Sports news:ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ, ಅಕ್ಟೋಬರ್ 19 ರಂದು ಪರ್ತ್‌ನಲ್ಲಿ ನಡೆಯಲಿದೆ. ಈ ಸರಣಿಯನ್ನು ವಶಕ್ಕೆ ಪಡೆಯಲು ಉಭಯ ತಂಡಗಳು ಪ್ಲ್ಯಾನ್ ಮಾಡಿಕೊಂಡಿವೆ. ಇನ್ನು ಭಾರತ ತಂಡದ ಅನುಭವಿ ಬ್ಯಾಟರ್‌ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ 7 ತಿಂಗಳು ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲಿದ್ದಾರೆ.
ಈ ವೇಳೆ ಈ ಇಬ್ಬರೂ ಸೂಪರ್ ಸ್ಟಾರ್ ಆಟಗಾರರ ಆಟವನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಸಿದ್ಧರಾಗಿದ್ದಾರೆ.
ಆಸ್ಟ್ರೇಲಿಯಾದಲ್ಲಿ, ಆಸೀಸ್ ತಂಡವನ್ನು ಮಣಿಸುವುದು ಸುಲಭದ ಕೆಲಸವಲ್ಲ. ಆದರೆ ಟೀಮ್ ಇಂಡಿಯಾದ ಸದ್ಯದ ಪ್ರದರ್ಶನ ಎದುರಾಳಿಗಳಿಗೂ ನಡುಕ ಹುಟ್ಟಿಸುವಂತೆ ಇದೆ. ಈ ಬಾರಿ ಟೀಮ್ ಇಂಡಿಯಾ ತನ್ನ ಹೊಸ ನಾಯಕ ಶುಭಮನ್ ಗಿಲ್ ಮುನ್ನಡೆಸಲಿದ್ದಾರೆ. 2027ರ ಏಕದಿನ ವಿಶ್ವಕಪ್ ದೃಷ್ಟಿಯಲ್ಲಿ ಇಟ್ಟುಕೊಂಡು ಬಿಸಿಸಿಐ ಬಲಿಷ್ಠ ತಂಡವನ್ನು ಕಟ್ಟುವ ಆಸೆಯನ್ನು ಹೊಂದಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಪಂದ್ಯಗಳು ಆರಂಭವಾಗುವುದು ಯಾವಗ? ಪಂದ್ಯಗಳು ನಡೆಯುವುದು ಎಲ್ಲಿ ಎಂಬ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಎಷ್ಟು ಏಕದಿನ ಪಂದ್ಯಗಳು ನಡೆಯಲಿವೆ?
ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಒಟ್ಟು 3 ಏಕದಿನ ಪಂದ್ಯಗಳನ್ನು ಆಡಲಿದೆ.
ಏಕದಿನ ಪಂದ್ಯಗಳು ಯಾವ ಯಾವ ಅಂಗಳದಲ್ಲಿ ನಡೆಯಲಿವೆ?
ಆಸ್ಟ್ರೇಲಿಯಾದ ಪರ್ತ್, ಆಡಿಲೇಡ್, ಸಿಡ್ನಿಯಲ್ಲಿ ಏಕದಿನ ಪಂದ್ಯ ನಡೆಯಲಿವೆ.
ಏಕದಿನ ಪಂದ್ಯದ ಟಾಸ್ ಯಾವಾಗ ನಡೆಯುತ್ತದೆ?
ಆಸ್ಟ್ರೇಲಿಯಾದಲ್ಲಿ ನಡೆಯುವ ಸರಣಿ ಹಗಲು ರಾತ್ರಿಯದ್ದಾಗಿದ್ದು, ಭಾರತದಲ್ಲಿ ಬೆಳಗ್ಗೆ ಆಗಿರುತ್ತದೆ. ಸುಮಾರು 8.30ಕ್ಕೆ ಟಾಸ್ ನಡೆಯಲಿದೆ.
ಎಷ್ಟು ಗಂಟೆಗೆ ಪಂದ್ಯ ಆರಂಭವಾಗಲಿದೆ?
ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 9ಕ್ಕೆ ಪಂದ್ಯ ಆರಂಭವಾಗಲಿದೆ.
ಏಕದಿನ ಸರಣಿಯ ವೇಳಾ ಪಟ್ಟಿ ಏನು?
ಅ.19 ರಂದು ಪರ್ತ್‌ನಲ್ಲಿ, ಅ.23 ರಂದು ಆಡಿಲೇಡ್‌ನಲ್ಲಿ, ಅ.25 ರಂದು ಸಿಡ್ನಿಯಲ್ಲಿ ಪಂದ್ಯಗಳು ನಡೆಯಲಿವೆ.
ಈ ಪಂದ್ಯಗಳನ್ನು ಭಾರತದಲ್ಲಿ ಎಲ್ಲಿ ನೋಡಬಹುದು?
ಭಾರತದಲ್ಲಿ ಈ ಸರಣಿ ಸ್ಟಾರ್ ಸ್ಫೋರ್ಟ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದೆ.
ಆನ್‌ಲೈನ್‌ನಲ್ಲಿ ಹೇಗೆ ನೋಡಬಹುದು?
ಜಿಯೋ ಹಾಟ್‌ಸ್ಟಾರ್ (JioHotstar) ಆಪ್ ಅಥವಾ ವೆಬ್‌ಸೈಟ್ ಮೂಲಕ ನೋಡಬಹುದು.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟಿ20 ಸರಣಿಯ ವೇಳಾಪಟ್ಟಿ (ಪಂದ್ಯದ ಸಮಯ ಭಾರತೀಯ ಕಾಲಮಾನ)
ಮೊದಲ ಟಿ20 ಅ.29, ಕ್ಯಾನ್‌ಬೆರಾ, ಮಧ್ಯಾಹ್ನ 1.45ಕ್ಕೆ
ಎರಡನೇ ಟಿ20 ಅ.31, ಮೆಲ್ಬೋರ್ನ್, ಮಧ್ಯಾಹ್ನ 1.45ಕ್ಕೆ
ಮೂರನೇ ಟಿ20 ನ.2, ಹೋಬಾರ್ಟ್, ಮಧ್ಯಾಹ್ನ 1.45ಕ್ಕೆ
ನಾಲ್ಕನೇ ಟಿ20 ನ.6, ಗೋಲ್ಡ್ ಕೋಸ್ಟ್, ಮಧ್ಯಾಹ್ನ 1.45ಕ್ಕೆ
ಐದನೇ ಟಿ20 ನ.8, ಬ್ರಿಸ್ಬೇನ್, ಮಧ್ಯಾಹ್ನ 1.45ಕ್ಕೆ
ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸವನ್ನು ಸ್ಮರಣೀಯವಾಗಿಸಲು ಪ್ಲ್ಯಾನ್ ಮಾಡಿಕೊಂಡಿದೆ. ಗಿಲ್ ಏಕದಿನ ಪಂದ್ಯಗಳಲ್ಲಿ, ಸೂರ್ಯಕುಮಾರ್ ಯಾದವ್ ಟಿ20 ಫಾರ್ಮೆಟ್‌ನಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.
Views: 12