ವೈವಿಧ್ಯತೆಗೆ ಹೆಸರುವಾಸಿಯಾದ ನಮ್ಮ ದೇಶದಲ್ಲಿ (India) ಎಲ್ಲವೂ ನಾನಾ ರೀತಿಯಿಂದ ಕೂಡಿದೆ. ಸಂಸ್ಕೃತಿ, ಆಚರಣೆ, ಹಬ್ಬ (Festival), ಉಡುಗೆ-ತೊಡುಗೆ, ಪಾಕ ಪದ್ಧತಿ ಎಲ್ಲವೂ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನ-ವಿಭಿನ್ನ. ವಿಶೇಷವಾಗಿ ಇಲ್ಲಿನ ಅಡುಗೆ ಪದಾರ್ಥಗಳು ಜನಮನ್ನಣೆ ಮತ್ತು ಜಗಮನ್ನಣೆ ಪಡೆದಿವೆ. ಇಲ್ಲಿನ ಪುರಾತನ ಪಾಕಪದ್ಧತಿಯಿಂದ ಹಿಡಿದು ಆಗಿನ ಆಧುನಿಕ ಪಾಕಪದ್ಧತಿಗಳವೆರೆಗೆ ಎಲ್ಲವೂ ನಾಲಿಗೆಗೆ ರುಚಿ (Taste) ಹಿಡಿಸುತ್ತವೆ.
ಭಾರತದಲ್ಲಿ ಒಂದೊಂದು ರಾಜ್ಯ, ಒಂದೊಂದು ನಗರದಲ್ಲಿ ಅದರದ್ದೇ ಆದ ಒಂದು ಸಿಗ್ನೇಚರ್ ಅಡುಗೆ ಅಥವಾ ಆಹಾರ ಪದಾರ್ಥ ಫೇಮಸ್ ಆಗಿದೆ. ನಮ್ಮ ರಾಜ್ಯವನ್ನು ಉದಾಹರಣೆಗೆ ತೆಗೆದುಕೊಂಡರೆ ಇಲ್ಲಿ ರಾಗಿ ಮುದ್ದೆ, ಮೈಸೂರ್ ಪಾಕ್, ರೊಟ್ಟಿ, ಕಡುಬು, ಬಸ್ಸಾರು ಹೀಗೆ ಅನೇಕ ಪದಾರ್ಥಗಳು ಹೆಸರುವಾಸಿಯಾಗಿದೆ. ಹೀಗೆಯೇ ದೇಶದ ಪ್ರತಿ ಊರು, ಜಿಲ್ಲೆ ಕೂಡ ಆದರದ್ದೇ ಆದ ಪಾಕಪದ್ಧತಿಯೊಂದಿಗೆ ಜನಪ್ರಿಯ ಗಳಿಸಿದೆ.
ಹಾಗಾದರೆ ಎಲ್ಲೆಲ್ಲಿ ಯಾವ ಡಿಶ್ ಜನಪ್ರಿಯವಾಗಿದೆ ನೋಡೋಣ ಬನ್ನಿ.
ಮುಂಬೈ: ವಡಾ ಪಾವ್
ಕನಸಿನ ನಗರಿ ಮುಂಬೈ ಕೆಲವು ಅತ್ಯುತ್ತಮ ತಿನಿಸುಗಳನ್ನು ಒಳಗೊಂಡಂತೆ ವ್ಯಾಪಕ ಶ್ರೇಣಿಯ ಭಕ್ಷ್ಯಗಳನ್ನು ನೀಡುತ್ತದೆ. ಅದರಲ್ಲೂ ಇಲ್ಲಿನ ವಡಾ ಪಾವ್ ಅತಿಹೆಚ್ಚು ಆಹಾರ ಪ್ರಿಯರನ್ನು ಹೊಂದಿರುವ ಭಕ್ಷ್ಯವಾಗಿದೆ.
ಬನ್ ಮತ್ತು ಚಟ್ನಿಗಳೊಂದಿಗೆ ಬಡಿಸುವ ಮಸಾಲೆಯುಕ್ತ ಆಲೂಗೆಡ್ಡೆ ಪ್ಯಾಟಿ ಮುಂಬೈನ ಫೇಮಸ್ ಫುಡ್. ಮುಂಬೈಗೆ ಯಾರಾದರೂ ಹೋದರೆ ಮಿಸ್ ಮಾಡದೇ ತಿಂದು ಬರುವ ಆಹಾರವಿದು.
ದೆಹಲಿ: ಚೋಲೆ ಭಟುರೆ
ದೇಶದ ರಾಜಧಾನಿಯು ಆಹಾರ ಪ್ರಿಯರಿಗೆ ಆಹಾರ ರಾಜಧಾನಿ ಎಂದೇ ಪ್ರಸಿದ್ಧವಾಗಿದೆ. ಅಲ್ಲಿನ ಚಾಟ್ಸ್, ಬಟರ್ ಚಿಕನ್, ನಿಹಾರಿ, ದೌಲತ್ ಕಿ ಚಾತ್, ಮಾತ್ ಕಚೋರಿ ಮತ್ತು ಕೇಸರ್ ಲಸ್ಸಿ ಜೊತೆಗೆ ದೆಹಲಿಯಲ್ಲಿ ಪ್ರಸಿದ್ಧಿ ಪಡೆದಿರುವುದು ಚೋಲೆ ಭಟುರೆ. ದಪ್ಪನೆಯ ಪೂರಿ ಜೊತೆಗೆ ಮಸಾಲೆಯುಕ್ತ ಕಡಲೆಕಾಯಿ ಪಲ್ಯದೊಂದಿಗೆ ಬಡಿಸುವ ಈ ಚೋಲೆ ಭಟುರೆ ಇಲ್ಲಿ ಸಕತ್ ಫೇಮಸ್.
ಕೋಲ್ಕತ್ತಾ: ಫುಚ್ಕಾ ಅಥವಾ ಪಾನಿಪೂರಿ
ಕೋಲ್ಕತ್ತಾ ವಿವಿಧ ಆಹಾರಗಳನ್ನು ಬಡಿಸುವ ನಗರವಾಗಿದ್ದು, ಫುಡ್ಡಿಗಳಿಗೆ ನಿರಾಶೆ ಮಾಡೋದೇ ಇಲ್ಲ. ಸಿಹಿತಿಂಡಿಗಳಿಂದ ಹಿಡಿದು ಕಟ್ಟಿ ರೋಲ್‌ಗಳವರೆಗೆ ಇಲ್ಲಿ ಹಲವು ಬಗೆಯ ಖಾಧ್ಯಗಳಿವೆ. ಅದರಲ್ಲೂ ಇಲ್ಲಿನ ಫುಚ್ಕಾ ಅಥವಾ ಪಾನಿಪೂರಿ ಬಗ್ಗೆ ಹೇಳೋದೇ ಬೇಡ, ಇದು ಲೆಕ್ಕವಿಲ್ಲದಷ್ಟು ಆಹಾರ ಅಭಿಮಾನಿಗಳನ್ನು ಹೊಂದಿದೆ.
ಚೆನ್ನೈ: ಮಸಾಲೆ ದೋಸೆ
ದೇಶದ ಯಾವ ಮೂಲೆಗೆ ಹೋದರೂ ಈ ಮಸಾಲೆ ದೋಸೆ ಹವಾ ಕುಗ್ಗೋದೇ ಇಲ್ಲ. ಎಲ್ಲರೂ ಬಾಯಿ ಚಪ್ಪರಿಸುವ ಒಂದು ತಿಂಡಿ ಇದು. ನೀವೂ ಎಲ್ಲಾ ಕಡೆ ತಿನ್ನುವುದಕ್ಕಿಂತ ಮಸಾಲೆ ದೋಸೆಯನ್ನು ಚೆನ್ನೈನಲ್ಲಿ ಸವಿಯಬೇಕು. ಏಕೆಂದರೆ ಚೆನ್ನೈ ಮಸಾಲೆ ದೋಸೆಗೆ ಹೆಸರುವಾಸಿಯಾದ ನಗರವಾಗಿದೆ.
ಹೈದರಾಬಾದ್: ಹೈದರಾಬಾದ್ ಬಿರಿಯಾನಿ
ಬಿರಿಯಾನಿ ಅಂದರೆ ನೆನಪಾಗೋ ಊರೇ ಹೈದರಾಬಾದ್. ಪ್ರತಿ ಆಹಾರ ಪ್ರಿಯರಿಗೆ ಹೈದರಾಬಾದಿ ಬಿರಿಯಾನಿಯ ಘಮ ಗೊತ್ತು. ಇದನ್ನು ಭಾರತದಲ್ಲಿ ಅತ್ಯುತ್ತಮ ಬಿರಿಯಾನಿ ಎಂದು ಪರಿಗಣಿಸಲಾಗಿದೆ. ಮಟನ್, ಚಿಕನ್, ಕೇಸರಿ, ಮಸಾಲೆಗಳೊಂದಿಗೆ ತಯಾರಾಗುವ ಈ ಬಿರಿಯಾನಿ ಎಲ್ಲೆಡೆಯೂ ಜನಪ್ರಿಯ.
ಜೈಪುರ: ಪಯಾಜ್ ಕಚೋರಿ
ಡೀಪ್ ಫ್ರೈಡ್ ಪೇಸ್ಟ್ರಿಗಳು ಮಸಾಲೆಯುಕ್ತ ಈರುಳ್ಳಿ ಸ್ಟಫ್ಪಿಂಗ್ ಜೊತೆ ನೀಡುವ ಪಯಾಜ್ ಕಚೋರಿ ಜೈಪುರದ ಜನಪ್ರಿಯ ಆಹಾರ. ಇದನ್ನು ಇಲ್ಲಿ ಹೆಚ್ಚಾಗಿ ಜನ ಸವಿಯುತ್ತಾರೆ.
ಅಮೃತಸರ: ಅಮೃತಸರಿ ಕುಲ್ಚಾ
ಅಮೃತಸರದ ಕುಲ್ಚಾಕ್ಕೆ ಈ ನಗರದ ಹೆಸರೇ ಇದೆ. ಒಂದು ವಿಧದ ಸ್ಟುಡ್ ಬ್ರೆಡ್ ಅನ್ನು ಕಡ್ಲೆ ಪಲ್ಯದ ಜೊತೆಗೆ ಬಡಿಸುವ ಅಮೃತಸರಿ ಕುಲ್ಚಾ ಅಮೃತಸರದಲ್ಲಿ ನೀವು ಮಿಸ್ ಮಾಡದೇ ತಿನ್ನಬೇಕಾದ ಒಂದು ಭಕ್ಷ್ಯವಾಗಿದೆ.
ಲಕ್ನೋ: ತುಂಡೇ ಕಬಾಬ್
ತುಂಡೇ ಕಬಾಬ್ ಅದರ ರಸವತ್ತಾದ ಕಬಾಬ್‌ಗಳಿಗೆ ಹೆಸರುವಾಸಿಯಾದ ಕಬಾಬ್ ಆಗಿದೆ. ನೀವೇನಾದರೂ ಲಕ್ನೋಕ್ಕೆ ಹೋದರೆ ಇದನ್ನು ಟೇಸ್ಟ್ ಮಾಡ್ಲೇಬೇಕು.
ಬೆಂಗಳೂರು: ಮಸಾಲಾ ಪುರಿ
ಬೆಂಗಲೂರು ಅದೆಷ್ಟೋ ಆಹಾರಗಳಿಗೆ ನೆಲೆಯಾಗಿದೆ. ಅದರಲ್ಲೂ ಇಲ್ಲಿನ ಚಾಟ್ಸ್ ಮಸಾಲಾ ಪೂರಿಯ ಟೇಸ್ಟ್ ತಿಂದೋರಿಗೆ ಮಾತ್ರ ಗೊತ್ತು. ಬೆಂಗಳೂರು ಮಸಾಲಾ ಪುರಿಗೆ ಹೆಚ್ಚು ಜನಪ್ರಿಯವಾಗಿದೆ.
ಅಹಮದಾಬಾದ್: ಧೋಕ್ಲಾ
ಧೋಕ್ಲಾ ಕೇವಲ ಅಹಮದಾಬಾದ್ ಮಾತ್ರವಲ್ಲ, ಇಡೀ ಗುಜರಾತ್‌ಗೆ ಹೆಸರುವಾಸಿಯಾಗಿದೆ. ಸ್ಪಂಜಿನ ಕೇಕ್ ನಂತಹ ಧೋಕ್ಲಾ ಸವಿಯಬೇಕಾದ ತಿಂಡಿಯಾಗಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1