ಭಾರತ ದಾರ್ಶನಿಕರ, ಸಂತರ, ಶರಣರ ನಾಡಾಗಿದ್ದು, ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಸಂಸ್ಕಾರ ಹೆಚ್ಚಾಗಿದೆ: ಶ್ರೀ ಶಿವಲಿಂಗಾನಂದ ಮಹಾಸ್ವಾಮಿಗಳು.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಸೆ. 2: ಭಾರತ ದೇಶ ಪುಣ್ಯ ಭೂಮಿಯಾಗಿದೆ. ದಾರ್ಶನಿಕರ, ಸಂತರ, ಶರಣರ ನಾಡಾಗಿದೆ ಇಲ್ಲಿ ಶಾಂತಿಯನ್ನು ಬಯಸುವವರ ಸಂಖ್ಯೆಹೆಚ್ಚಿದೆ. ನಮ್ಮಲ್ಲಿ ಕೆಟ್ಟ ಗುಣಗಳನ್ನು ದೂರ ಮಾಡುವುದರ ಮೂಲಕ ಉತ್ತಮವಾದ ರಾಷ್ಟ್ರವನ್ನಾಗಿ ಮಾಡಬೇಕಿದೆ ಎಂದು ಶ್ರೀ ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾನಂದ ಮಹಾಸ್ವಾಮಿಗಳು ತಿಳಿಸಿದರು.

ನಗರದ ಶ್ರೀ ಸದ್ಗುರು ಕಬೀರಾನಂದಾಶ್ರಮದ ಆವರಣದಲ್ಲಿ ವಿಶ್ವ ಹಿಂದು ಪರಿಷದ್ ಸ್ಥಾಪನ ದಿನ ಹಾಗೂ “ಷಷ್ಠಿಪೂರ್ತಿ ಸಮಾರೋಪ” ಸಂಭ್ರಮದ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಶ್ರೀಕೃಷ್ಣನ ವೇಷಭೂಷಣ ಕಾರ್ಯಕ್ರಮದ ಪ್ರಯುಕ್ತ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಸಂಸ್ಕಾರ ಹೆಚ್ಚಾಗಿದೆ.

ಇದರಿಂದ ಇಲ್ಲಿ ಇನ್ನು ಸಂಬಂಧಗಳು ಉಳಿದಿವೆ. ಮನೆಯಲ್ಲಿ ಪೊಷಕರಿಗೆ, ಶಾಲೆಯಲ್ಲಿ ಗುರುಗಳಿಗೆ ವಿಧೇಯರಾಗಿ ನಡೆಯಬೇಕಿದೆ.ನಮ್ಮ ಭಾರತ ದೇಶ ಶಾಂತಿಯುತವಾದ ದೇಶವಾಗಿದೆ ಇಲ್ಲಿ ಹಿಂಸೆಗೆ ಜಾಗ ಇಲ್ಲದೆ ಅಹಿಂಸೆಯಿಂದ ಎಲ್ಲವನ್ನು ಪಡೆಯಬಹುದಾಗಿದೆ. ವಿಶ್ವ ಹಿಂದೂ ಪರಿಷದ್ ದೇಶದಲ್ಲಿ ಹಿಂದುತನವನ್ನು ಕಾಪಾಡುವ ಕಾರ್ಯವನ್ನು ಮಾಡುತ್ತಿದೆ. ಇದಕ್ಕೆ ಎಲ್ಲರು ಕೈ ಜೋಡಿಸಬೇಕಿದೆ ಎಂದು ತಿಳಿಸಿದರು.

ಕರ್ನಾಟಕ ದಕ್ಷಿಣದ ಬಜರಂಗದಳದ ಪ್ರಾಂತ ಸಂಯೋಜಕರಾದ ಪ್ರಭಂಜನ್ ಮಾತನಾಡಿ, ಧರ್ಮೋ ರಕ್ಷತಿ ರಕ್ಷಿತ: ಅನ್ನುವ ಧ್ಯಯ ವಾಕ್ಯದೊಂದಿಗೆ 1964 “ಶ್ರೀ ಕೃಷ್ಣ ಜನ್ಮಾಷ್ಟಮಿಯ” ಪರ್ವ ಕಾಲದಲ್ಲಿ ಸ್ಥಾಪಿಸಲ್ಪಟ್ಟ ವಿಶ್ವ ಹಿಂದೂ ಪರಿಷದ್ ಈಗ ಷಷ್ಟಿಪೂರ್ತಿ ಸಂಭ್ರಮ, ಸಮಸ್ತ ಹಿಂದೂ ಸಮಾಜದ ಅಸಮಾನತೆಯ ಭಾವನೆ ತೊಲಗಿಸಿ ನಾವೆಲ್ಲ ಹಿಂದು ನಾವೆಲ್ಲ ಒಂದು ಎಂಬ ಭಾವನೆ ಮೂಡಿಸಿ ವಿಶ್ವದೆಲ್ಲೆಡೆ ಸನಾತನ ಧರ್ಮದ ಹಿರಿಮೆಯನ್ನು ಪಸರಿಸಿ, ಸಂರಕ್ಷಣೆಯನ್ನು ಮಾಡಿ ನಿರಂತರ ಸೇವೆ ಸಲ್ಲಿಸುತ್ತಿರುವ ಈ ಸಂಘಟನೆಯ 60ನೇ ವರ್ಷದ ಆಚರಣೆ ನಡೆಯುತ್ತಿದೆ. ಹಿಂದೂಗಳ ರಕ್ಷಣೆಗಾಗಿ ವಿಶ್ವ ಹಿಂದೂ ಪರಿಷದ್ ಪೂರ್ಣ ಪ್ರಮಾಣದಲ್ಲಿ ಕೆಲಸವನ್ನು ಮಾಡುತ್ತಿದೆ. ರಾಮ ಮಂದಿರ ನಿರ್ಮಾಣದಲ್ಲಿ ಇದರ ಪಾಲು ಇದೆ. ಇದ್ದಲ್ಲದ ಭಯೋತ್ಪಾದಕರ ವಶದಲ್ಲಿದ್ದ ಅಮರನಾಥ್ ದೇವಾಲಯವನ್ನು ಭಕ್ತರು ಸದಾ ಹೋಗುವಂತೆ ಮಾಡಲಾಗಿದೆ ಇವೆಲ್ಲಾ ವಿಎಚ್.ಪಿ.ಯ ಕೂಡುಗೆಗಳಾಗಿವೆ ಎಂದರು.

ಹಿಂದುಗಳನ್ನು ರಕ್ಷಣೆ ಮಾಡುವುದು ಹಿಂದು ಧರ್ಮಕ್ಕೆ ಆಪತ್ತು ಬಂದಾಗ ರಕ್ಷಣೆ ಮಾಡುವುದು ಅಲ್ಲದೆ ಗುಡ್ಡುಗಾಡು ಪ್ರದೇಶದ ಮಕ್ಕಳಿಗೆ ಶಿಕ್ಷಣ ಹಾಗೂ ಆರೋಗ್ಯವನ್ನು ಸಹಾ ನೀಡಲಾಗಿದೆ. ನಮ್ಮ ಮಕ್ಕಳನ್ನು ಅಂಕಗಳಿಸುವ ಕೇಂದ್ರಗಳನ್ನಾಗಿ ಮಾತ್ರ ಮಾಡಲಾಗುತ್ತಿದೆ.

ಅವರಲ್ಲಿ ಸಂಸ್ಕಾರವನ್ನು ಕಲಿಸುವ ನಿಟ್ಟಿನಲ್ಲಿ ಹಿಂದೆ ಇದ್ದೇವೆ ಮಕ್ಕಳಿಗೆ ಸಂಸ್ಕಾರವನ್ನು ನೀಡಿದೆ ಉತ್ತಮ ಪ್ರಜೆಗಳಾಗಲು ಸಾಧ್ಯವಿದೆ ಎಂದ ಅವರು, ಮಕ್ಕಳನ್ನು ಧರ್ಮ ಕಾರ್ಯಕ್ಕೆ ತೂಡಗಿಸಬೇಕಿದೆ, ಸಂಸ್ಕಾರವನ್ನು ಕಲಿತ ಮಕ್ಕಳಿಗೆ ಎಲ್ಲಿಯೂ ಸಹಾ ಗೌರವ ಸಿಗುತ್ತದೆ, ಬೇರೆ ದೇಶಗಳಲ್ಲಿಯೂ ಸಹಾ ಸನ್ಮಾನಗಳು ಆಗುತ್ತವೆ, ದೇಶದ ಬಗ್ಗೆ ಕಾಳಜಿವಹಿಸುತ್ತಾರೆ ಕೃಷ್ಣನ ವೇಷವನ್ನು ಹಾಕಿಸಿರುವ ತಾಯಂದಿರುಗಳು ಆತನ ಬಗ್ಗೆ ತಮ್ಮ ಮಕ್ಕಳಿಗೆ ತಿಳಿಸುವ ಕೆಲಸವನ್ನು ಮಾಡಿ ಧರ್ಮವನ್ನು ನಾವುಗಳು ರಕ್ಷಣೇ ಮಾಡಿದರೆ ಅದು ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದು ತಿಳಿಸಿದರು.

ಟಾರ್ಗೆಟ್ ಯುವ ವೇದಿಕೆಯ ಅಧ್ಯಕ್ಷರಾದ ಸಿದ್ದರಾಜ್ ಜೋಗಿ ಮಾತನಾಡಿ, ಕೃಷ್ಣ ಜಯಂತಿಯ ಅಂಗವಾಗಿ ಅತನ ರೀತಿಯಲ್ಲಿ ವೇಷಭೂಷಣಗಳನ್ನು ತೊಡುವುದು ಮಾತ್ರವಲ್ಲ ಆತನ ಬಗ್ಗೆ ಮಕ್ಕಳಿಗೆ ತಿಳಿಸುವ ಕಾರ್ಯವನ್ನು ಮಾಡಿದಾಗ ಮಾತ್ರ ನಿಜವಾದ ಅರ್ಥದಲ್ಲಿ ಜಯಂತಿ ಆಚರಣೆಯಾಗುತ್ತದೆ. ದ್ವಾಪರಯುಗದಲ್ಲಿ ಶ್ರೀಕೃಷ್ಣ ತಿಳಿಸಿದ ತತ್ವಗಳು ಸಂದೇಶಗಳು ನಮ್ಮ ಬದುಕಿಗೆ ಮಾರ್ಗದರ್ಶನವಾಗಬೇಕಿದೆ. ದೇಶ ಮತ್ತ ಸಮಾಜದ ಸೇವೆಯಲ್ಲಿ ನೆಮ್ಮದಿಯನ್ನು ಕಾಣಬಹುದಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಅಂಕಗಳಿಸುವ ಯಂತ್ರಗಳನ್ನಾಗಿ ಮಾಡದೇ ಅವರಲ್ಲಿ ಸಂಸ್ಕಾರವನ್ನು ತುಂಬುವ ಕಾರ್ಯವನ್ನು ಮಾಡಬೇಕಿದೆ ಎಂದರು.

ಕಾಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶಾರದ ಬ್ರಾಸ್ ಬ್ಯಾಂಡ್‌ನ ಹಿರಿಯ ಸಂಗೀತ ಕಲಾವಿದರಾದ ಎಸ್.ವಿ. ಗುರುಮೂರ್ತಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಯೋಗ ಆಚಾರ್ಯರು ಮತ್ತು ಚಿತ್ರದುರ್ಗ ಜಿಲ್ಲಾ ಯೋಗಾಸನ ಕ್ರೀಡಾ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರಾದ ಎಲ್.ಎಸ್. ಚಿನ್ಮಯಾನಂದ. ವಿಗ್ರಹ ಶಿಲ್ಪಿಗಳಾದ ಕೀರ್ತಿ ನಂಜುಂಡಸ್ವಾಮಿ, ವಿಶ್ವ ಹಿಂದು ಪರಿಷದ್‌ನ ಚಿತ್ರದುರ್ಗ ನಗರ ಅಧ್ಯಕ್ಷರಾದ ಅಶೋಕ್ ಕುಮಾರ್ ಈ. ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಮಕ್ಕಳು ಕೃಷ್ಣ ಮತ್ತು ರಾಧೆಯ ವೇಷಭೂಷಣವನ್ನು ಧರಿಸಿದ್ದರು. ಗಂಗಾಧರ್ ಪ್ರಾರ್ಥಿಸಿದರೆ, ಚನ್ನಕೇಶವ ಸ್ವಾಗತಿಸಿದರು.

Leave a Reply

Your email address will not be published. Required fields are marked *