ಸೆಮಿಫೈನಲ್‌ಗೆ ಮುನ್ನ ಭಾರತ vs ಬಾಂಗ್ಲಾದೇಶ ಮಹಿಳಾ ಏಕದಿನ ಪೈಪೋಟಿ.

ಭಾರತದಲ್ಲಿ ನಡೆಯುತ್ತಿರುವ ಮಹಿಳಾ ಏಕದಿನ ವಿಶ್ವಕಪ್‌ ಕೊನೆಯ ಹಂತಕ್ಕೆ ಬಂದು ನಿಂತಿದೆ. ಈ ಟೂರ್ನಿಯಲ್ಲಿ ಈಗ ಲೀಗ್‌ ಹಂತ ಕೊನೆಯ ಘಟ್ಟದಲ್ಲಿದೆ. ಭಾನುವಾರ ಭಾರತ ಸಹ ತನ್ನ ಲೀಗ್‌ ಹಂತದ ಕೊನೆಯ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಆಡಿಲಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಸೆಮಿಫೈನಲ್‌ ಹಂತಕ್ಕೆ ಆತ್ಮವಿಶ್ವಾಸದಿಂದ ಮುನ್ನಗ್ಗುವ ಕನಸು ಕಾಣುತ್ತಿದೆ.

ಸೆಮಿಫೈನಲ್‌ ಪಂದ್ಯದಲ್ಲಿ ಯಾವ ತಂಡವನ್ನು ಭಾರತ ಕಣಕ್ಕೆ ಇಳಿಸ ಬಹುದು ಎಂಬ ಬ್ಲ್ಯೂ ಪ್ರೀಂಟ್‌ ಸಿಗಲಿದೆ.


ಭಾರತ ಹಾಗೂ ಬಾಂಗ್ಲಾದೇಶ ವಿರುದ್ಧ ಉತ್ತಮ ಅಂಕಿ ಅಂಶಗಳನ್ನು ಹೊಂದಿದೆ. ಭಾರತ ಸದ್ಯ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಭಾನುವಾರ ನಡೆಯಲಿರುವ ಪಂದ್ಯ ಅನೌಪಚಾರಿಕವಾಗಿದೆ. ಈ ಪಂದ್ಯದಲ್ಲಿನ ಸೋಲು ಗೆಲುವು ಯಾವುದೇ ತಂಡದ ಅಂಕ ಪಟ್ಟಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇನ್ನು ಬಾಂಗ್ಲಾದೇಶ ಟೂರ್ನಿಯಲ್ಲಿ ಒಂದೇ ಪಂದ್ಯದಲ್ಲಿ ಜಯ ಸಾಧಿಸಿದ್ದು, ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.


ಟೀಮ್ ಇಂಡಿಯಾದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಈ ವೇಳೆ ಎಲ್ಲರ ಕಣ್ಣುಗಳು ಸ್ಮೃತಿ ಮಂಧನಾ ಅವರ ಮೇಲೆ ನೆಟ್ಟಿರಲಿವೆ. ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಬಾಂಗ್ಲಾ ವಿರುದ್ಧವೂ ಬಿಗ್ ಇನಿಂಗ್ಸ್‌ ಕಟ್ಟುವ ಇರಾದೆಯನ್ನು ಹೊಂದಿದ್ದಾರೆ. ಇನ್ನು ಇವರೊಂದಿಗೆ ಇನಿಂಗ್ಸ್‌ ಆರಂಭಿಸುವ ಪ್ರತಿಕಾ ರಾವಲ್ ಸಹ ಬಾಂಗ್ಲಾ ಬೌಲರ್‌ಗಳನ್ನು ಕಾಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇವರಿಬ್ಬರೂ ನ್ಯೂಜಿಲೆಂಡ್ ವಿರುದ್ಧ ನೀಡಿರುವ ಪ್ರದರ್ಶನ ನೀಡುವ ಅನಿವಾರ್ಯತೆ ಇದೆ.


ಆಲ್‌ರೌಂಡರ್‌ಗಳೇ ಬಲ
ಇನ್ನು ಮಧ್ಯಮ ಕ್ರಮಾಂಕದಲ್ಲಿ ಹರ್ಮನ್ ಪ್ರೀತ್ ಕೌರ್, ಜೆಮಿಮಾ ರೋಡ್ರಿಗಸ್‌, ಹರ್ಲಿನ್ ಡಿಯೋಲ್‌ ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟಿಂಗ್ ಮಾಡುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ಬಿಗ್ ಇನಿಂಗ್ಸ್ ಕಟ್ಟುವ ಆಸೆ ಫಲಿಸುತ್ತದೆ. ಇನ್ನು ಆಲ್‌ರೌಂಡರ್‌ಗಳಾದ ದೀಪ್ತಿ ಶರ್ಮಾ, ಸ್ನೇಹಾ ರಾಣಾ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗುತ್ತಿದೆ. ಇದೇ ಪ್ರದರ್ಶನವನ್ನು ಮುಂದುವರೆಸುವ ಅನಿವಾರ್ಯತೆ ಇದೆ. ಅಮನ್‌ಜೋತ್‌ ಕೌರ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುತ್ತಾರಾ ಕಾದು ನೋಡಬೇಕಿದೆ.


ವೇಗದ ಬೌಲರ್‌ಗಳಾದ ಕ್ರಾಂತಿ ಗೌಡ, ರೇಣುಕಾ ಸಿಂಗ್ ಸರಿಯಾದ ಸ್ಥಳದಲ್ಲಿ ಬೌಲಿಂಗ್ ನಡೆಸಿ ಎದುರಾಳಿ ಬ್ಯಾಟರ್‌ಗಳನ್ನು ಕಾಡಬೇಕಿದೆ. ಅಂದಾಗ ಮಾತ್ರ ಗೆಲುವಿನ ಆಸೆ ಫಲಿಸುತ್ತದೆ. ಬಾಂಗ್ಲಾದೇಶ ತಂಡವನ್ನು ಹಗುರವಾಗಿ ಪರಿಗಣಿಸದೇ ಭಾರತ ಎಚ್ಚರಿಕೆಯಿಂದ ಆಟ ಆಡಿದರೆ ಗೆಲುವಿನ ನಗೆ ಬೀರಬಹುದಾಗಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿ, ಸೆಮಿಫೈನಲ್‌ ಪಂದ್ಯಕ್ಕೆ ಆತ್ಮವಿಶ್ವಾಸದಿಂದ ಕಣಕ್ಕೆ ಇಳಿಯುವ ಪ್ಲ್ಯಾನ್‌ ಹರ್ಮನ್ ಪಡೆಯದ್ದಾಗಿದೆ.

Leave a Reply

Your email address will not be published. Required fields are marked *