India vs Sri Lanka: ಸಂಜುಗೆ ಮತ್ತೊಂದು ಚಾನ್ಸ್! ಆ ಇಬ್ಬರು ಯುವ ಆಲ್​ರೌಂಡರ್​ಗಳಿಗೆ​ ಅವಕಾಶ! ಕೊನೆ ಪಂದ್ಯಕ್ಕೆ ಸಂಭಾವ್ಯ ತಂಡ ಇಲ್ಲಿದೆ.

Cricket: ಈಗಾಗಲೇ ಸರಣಿ ಗೆದ್ದುಕೊಂಡಿರುವುದರಿಂದ ಬೆಂಚ್ ಸ್ಟ್ರೆಂತ್​ ಸಾಬೀತುಪಡಿಸುವ ತವಕದಲ್ಲಿ ಗಂಭೀರ್​-ಸೂರ್ಯಕುಮಾರ್​ ಇದ್ದಾರೆ. ಈ ಹಿನ್ನೆಲೆಯಲ್ಲಿ ಆಲ್ ರೌಂಡರ್ ಗಳಾದ ಹಾರ್ದಿಕ್ ಪಾಂಡ್ಯ ಹಾಗೂ ಅಕ್ಷರ್ ಪಟೇಲ್ ಅವರನ್ನು ತಂಡದಿಂದ ಕೈಬಿಡುವ ನಿರೀಕ್ಷೆಯಿದೆ.

ಶ್ರೀಲಂಕಾ( Sri Lanka) ವಿರುದ್ಧದ 3 ಪಂದ್ಯಗಳ ಟಿ20 ಸರಣಿಯನ್ನ ಈಗಾಗಲೇ ಟೀಮ್ ಇಂಡಿಯಾ 2-0ಯಲ್ಲಿ ಮುನ್ನಡೆ ಪಡೆದುಕೊಂಡಿದೆ. ಕೊನೆಯ ಟಿ20 ಪಂದ್ಯ ಮಂಗಳವಾರ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಈ ಔಪಚಾರಿಕ ಪಂದ್ಯ ಗೆದ್ದು ಟಿ20 ಸರಣಿಯನ್ನ ವೈಟ್​ ವಾಷ್ ಮಾಡು ಇರಾದೆಯಲ್ಲಿದೆ. ಆದರೂ ಕೊನೆಯ ಪಂದ್ಯದಲ್ಲಿ ಬೆಂಚ್​ ಕಾದಿರುವ ಕೆಲವು ಆಟಗಾರರಿಗೆ ಅವಕಾಶ ಕೊಡುವ ನಿರೀಕ್ಷೆಯಿದೆ. ಹಿಂದಿನ ಕೋಚ್ ದ್ರಾವಿಡ್ (Rahul Dravid) ಔಪಚಾರಿಕ ಪಂದ್ಯಗಳಲ್ಲಿ ಪಂದ್ಯ ಬೆಂಚ್​ ಕಾಯ್ದಿದ್ದ ಆಟಗಾರರಿಗೆ ಅವಕಾಶ ನೀಡುತ್ತಿದ್ದರು. ಗಂಭೀರ್ ಕೂಡ ಅದೇ ಸಂಪ್ರದಾಯ ಮುಂದುವರಿಸುವ ಸಾಧ್ಯತೆ ಇದೆ.

ಇಬ್ಬರಿಗೆ ರೆಸ್ಟ್​

ಈಗಾಗಲೇ ಸರಣಿ ಗೆದ್ದುಕೊಂಡಿರುವುದರಿಂದ ಬೆಂಚ್ ಸ್ಟ್ರೆಂತ್​ ಸಾಬೀತುಪಡಿಸುವ ತವಕದಲ್ಲಿ ಗಂಭೀರ್​-ಸೂರ್ಯಕುಮಾರ್​ ಇದ್ದಾರೆ. ಈ ಹಿನ್ನೆಲೆಯಲ್ಲಿ ಆಲ್ ರೌಂಡರ್ ಗಳಾದ ಹಾರ್ದಿಕ್ ಪಾಂಡ್ಯ ಹಾಗೂ ಅಕ್ಷರ್ ಪಟೇಲ್ ಅವರನ್ನು ತಂಡದಿಂದ ಕೈಬಿಡುವ ನಿರೀಕ್ಷೆಯಿದೆ. ಹಾರ್ದಿಕ್ ಮತ್ತು ಅಕ್ಷರ್ ಬದಲಿಗೆ ಶಿವಂ ದುಬೆ ಮತ್ತು ವಾಷಿಂಗ್ಟನ್ ಸುಂದರ್ ತಂಡವನ್ನು ಸೇರಿಕೊಳ್ಳಬಹುದು ಎನ್ನಲಾಗುತ್ತಿದೆ.

ಸಾಮ್ಸನ್​ಗೆ ಮತ್ತೊಂದು ಚಾನ್ಸ್

ಮತ್ತೊಂದೆಡೆ, ಯಶಸ್ವಿ ಜೈಸ್ವಾಲ್ ಮತ್ತು ಸಂಜು ಸ್ಯಾಮ್ಸನ್ ಆರಂಭಿಕರಾಗಿ ಮುಂದುವರಿಯಲಿದ್ದಾರೆ. ಕುತ್ತಿಗೆ ನೋವಿನಿಂದಾಗಿ ಶುಭಮನ್ ಗಿಲ್ ಎರಡನೇ ಟಿ20 ಪಂದ್ಯದಿಂದ ಹೊರಗುಳಿದಿದ್ದರು. ಅವರು ಏಕದಿನ ಸರಣಿ ಆಡಬೇಕಿರುವುದರಿಂದ ಗಿಲ್​ಗೆ ಈ ಪಂದ್ಯದಿಂದಲೂ ವಿಶ್ರಾಂತಿ ನೀಡಿ, ಕಳೆದ ಪಂದ್ಯದಲ್ಲಿ ಗೋಲ್ಡನ್ ಡಕ್ ಆಗಿರುವ ಸ್ಯಾಮ್ಸನ್ ಅಂತಿಮ ತಂಡದಲ್ಲಿ ಮತ್ತೊಂದು ಸ್ಥಾನ ಕೊಡಬಹುದು ಎನ್ನಲಾಗುತ್ತಿದೆ. ಪಂತ್, ರಿಯಾನ್ ಪರಾಗ್ ಮತ್ತು ರಿಂಕು ಸಿಂಗ್ ತಂಡದಲ್ಲಿ ಮುಂದುವರಿಯಲಿದ್ದಾರೆ.

ಮತ್ತೊಂದೆಡೆ ಮೊಹಮ್ಮದ್ ಸಿರಾಜ್ ಅಥವಾ ಅರ್ಷದೀಪ್ ಸಿಂಗ್ ಬದಲಿಗೆ ಖಲೀಲ್ ಅಹ್ಮದ್ ತಂಡಕ್ಕೆ ಬರುವ ಸಾಧ್ಯತೆ ಇದೆ. ಖಲೀಲ್ ಮತ್ತು ಅರ್ಷದೀಪ್ ಇಬ್ಬರೂ ಎಡಗೈ ಬೌಲರ್‌ಗಳು. ಒಂದು ವೇಳೆ ಇಬ್ಬರಿಗೂ ಅವಕಾಶ ನೀಡಬೇಕೆಂದರೆ ಸಿರಾಜ್​ಗೆ ವಿಶ್ರಾಂತಿ ನೀಡಬೇಕಾಗುತ್ತದೆ. ಹಾಗಾದರೆ ಹಾರ್ದಿಕ್ ತಂಡದಲ್ಲಿ ಅವಕಾಶ ಪಡೆಯಲಿದ್ದಾರೆ.

ಟೀಮ್ ಇಂಡಿಯಾ ಸಂಭಾವ್ಯ ತಂಡ

ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್ (ನಾಯಕ), ರಿಷಭ್ ಪಂತ್, ರಿಂಕು ಸಿಂಗ್, ರಿಯಾನ್ ಪರಾಗ್, ಹಾರ್ದಿಕ್ ಪಾಂಡ್ಯ/ ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಶದೀಪ್ ಸಿಂಗ್, ಖಲೀಲ್ ಅಹಮದ್, ಮೊಹಮ್ಮದ್ ಸಿರಾಜ್.

Source: https://kannada.news18.com/news/sports/sanju-get-another-chance-india-may-made-3-changes-check-here-predicted-xi-mbr-1794405.html

 

Leave a Reply

Your email address will not be published. Required fields are marked *