ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಬಾಲಗೋಕುಲ ಶಿಬಿರಗಳು ಅವಶ್ಯಕ_ ರವಿ ಕೆ.ಅಂಬೇಕರ್.

ಚಿತ್ರದುರ್ಗ: ಜು.6 ಮಕ್ಕಳಲ್ಲಿ ಬಾಲ್ಯದಲ್ಲೇ ಸಂಸ್ಕಾರ ಸಂಸ್ಕೃತಿಗಳ ಬಗ್ಗೆ ಅರಿವು ಮೂಡಿಸುವುದು ಬಹಳ ಮುಖ್ಯ ಬಾಲಸಂಸ್ಕಾರ ಕಲಿಸುವ ‘ಬಾಲಗೋಕುಲ’ದಂಥ ಶಿಬಿರಗಳು ಮಕ್ಕಳಿಗೆ ಹೆಚ್ಚು ಹೆಚ್ಚು ಆಯೋಜನೆಗೊಳ್ಳಬೇಕು. ಇದು ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗದೆ ಬದಲಿಗೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಮತ್ತು ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಅಡಿಪಾಯ ಹಾಕುತ್ತದೆ. ಎಂದು ಯೋಗ ಗುರು ರವಿ ಕೆ.ಅಂಬೇಕರ್ ಅಭಿಪ್ರಾಯ ಪಟ್ಟಿದ್ದಾರೆ.
ಅವರು ಶನಿವಾರ ಚಿತ್ರದುರ್ಗ ತಾಲ್ಲೂಕಿನ ನರೇನಹಾಳ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಚಿತ್ರದುರ್ಗ ವತಿಯಿಂದ ಆಯೋಜಿಸಿದ್ದ ‘ಬಾಲಗೋಕುಲ’ ಮಕ್ಕಳ ವಿಶೇಷ ಶಿಬಿರದಲ್ಲಿ ಮಕ್ಕಳಿಗೆ ಆಟೋಟ ವ್ಯಾಯಾಮ ಯೋಗದ ಬಗ್ಗೆ ತಿಳಿಸುತ್ತಾ ಮಾತನಾಡಿ ಬಾಲಗೋಕುಲ ಶಿಬಿರದಲ್ಲಿ ಮಕ್ಕಳಿಗೆ ನೈತಿಕ ಮೌಲ್ಯಗಳಾದ ಸತ್ಯಸಂಧತೆ, ಪ್ರಾಮಾಣಿಕತೆ, ದಯೆ, ಗೌರವ, ಸಹಾನುಭೂತಿ, ಮತ್ತು ಹಿರಿಯರಿಗೆ ವಿಧೇಯತೆ ತೋರಿಸುವುದನ್ನು ಕಲಿಸಲಾಗುತ್ತದೆ. ಈ ಮೌಲ್ಯಗಳು ಅವರ ಭವಿಷ್ಯದ ಜೀವನದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತವೆ ಎಂದು ಹೇಳಿದರು.
ಇದೇ ಸಂಧರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಸುಭಾನ್ ಮಾತನಾಡಿ
ಮಕ್ಕಳಿಗೆ ತಮ್ಮ ಸಂಸ್ಕೃತಿ, ಇತಿಹಾಸ ಮತ್ತು ಸಂಪ್ರದಾಯಗಳ ಬಗ್ಗೆ ಅರಿವು ಇರಬೇಕು. ಇದು ಅವರಿಗೆ ತಮ್ಮ ಮೂಲವನ್ನು ಅರ್ಥಮಾಡಿಕೊಳ್ಳಲು ಮತ್ತು ಅದರ ಬಗ್ಗೆ ಹೆಮ್ಮೆ ಪಡಲು ಸಹಾಯ ಮಾಡುತ್ತದೆ. ಹಬ್ಬಗಳು, ಆಚರಣೆಗಳು, ಕಥೆಗಳು ಮತ್ತು ಹಾಡುಗಳ ಮೂಲಕ ಈ ಜ್ಞಾನವನ್ನು ನೀಡುವ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ ಬಾಲಗೋಕುಲ ಶಿಬಿರ ಕಾರ್ಯಕ್ರಮ ಮಕ್ಕಳಿಗೆ ತುಂಬಾ ಉಪಯುಕ್ತವಾಗಿದೆ ಬಾಲಗೋಕುಲ ಮಕ್ಕಳಿಗೆ ಶಿಸ್ತು ಮತ್ತು ಆತ್ಮನಿಯಂತ್ರಣವನ್ನು ಕಲಿಸುತ್ತಿದೆ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳಲು, ಸಮಯಕ್ಕೆ ಸರಿಯಾಗಿ ಕಾರ್ಯಗಳನ್ನು ಮಾಡಲು ಮತ್ತು ತಮ್ಮ ಭಾವನೆಗಳನ್ನು ನಿಯಂತ್ರಿಸಲು ಇದು ಅವರಿಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರಾರ್ಥನಗೀತೆ, ಶ್ಲೋಕಗಳು, ದೇಶಭಕ್ತಿಗೀತೆ, ಮಂಕುತಿಮ್ಮನಕಗ್ಗ, ಕಬೀರನದೋಹೆ ದೇಶೀಯ ಆಟಗಳು, ಅಭಿನಯಗೀತೆ, ಹಾಗೂ ಯೋಗ ಕಲಿಸಿಕೊಡಲಾಯಿತು.
ಶಾಲೆಯ ಸಹಶಿಕ್ಷಕರಾದ ನರಸಿಂಹಪ್ಪ, ನಾಗೇಂದ್ರ, ಹಾಗೂ ಶಾಲೆಯ ಮಕ್ಕಳು ಪಾಲ್ಗೊಂಡಿದ್ದರು.