15 ದಿನದಲ್ಲಿ 3 ಬಾರಿ ಕಾದಾಡಲಿದೆ ಭಾರತ-ಪಾಕಿಸ್ತಾನ: ಎಲ್ಲಿ? ಯಾವಾಗ..? ಏಷ್ಯಾಕಪ್ 2023 ವೇಳಾಪಟ್ಟಿಯಲ್ಲಿ ಬಹಿರಂಗ

Asia Cup 2023 Schedule: ಏಷ್ಯಾಕಪ್ 2023 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಕನಿಷ್ಠ 3 ಬಾರಿ ಪಂದ್ಯ ನಡೆಯಬಹುದು ಎಂದು ಹೇಳಲಾಗಿದೆ. ಎರಡೂ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ.

Asia Cup 2023 Schedule: ಏಷ್ಯಾ ಕಪ್ 2023ರ ಆತಿಥ್ಯವನ್ನು ಪಾಕಿಸ್ತಾನ ವಹಿಸಲಿದೆ, ಆಗಸ್ಟ್ 31 ರಂದು ಪ್ರಾರಂಭವಾಗಿ, ಸೆಪ್ಟೆಂಬರ್ 17 ರವರೆಗೆ ನಡೆಯಲಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಏಷ್ಯಾ ಕಪ್ 2023 ರ ವೇಳಾಪಟ್ಟಿಯನ್ನು ಇನ್ನೂ ಪ್ರಕಟಿಸಿಲ್ಲ. ಈ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಡಲಾಗುತ್ತದೆ. ಏಷ್ಯಾಕಪ್‌ ನ ಆರಂಭಿಕ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿದ್ದು, ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಈ ಎರಡು ತಂಡಗಳ ನಡುವಿನ ಪಂದ್ಯಗಳ ಬಗ್ಗೆ ದೊಡ್ಡ ಅಪ್‌ಡೇಟ್ ಹೊರಬಿದ್ದಿದೆ.

15 ದಿನಗಳಲ್ಲಿ 3 ಬಾರಿ ನಡೆಯಲಿರುವ ಭಾರತ-ಪಾಕಿಸ್ತಾನ ಪಂದ್ಯ!

ಏಷ್ಯಾಕಪ್ 2023 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಕನಿಷ್ಠ 3 ಬಾರಿ ಪಂದ್ಯ ನಡೆಯಬಹುದು ಎಂದು ಹೇಳಲಾಗಿದೆ. ಎರಡೂ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ. ಕ್ರಿಕೆಟ್ ಪಾಕಿಸ್ತಾನದ ಸುದ್ದಿ ಪ್ರಕಾರ, ಭಾರತ ಮತ್ತು ಪಾಕಿಸ್ತಾನವು ಸೆಪ್ಟೆಂಬರ್ 2 ರಂದು ಗುಂಪು ಸುತ್ತಿನಲ್ಲಿ ಮುಖಾಮುಖಿಯಾಗಲಿದೆ. ಗುಂಪು ಸುತ್ತಿನ ನಂತರ ಸೂಪರ್-4 ಪಂದ್ಯಗಳು ನಡೆಯಲಿವೆ. ಸೂಪರ್-4 ರಲ್ಲಿ, ಸೆಪ್ಟೆಂಬರ್ 10 ರಂದು, ಅಭಿಮಾನಿಗಳು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯವನ್ನು ವೀಕ್ಷಿಸಬಹುದು. ಅದೇ ಸಮಯದಲ್ಲಿ, ಎರಡೂ ತಂಡಗಳು ಫೈನಲ್ ತಲುಪಿದರೆ, ಸೆಪ್ಟೆಂಬರ್ 17 ರಂದು ಭಾರತ-ಪಾಕಿಸ್ತಾನ ಈ ಟೂರ್ನಿಯಲ್ಲಿ ಮೂರನೇ ಮುಖಾಮುಖಿಯಾಗುವ ನಿರೀಕ್ಷೆಯಿದೆ.

ವರದಿಗಳ ಪ್ರಕಾರ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಏಷ್ಯಾ ಕಪ್ 2023 ರ ವೇಳಾಪಟ್ಟಿಯನ್ನು ಜುಲೈ 19 ರಂದು ಪ್ರಕಟಿಸುವ ಸಾಧ್ಯತೆ ಇದೆ. ಈ ಟೂರ್ನಿಯ ಆರಂಭಿಕ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿದ್ದು, ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. ಟೂರ್ನಿಯ 4 ಪಂದ್ಯಗಳನ್ನು ಮಾತ್ರ ಪಾಕಿಸ್ತಾನ ಆತಿಥ್ಯ ವಹಿಸಲಿದೆ. ಫೈನಲ್ ಸೇರಿದಂತೆ ಉಳಿದ 9 ಪಂದ್ಯಗಳು ಶ್ರೀಲಂಕಾದ ಆತಿಥ್ಯದಲ್ಲಿ ನಡೆಯಲಿವೆ. ಟೀಂ ಇಂಡಿಯಾ ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಮಾತ್ರ ಆಡಲಿದೆ.

ಈ 6 ತಂಡಗಳ ನಡುವೆ ಏಷ್ಯಾಕಪ್:

ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳದ ತಂಡಗಳು ಏಷ್ಯಾ ಕಪ್ 2023 ರಲ್ಲಿ ಭಾಗವಹಿಸಲಿದೆ. ಈ ಬಾರಿಯ ಏಷ್ಯಾಕಪ್ ಏಕದಿನ ಮಾದರಿಯಲ್ಲಿ ನಡೆಯಲಿದ್ದು, ಲೀಗ್ ಹಂತ, ಸೂಪರ್-4 ಮತ್ತು ಫೈನಲ್ ಸೇರಿದಂತೆ ಒಟ್ಟು 13 ಪಂದ್ಯಗಳು ನಡೆಯಲಿವೆ. ನೇಪಾಳ ತಂಡ ಇದೇ ಮೊದಲ ಬಾರಿಗೆ ಟೂರ್ನಿಯಲ್ಲಿ ಆಡಲಿದೆ. ಭಾರತ, ಪಾಕಿಸ್ತಾನ ಮತ್ತು ನೇಪಾಳ ತಂಡಗಳು ಒಂದು ಗುಂಪಿನಲ್ಲಿ ಸ್ಥಾನ ಪಡೆದರೆ, ಹಾಲಿ ಚಾಂಪಿಯನ್ ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ಮತ್ತೊಂದು ಗುಂಪಿನಲ್ಲಿವೆ.

Source : https://zeenews.india.com/kannada/sports/asia-cup-2023-schedule-may-release-on-july-19-india-pakistan-will-clash-3-times-in-15-days-146221

Leave a Reply

Your email address will not be published. Required fields are marked *