಕಾಣ್ತಿದ್ದ ಟ್ರಾವಿಸ್‌ ಹೆಡ್‌ ಅವರನ್ನು ಬುಮ್ರಾ ಔಟ್ ಮಾಡಿದ್ರು. ಇಲ್ಲಿಗೆ ಭಾರತ ಪಕ್ಕಾ ಗೆಲ್ಲುತ್ತೆ ಅಂತ ಗೊತ್ತಾಯ್ತು.  ವೇಡ್‌ ಕೂಡ ಒಂದು ರನ್‌‌ಗಳಿಸಿ ಅರ್ಶ್‌ದೀಪ್‌ಗೆ ವಿಕೆಟ್‌ ಒಪ್ಪಿಸಿದ್ರು. ಟಿಮ್‌ ಡೇವಿಡ್‌ ಕೂಡ 15 ರನ್‌ಗಳಿಸಿ ಔಟಾದ್ರು.

ವಿರಾಟ್‌ ಡಕೌಟ್‌, ರೋಹಿತ್‌ ಶರ್ಮಾ ಬೊಂಬಾಟ್‌!

ವಿರಾಟ್‌‌ ಕೊಹ್ಲಿ ಔಟಾಗುತ್ತಿದ್ದಂತೆ ಅಭಿಮಾನಿಗಳು ಇಂದಿನ ಪಂದ್ಯದಲ್ಲಿ ಬಿಗ್‌ ಟಾರ್ಗೆಟ್ ಬರಲ್ಲ ಅಂದುಕೊಂಡಿದ್ರು. ಆದ್ರೆ ವಿರಾಟ್‌ ಕೊಹ್ಲಿ ಔಟಾಗುತ್ತಿದ್ದಂತೆ ರೊಚ್ಚಿಗೆದ್ದ ರೋಹಿತ್ ಶರ್ಮಾ ಆಸೀಸ್‌ ವಿರುದ್ಧ ಅಬ್ಬರಿಸಿ ಬೊಬ್ಬರಿದಿದ್ದಾರೆ. ಭರ್ಜರಿ ಶತಕ ಬಾರಿಸುವ ಮೂಲಕ ಹಿಟ್‌ ಮ್ಯಾನ್‌ ಕಂಬ್ಯಾಕ್‌ ಮಾಡಿದ್ದಾರೆ. ಎರಡನೇ ಓವರ್‌ನಿಂದಲೇ ರೊಚ್ಚಿಗೆದ್ದ ಹಿಟ್‌ಮ್ಯಾನ್‌ ದೊಡ್ಡ ಹೊಡೆತಗಳನ್ನೇ ಬಾರಿಸಿದ್ರು. ಮೂರನೇ ಓವರ್‌ನಲ್ಲಿಯೇ ಭರ್ಜರಿ 29 ರನ್‌ ಬಾರಿಸಿದ್ರು. ಇನ್ನೂ ಇದಾದ ಬಳಿಕ ಭರ್ಜರಿ ಸಿಕ್ಸರ್‌, ಬೌಂಡರಿ ಬಾರಿಸಿದ್ರು.

8 ರನ್‌ನಿಂದ ಶತಕ ಮಿಸ್‌!

ಇನ್ನೂ 92 ರನ್‌‌ಗಳಿಸಿ ರೋಹಿತ್‌ ಶರ್ಮಾ ಔಟಾದ್ರು. ಜಸ್ಟ್‌ 8 ರನ್‌‌ಗಳಿಂದ ವಿಶ್ವದಾಖಲೆ ಮಿಸ್ ಮಾಡಿಕೊಂಡ್ರು. ಟಿ20 ಅಂತಾರಾಷ್ಟ್ತೀಯದಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗ್ತಿದ್ರು. ಆದರೆ 92 ರನ್‌ಗಳಿಸಿದ್ದಾಗ ಮಿಚೆಲ್‌ ಸ್ಟಾರ್ಕ್‌ ಎಸೆದ ಚಂಡು ಫೇಸ್‌ ಮಾಡಲಾಗದೇ ಕ್ಲೀನ್‌ ಬೋಲ್ಡ್‌ ಆದ್ರು. ರೋಹಿತ್‌ ಶರ್ಮಾ 41 ಬಾಲ್‌ಗಳಲ್ಲಿ 92 ರನ್‌ಬಾರಿಸಿದ್ರು. ಆದ್ರೆ ಶತಕ ವಂಚಿತರಾದ್ರು. ಇನ್ನೂ ಪಂತ್‌‌ 15 ರನ್‌‌ಗಳಿಸಿ ಔಟಾದ್ರು. ಸೂರ್ಯ ಕುಮಾರ್‌ ಯಾದವ್‌ 16 ಬಾಲ್‌‌ಗಳಲ್ಲಿ 31 ರನ್‌ಗಳಿಸಿ ಔಟಾದ್ರು. ಶಿವಂ ದುಬೆ 22 ಬಾಲ್‌‌ ಎದುರಿಸಿ 28 ರನ್‌‌ಗಳಿಸಿ ಔಟಾದ್ರು.

ಆಸೀಸ್‌ ಬೌಲರ್‌‌ಗಳ ಬೆವರಿಳಿಸಿದ ಭಾರತದ ಬ್ಯಾಟರ್ಸ್‌!

ವಿರಾಟ್‌ ಕೊಹ್ಲಿ ವಿಕೆಟ್‌ ಪಡೆಯುತ್ತಿದ್ದಂತೆ ಆಸೀಸ್‌ ಬೌಲರ್‌ಗಳ ಮುಖದಲ್ಲಿ ನಗು ಮೂಡಿತ್ತು. ಆದ್ರೆ ರೋಹಿತ್‌ ಶರ್ಮಾ ಹಾಗೂ ಇತರೇ ಬ್ಯಾಟರ್ಸ್ ಆಸೀಸ್ ಬೌಲರ್‌ಗಳ ಬೆವರಿಳಿಸಿದ್ರು.

Source : https://kannada.news18.com/news/sports/t20-world-cup-super-8-ind-vs-aus-live-updates-team-india-beats-australia-by-24-runs-vdd-1752129.html

Leave a Reply

Your email address will not be published. Required fields are marked *