ಸಮರ್ ವಾಯು ರಕ್ಷಣಾ ವ್ಯವಸ್ಥೆಯ ಯಶಸ್ವಿ ಪರೀಕ್ಷಾ ಪ್ರಯೋಗ ನಡೆಸಿದ ಭಾರತ: ನಮ್ಮ ಆಗಸಗಳಿನ್ನು ಸುರಕ್ಷಿತ.

  • ಸಮರ್ ಆಯುಧ ವ್ಯವಸ್ಥೆ ಎರಡು ಟರೆಟ್‌ಗಳನ್ನು ಹೊಂದಿರುವ ಉಡಾವಣಾ ವೇದಿಕೆಯನ್ನು ಹೊಂದಿದ್ದು,
  • ಸಂದರ್ಭಕ್ಕೆ ಅನುಗುಣವಾಗಿ ಪ್ರತೀ ಟರೆಟ್ ಏಕಕಾಲದಲ್ಲಿ ಒಂದು ಕ್ಷಿಪಣಿಯನ್ನು ಅಥವಾ ಹೆಚ್ಚಿನ ಕ್ಷಿಪಣಿಗಳನ್ನು ಉಡಾವಣೆಗೊಳಿಸಬಲ್ಲದು.
  • ಈ ಮಾಹಿತಿಗಳನ್ನು ಭಾರತೀಯ ವಾಯುಪಡೆಯ ಅಧಿಕಾರಿಗಳು ಹಂಚಿಕೊಂಡಿದ್ದಾರೆ.

ಭಾರತೀಯ ವಾಯುಪಡೆ (ಐಎಎಫ್) ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ಸಮರ್ ವಾಯು ರಕ್ಷಣಾ ವ್ಯವಸ್ಥೆಯ ಪರೀಕ್ಷಾ ಪ್ರಯೋಗಗಳನ್ನು ಇತ್ತೀಚೆಗೆ ಆಂಧ್ರಪ್ರದೇಶದ ಸೂರ್ಯಲಂಕ ವಾಯುನೆಲೆಯಲ್ಲಿ ನಡೆದ ಅಸ್ತ್ರಶಕ್ತಿ 2023 ಅಭ್ಯಾಸದಲ್ಲಿ ನಡೆಸಿತು.

ಇದೇ ಮೊದಲ ಬಾರಿಗೆ ಅಭ್ಯಾಸದಲ್ಲಿ ಭಾಗಿಯಾದ ಈ ಕ್ಷಿಪಣಿ ವ್ಯವಸ್ಥೆ ತನ್ನ ಭೂಮಿಯಿಂದ ಗಾಳಿಗೆ ದಾಳಿ ನಡೆಸುವ ಸಾಮರ್ಥ್ಯವನ್ನು ಪ್ರದರ್ಶಿಸಿತು.

ಭಾರತೀಯ ವಾಯುಪಡೆ ಸರ್ಫೇಸ್ ಟು ಏರ್ ಮಿಸೈಲ್ ಫಾರ್ ಅಶೂರ್ಡ್ ರಿಟಾಲಿಯೇಶನ್ (SAMAR – ಸಮರ್) ಆಯುಧವನ್ನು ಅಭಿವೃದ್ಧಿ ಪಡಿಸಿದ್ದು, ಇದನ್ನು ರಷ್ಯನ್ ನಿರ್ಮಿತ ವೈಂಪೆಲ್ ಆರ್-73 ಮತ್ತು ಆರ್-27 ಗಾಳಿಯಿಂದ ಗಾಳಿಗೆ ದಾಳಿ ನಡೆಸುವ ಕ್ಷಿಪಣಿ ವ್ಯವಸ್ಥೆಗಳ ಆಧಾರದಲ್ಲಿ ನಿರ್ಮಿಸಲಾಗಿದ್ದು, ಹೆಚ್ಚಿನ ದಾಳಿ ಸಾಮರ್ಥ್ಯಗಳನ್ನು ಹೊಂದಿದೆ. ಭಾರತೀಯ ವಾಯುಪಡೆಯ ಮೇಂಟೆನೆನ್ಸ್ ಕಮಾಂಡ್ ಎಂಬ ವಿಭಾಗ ಸಮರ್ ವಾಯು ರಕ್ಷಣಾ ವ್ಯವಸ್ಥೆಯನ್ನು ಯಶಸ್ವಿಯಾಗಿ ಅಭಿವೃದ್ಧಿ ಪಡಿಸಿದೆ.

ಈ ಆಯುಧ ವ್ಯವಸ್ಥೆ ಶಬ್ದದ ವೇಗಕ್ಕಿಂತ 2ರಿಂದ 2.5 ಪಟ್ಟು ಹೆಚ್ಚಿನ ವೇಗದಲ್ಲಿ (ಪ್ರತಿ ಗಂಟೆಗೆ 2,450 – 3,100 ಕಿಲೋಮೀಟರ್) ಚಲಿಸುವ ಕ್ಷಿಪಣಿಗಳನ್ನು ಬಳಸಿಕೊಂಡು, ಗಾಳಿಯಲ್ಲಿ ಚಲಿಸುವ ಅಪಾಯಗಳನ್ನು ಹೊಡೆದುರುಳಿಸಬಲ್ಲದು. ಸಮರ್ ಆಯುಧ ವ್ಯವಸ್ಥೆ ಎರಡು ಟರೆಟ್‌ಗಳನ್ನು ಹೊಂದಿರುವ ಉಡಾವಣಾ ವೇದಿಕೆಯನ್ನು ಹೊಂದಿದ್ದು, ಸಂದರ್ಭಕ್ಕೆ ಅನುಗುಣವಾಗಿ ಪ್ರತೀ ಟರೆಟ್ ಏಕಕಾಲದಲ್ಲಿ ಒಂದು ಕ್ಷಿಪಣಿಯನ್ನು ಅಥವಾ ಹೆಚ್ಚಿನ ಕ್ಷಿಪಣಿಗಳನ್ನು ಉಡಾವಣೆಗೊಳಿಸಬಲ್ಲದು. ಈ ಮಾಹಿತಿಗಳನ್ನು ಭಾರತೀಯ ವಾಯುಪಡೆಯ ಅಧಿಕಾರಿಗಳು ಹಂಚಿಕೊಂಡಿದ್ದಾರೆ.

ಭಾರತೀಯ ವಾಯುಪಡೆಯ 7 ಬೇಸ್ ರಿಪೇರ್ ಡಿಪೋ (ಬಿಆರ್‌ಡಿ) ಸರ್ಫೇಸ್ ಏರ್ ಮಿಸೈಲ್ ಫಾರ್ ಅಶ್ಯೂರ್ಡ್ ರಿಟಾಲಿಯೇಶನ್ (ಸಮರ್) ವಾಯು ರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸಿದೆ. ಈ ವ್ಯವಸ್ಥೆ ರಷ್ಯನ್ ಪೂರೈಕೆಯ ವೈಂಪೆಲ್ ಆರ್-73ಇ ಇನ್‌ಫ್ರಾರೆಡ್ ನಿರ್ದೇಶಿತ ಗಾಳಿಯಿಂದ ಗಾಳಿಗೆ ದಾಳಿ ನಡೆಸುವ ಕ್ಷಿಪಣಿಯ (ಎಎಎಂ) ನವೀಕರಿಸಿದ ಭಾಗಗಳನ್ನು ಒಳಗೊಂಡಿದ್ದು, ಇದನ್ನು ಭೂಮಿಯಿಂದ ಗಾಳಿಗೆ ದಾಳಿ ನಡೆಸುವ ಕಡಿಮೆ ವ್ಯಾಪ್ತಿಯ ವಾಯು ರಕ್ಷಣಾ ವ್ಯವಸ್ಥೆಯಾಗಿ ರೂಪಿಸಲಾಗಿದೆ. ಈ ಅಭಿವೃದ್ಧಿಯನ್ನು ಈಗಾಗಲೇ ಬಳಕೆಗೆ ಅನುಮತಿಸಲಾಗಿದೆ.

ಸಮರ್ ವಾಯು ರಕ್ಷಣಾ ವ್ಯವಸ್ಥೆ 12 ಕಿಲೋಮೀಟರ್‌ಗಳಿಗಿಂತ ಕಡಿಮೆ ವ್ಯಾಪ್ತಿಯಲ್ಲಿ, ತಳಮಟ್ಟದಲ್ಲಿ ಹಾರಾಟ ನಡೆಸುವ ಯುಎವಿಗಳು, ಹೆಲಿಕಾಪ್ಟರ್‌ಗಳು, ಯುದ್ಧ ವಿಮಾನಗಳು ಸೇರಿದಂತೆ, ವಿವಿಧ ರೀತಿಯ ವೈಮಾನಿಕ ಅಪಾಯಗಳನ್ನು ನಾಶಪಡಿಸಬಲ್ಲದು.

ಭಾರತೀಯ ವಾಯುಪಡೆಯ ಬಳಿ ತಮ್ಮ ಕಾರ್ಯಾಚರಣಾ ಅವಧಿ ಪೂರೈಸಿರುವ ಬಹಳಷ್ಟು ವೈಂಪೆಲ್ ಆರ್-73ಇ ಕ್ಷಿಪಣಿಗಳಿವೆ. ಅವುಗಳು ತಮ್ಮ ಸಂಗ್ರಹಿಸಿಡುವ ಅವಧಿಯನ್ನೂ ಪೂರ್ಣಗೊಳಿಸಿದ್ದು, ಯುದ್ಧ ವಿಮಾನಗಳಲ್ಲಿ ಬಳಸಲು ಸಾಧ್ಯವಿಲ್ಲ. ಆದರೆ, ಈ ಕ್ಷಿಪಣಿಗಳನ್ನು ಕಡಿಮೆ ವ್ಯಾಪ್ತಿಯ ವಾಯು ರಕ್ಷಣಾ ವ್ಯವಸ್ಥೆಯಾಗಿ ಬಳಸುವಂತೆ ಮರು ರೂಪಿಸಲಾಗಿದೆ.

ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

Source : https://zeenews.india.com/kannada/india/india-successfully-test-fires-samar-air-defense-system-safeguarding-our-borders-177535

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

 

Leave a Reply

Your email address will not be published. Required fields are marked *