ಭಾರತ ಮಹಿಳಾ ತಂಡಕ್ಕೆ ಖೋ ಖೋ ವಿಶ್ವ ಚಾಂಪಿಯನ್ ಕಿರೀಟ, ನೇಪಾಳ ಮಣಿಸಿ ದಾಖಲೆ.

ಖೋ ಖೋ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಮಹಿಳಾ ತಂಡ ವಿಶ್ವ ದಾಖಲೆ ಬರೆದಿದೆ. ಫೈನಲ್ ಪಂದ್ಯದಲ್ಲಿ ನೇಪಾಳ ಮಣಿಸಿದ ಭಾರತದ ಟ್ರೋಫಿ ಗೆದ್ದುಕೊಂಡಿದೆ. ಈ ಮೂಲಕ ವಿಶೇಷ ದಾಖಲೆಯೊಂದನ್ನು ಬರೆದಿದೆ. 

ನವದೆಹಲಿ: ಖೋ ಖೋ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಮಹಿಳಾ ತಂಡ ವಿಶ್ವ ದಾಖಲೆ ಬರೆದಿದೆ. ಅಜೇಯವಾಗಿ ಫೈನಲ್ ಪ್ರವೇಶಿಸಿದ್ದ ಭಾರತದ ಮಹಿಳಾ ತಂಡ ಫೈನಲ್ ಪಂದ್ಯದಲ್ಲಿ ನೇಪಾಳ ವಿರುದ್ಧ  78-40 ಅಂಕಗಳ ಭರ್ಜರಿ ಗೆಲುವು ಕಂಡಿದೆ. ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಖೋ ಖೋ ವಿಶ್ವಕಪ್ ಉದ್ಘಾಟನಾ ಟೂರ್ನಿಯಲ್ಲಿ ಆತಿಥೇಯ ಭಾರತ ಪ್ರಶಸ್ತಿ ಗೆಲ್ಲುವ ಮೂಲಕ ಇತಿಹಾಸ ರಚಿಸಿದೆ. ವೇಗ, ಕಾರ್ಯತಂತ್ರ, ಪ್ರತಿಭೆ ಹಾಗೂ  ಮಾಸ್ಟರ್‌ ಕ್ಲಾಸ್‌ ಗೇಮ್ ಪ್ಲಾನ್ ಮೂಲಕ ಭಾರತೀಯ ಮಹಿಳಾ ತಂಡ ಈ ಸಾಧನೆ ಮಾಡಿದೆ.  
 ಮೊದಲ ಅವಧಿಯಿಂದಲೇ ಭಾರತ ಮಹಿಳಾ ತಂಡ ಹೆಚ್ಚು ಅಗ್ರೆಸ್ಸೀವ್ ಆಟಕ್ಕೆ ಒತ್ತು ನೀಡಿತ್ತು. ಇದರ ಫಲವಾಗಿ 7 ಬಾರಿ ನೇಪಾಳ ತಂಡ ಆಲೌಟ್ ಮಾಡಿದ ಭಾರತ 14 ಅಂಕ ಸಂಪಾದಿಸಿತು. ನಾಯಕಿ ಪ್ರಿಯಾಂಕಾ ಇಂಗಳೆ ಉತ್ತಮ ಲಯ ಕಾಯ್ದುಕೊಂಡಿದ ಕಾರಣ ಭಾರತೀಯರು ಅಸಾಧಾರಣ ರೀತಿಯಲ್ಲಿಆಟ ಪ್ರಾರಂಭಿಸಿದರು. ಇದು ವುಮೆನ್‌ ಇನ್‌ ಬ್ಲೂತಂಡಕ್ಕೆ 34 ಅಂಕಗಳನ್ನು ಕಲೆಹಾಕಲು ನೆರವಾದರೆ, ನೇಪಾಳ ತಂಡಕ್ಕೆ ಒಂದೇ ಒಂದು ಡ್ರೀಮ್‌ ರನ್‌ ಅಂಕ ಗಳಿಸಲು ಸಾಧ್ಯವಾಗಲಿಲ್ಲ.

ಟರ್ನ್‌ 3ರಲ್ಲಿ ಟೀಮ್‌ ಇಂಡಿಯಾ ಮತ್ತೊಮ್ಮೆ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿತು, ನೇಪಾಳದ ಡಿಫೆಂಡರ್‌ಗಳಿಗೆ ತಮ್ಮ ಹೆಜ್ಜೆಯಲ್ಲಿ ನೆಲೆಗೊಳ್ಳಲು ಎಂದಿಗೂ ಅವಕಾಶ ನೀಡಲಿಲ್ಲ. ದೀಪಾ ಬಿಕೆ ನೇಪಾಳ ಪರ ನಿಯಮಿತವಾಗಿ ಆಡುತ್ತಿದ್ದರೂ ಅದು ವ್ಯರ್ಥವಾಯಿತು, ಭಾರತೀಯರು ಟ್ರೋಫಿಗೆ ಹತ್ತಿರವಾಗುವುದನ್ನು ಖಚಿತಪಡಿಸಿದರು. ಚೈತ್ರಾ ಬಿ. ಅವರು ಡ್ರೀಮ್‌ ರನ್‌ ಫಾರ್‌ ಇಂಡಿಯಾದ ಮಿಂಚಿ ಟರ್ನ್‌ 4ರಲ್ಲಿಸ್ಕೋರನ್ನು 78 ಅಂಕಗಳಿಗೆ ಏರಿಸಿದರು. 5 ನಿಮಿಷ 14 ಸೆಕೆಂಡುಗಳ ಕಾಲ ಈ ಬ್ಯಾಚ್‌ ಆಡಿತು. ಇದರೊಂದಿಗೆ ಭಾರತ ತಂಡ 2025ರ ಖೋ ಖೋ ವಿಶ್ವಕಪ್‌ ಟೂರ್ನಿಯ ಮೊದಲ ಚಾಂಪಿಯನ್‌ ಆಗಿ ಹೊರಹೊಮ್ಮಿತು.

ಗುಂಪು ಹಂತದಲ್ಲಿದಕ್ಷಿಣ ಕೊರಿಯಾ, ಇರಾನ್‌ ಮತ್ತು ಮಲೇಷ್ಯಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದ ಭಾರತ ಕ್ವಾರ್ಟರ್‌ಫೈನಲ್‌ನಲ್ಲಿಬಾಂಗ್ಲಾದೇಶ ವಿರುದ್ಧ ಹಾಗೂ ಸೆಮಿಫೈನಲ್‌ನಲ್ಲಿದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಫೈನಲ್‌ ಪ್ರವೇಶಿಸಿತ್ತು. ಅಜೇಯವಾಗಿ ಫೈನಲ್ ಪ್ರವೇಶಿಸಿದ್ದ ಭಾರತ ಚೊಚ್ಚಲ ಖೋ ಖೋ ವಿಶ್ಪಕಪ್ ಟ್ರೋಫಿ ಗೆದ್ದುಕೊಂಡಿದೆ. 

Source: https://kannada.asianetnews.com/other-sports/india-women-lift-kho-kho-world-cup-trophy-atter-thrashing-nepal-in-final-sqce4p

Leave a Reply

Your email address will not be published. Required fields are marked *