ISSF Junior World Cup: ವಿಶ್ವ ಶೂಟಿಂಗ್‌ನಲ್ಲಿ ಚಿನ್ನಕ್ಕೆ ಮುತ್ತಿಟ್ಟ ಭಾರತದ ಅಭಿನವ್-ಗೌತಮಿ ಜೋಡಿ

ISSF Junior World Cup: ವಿಶ್ವ ಶೂಟಿಂಗ್‌ನಲ್ಲಿ ಚಿನ್ನಕ್ಕೆ ಮುತ್ತಿಟ್ಟ ಭಾರತದ ಅಭಿನವ್-ಗೌತಮಿ ಜೋಡಿ
  1. ಜರ್ಮನಿಯ ಜೂಲ್​ನಲ್ಲಿ ನಡೆಯುತ್ತಿರುವ ಐಎಸ್​ಎಸ್​ಎಫ್ ಜ್ಯೂನಿಯರ್ (ISSF Junior World Cup) 10 ಮೀಟರ್ ಏರ್ ರೈಫಲ್ ಮಿಕ್ಸ್ಡ್ ವಿಭಾಗದಲ್ಲಿ ಭಾರತದ ಶೂಟರ್ ಗಳಾದ ಗೌತಮಿ ಭನೋಟ್ (Gautami Bhanot) ಹಾಗೂ ಅಭಿನವ್ ಶಾ ಜೋಡಿಯು ಚಿನ್ನದ (Gold) ಪದಕಕ್ಕೆ ಮುತ್ತಿಟ್ಟಿದ್ದಾರೆ. ಫೈನಲ್‌ನಲ್ಲಿ ಭಾರತದ ಜೋಡಿ 17-7 ರಲ್ಲಿ ಫ್ರಾನ್ಸ್‌ನ ಓಷಾನ್‌ ಮುಲ್ಲರ್‌ ಮತ್ತು ರೊಮೇನ್ ಆಫ್ರೆರ್‌ ಅವರನ್ನು ಸೋಲಿಸಿ ಚಿನ್ನ ಗೆದ್ದಿತು. ನಾರ್ವೆಯ ಪೆರ್ನೈಲ್ ನೋರ್‌ ವಾಲ್-ಜೆನ್ಸ್‌ ಓಲ್‌ಸ್ರುಡ್ ಜೋಡಿ ಕಂಚಿಗೆ ತೃಪ್ತಿಪಟ್ಟಿತು. ಗೌತಮಿ ಮತ್ತು ಅಭಿವನ್‌ ಅವರು ಅರ್ಹತಾ ಹಂತದಲ್ಲಿ 628.3 ಪಾಯಿಂಟ್ಸ್‌ಗಳೊಂದಿಗೆ ಎರಡನೇ ಸ್ಥಾನ ಪಡೆದುಕೊಂಡಿದ್ದರು. ಕಣದಲ್ಲಿದ್ದ ಭಾರತದ ಇನ್ನೊಂದು ಜೋಡಿ ಸ್ವಾತಿ ಚೌಧರಿ-ಸಲೀಂ 624.3 ಪಾಯಿಂಟ್ಸ್‌ಗಳೊಂದಿಗೆ ಏಳನೇ ಸ್ಥಾನ ಗಳಿಸಿತು.

ಇನ್ನು 10 ಮೀಟರ್ ಏರ್ ಪಿಸ್ತೂಲ್ ಮಿಕ್ಸೆಡ್​ನಲ್ಲಿ ಭಾರತದ ಸೈನ್ಯಮ್ ಹಾಗೂ ಅಭಿನವ್ ಚೌಧರಿ ಜೋಡಿಯು 12 ಅಂಕ ಕಲೆ ಹಾಕಿ ಬೆಳ್ಳಿ ಪದಕ ತಮ್ಮದಾಗಿಸಿದರು. ಈ ವಿಭಾಗದಲ್ಲಿ 16 ಅವಕಾಶಗಳಲ್ಲಿ ನಿಖರ ಗುರಿ ಸಾಧಿಸಿದ ಕೊರಿಯಾದ ಜೂರಿ ಕಿಮ್- ಕಾಂಗ್ ಹಿನ್ ಕಿಮ್ ಜೋಡಿಯು ಸ್ವರ್ಣ ಪದಕ ಗೆದ್ದುಕೊಂಡಿತು. ಅತ್ತ ಮಹಿಳೆಯರ ಏರ್ ಪಿಸ್ತೂಲ್ ವಿಭಾಗದಲ್ಲಿ ಸೈನ್ಯಮ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು.

ನಮ್ಮ ಹೋರಾಟಕ್ಕೆ ಉದ್ಯೋಗ ಅಡ್ಡಿಯಾಗುವುದಾದರೆ ಅದನ್ನು ಬಿಡುವುದಕ್ಕೂ ನಾವು ಹಿಂಜರಿಯುವುದಿಲ್ಲ: ಕುಸ್ತಿಪಟುಗಳು

ಅಂತೆಯೆ ಭಾರತದ ಸುರುಚಿ ಇಂದರ್‌ ಸಿಂಗ್‌ ಮತ್ತು ಶುಭಮ್‌ ಬಿಸ್ಲಾ ಅವರು ಕಂಚು ಪಡೆದುಕೊಂಡರು. ಮೂರನೇ ಸ್ಥಾನಕ್ಕಾಗಿ ನಡೆದ ಈ ಪೈಪೋಟಿಯಲ್ಲಿ ಅವರು 16 ಪಾಯಿಂಟ್ಸ್‌ ಗಳಿಸಿದರೆ, ಉಜ್ಬೆಕಿಸ್ತಾನದ ನಿಗಿನಾ ಸೈದ್‌ಕುಲೊವಾ ಮುಹಮ್ಮದ್ ಕಮಲೋವ್ (14) ನಾಲ್ಕನೇ ಸ್ಥಾನ ಪಡೆದುಕೊಂಡರು.

ಶೂಟಿಂಗ್‌ ಸ್ಪರ್ಧೆಯಲ್ಲಿ ಭಾರತದ ಧನುಷ್‌ ಶ್ರೀಕಾಂತ್‌ ಕೂಡ ಬಂಗಾರದ ಪದಕ ಜಯಿಸಿದ್ದಾರೆ. ಅವರು ಪುರುಷರ 10 ಮೀ. ಏರ್‌ ರೈಫ‌ಲ್‌ ಸ್ಪರ್ಧೆಯಲ್ಲಿ ಈ ಸಾಧನೆಗೈದರು. 24 ಶಾಟ್‌ಗಳ ಫೈನಲ್‌ನಲ್ಲಿ ಧನುಷ್‌ ಶ್ರೀಕಾಂತ್‌ 249.4 ಅಂಕ ಸಂಪಾದಿಸಿದರು. ಈ ಸಂದರ್ಭದಲ್ಲಿ ಸ್ವೀಡನ್‌ನ ಪೊಂಟಸ್‌ ಕ್ಯಾಲಿನ್‌ ಮತ್ತು ಧನುಷ್‌ ಸಮಬಲ ಸಾಧನೆಗೈದರು. ಆದರೆ ಕ್ಲಿನಿಕಲ್‌ ಫಿನಿಶ್‌ನಲ್ಲಿ 1.3 ಅಂಕಗಳ ಹಿನ್ನಡೆ ಕಂಡ ಕ್ಯಾಲಿನ್‌ಗೆ ಬೆಳ್ಳಿ ಲಭಿಸಿತು.

ಅತ್ತ ದಕ್ಷಿಣ ಕೊರಿಯಾದ ಯೆಚೊಯಾನ್​ನಲ್ಲಿ ನಡೆಯುತ್ತಿರುವ ಏಷ್ಯನ್‌ 20 ವರ್ಷದೊಳಗಿನವರ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ಶಾಟ್‌ಪಟ್‌ ಸ್ಪರ್ಧೆಯಲ್ಲಿ ಸಿದ್ಧಾರ್ಥ್‌ ಚೌಧರಿ ಭಾರತಕ್ಕೆ ಮೂರನೇ ಚಿನ್ನವನ್ನು ತಂದುಕೊಟ್ಟರು. 17 ವರ್ಷದ ಸಿದ್ಧಾರ್ಥ್‌ ತಮ್ಮ ಮೂರನೇ ಪ್ರಯತ್ನದಲ್ಲಿ ಶಾಟ್‌ಪಟ್‌ಅನ್ನು 19.52 ಮೀಟರ್‌ ಎಸೆಯುವ ಮೂಲಕ ಚಿನ್ನದ ಪದಕ ಗಳಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/other-sports/indian-shooters-gautami-bhanot-and-abhinav-shaw-claim-the-gold-medal-in-issf-junior-world-cup-vb-595027.html

Leave a Reply

Your email address will not be published. Required fields are marked *