ಫಿನ್‌ಲ್ಯಾಂಡ್‌ನ ತುರ್ಕುದಲ್ಲಿ ಮಂಗಳವಾರ ನಡೆದ ಪಾವೊ ನೂರ್ಮಿ ಗೇಮ್ಸ್‌ನಲ್ಲಿ ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ತಮ್ಮ ಚೊಚ್ಚಲ ಚಿನ್ನದ ಪದಕವನ್ನು ಗೆದ್ದರು.

ಫಿನ್ ಲ್ಯಾಂಡ್: ಫಿನ್‌ಲ್ಯಾಂಡ್‌ನ ತುರ್ಕುದಲ್ಲಿ ಮಂಗಳವಾರ ನಡೆದ ಪಾವೊ ನೂರ್ಮಿ ಗೇಮ್ಸ್‌ನಲ್ಲಿ ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು, ತಮ್ಮ ಚೊಚ್ಚಲ ಚಿನ್ನದ ಪದಕವನ್ನು ಗೆದ್ದರು.
2022 ರಲ್ಲಿ ಇದೇ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಚೋಪ್ರಾ, ತಮ್ಮ ಮೂರನೇ ಪ್ರಯತ್ನದಲ್ಲಿ 85.97 ಮೀ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕ ಮುಡಿಗೇರಿಸಿಕೊಂಡರು. ಆರಂಭದಲ್ಲಿ 83. 62 ಮೀ ಎಸೆಯುವ ಮೂಲಕ ನೀರಜ್ ಮುನ್ನಡೆ ಸಾಧಿಸಿದ್ದರು. ಆದರೆ, ಎರಡನೇ ಸುತ್ತಿನ ನಂತರ ಫಿನ್‌ಲ್ಯಾಂಡ್‌ನ ಆಲಿವರ್ ಹೆಲಾಂಡರ್, 83.96 ಮೀಟರ್‌ಗೆ ಜಾವೆಲಿನ್ ಎಸೆದ ಕಾರಣ ನೀರಜ್ ಎರಡನೇ ಸ್ಥಾನಕ್ಕೆ ಕುಸಿದರು. ಆದರೆ ಮೂರನೇ ಪ್ರಯತ್ನದಲ್ಲಿ 85. 97 ಮೀಟರ್ ಗೆ ಎಸೆಯುವ ಮೂಲಕ ಮತ್ತೆ ಮುನ್ನಡೆ ಸಾಧಿಸಿದರು. ಇತರ ಏಳು ಸ್ಪರ್ಧಿಗಳು ಇವರಿಗೆ ಪ್ರಬಲ ಪೈಪೋಟಿ ನೀಡುವಲ್ಲಿ ವಿಫಲರಾದರು.
ಫಿನ್‌ಲ್ಯಾಂಡ್‌ನ ಮತ್ತೋರ್ವ ಅಥ್ಲೀಟ್ ಟೋನಿ ಕೆರಾನೆನ್ 84.19 ಮೀ ಎಸೆಯುವ ಮೂಲಕ ಚೋಪ್ರಾ ಅವರ ಸಮೀಪಕ್ಕೆ ಬಂದರು, ಆದರೆ ಯಾರೂ ಭಾರತೀಯ ಆಟಗಾರನಿಗೆ ಸವಾಲು ನೀಡಲಿಲ್ಲ. ಈ ಹಿಂದೆ ಭುವನೇಶ್ವರದಲ್ಲಿ ನಡೆದ ರಾಷ್ಟ್ರೀಯ ಫೆಡರೇಶನ್ ಕಪ್ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದ ಚೋಪ್ರಾ ಅವರು ಕಡಿಮೆ 82.27 ಮೀಟರ್ ಜಾವೆಲಿನ್ ಎಸೆದು ಚಿನ್ನದ ಪದಕ ಪಡೆದಿದ್ದರು.
ಪಾವೊ ನೂರ್ಮಿ ಗೇಮ್ಸ್ ನಂತರ ಮುಂದಿನ ಜುಲೈ 7 ರಂದು ಪ್ಯಾರಿಸ್ ಡೈಮಂಡ್ ಲೀಗ್‌ನಲ್ಲಿ ಚೋಪ್ರಾ ಕಾಣಿಸಿಕೊಳ್ಳಲಿದ್ದಾರೆ.
Source : https://www.kannadaprabha.com/sports/2024/Jun/18/neeraj-chopra-strikes-gold-at-paavo-nurmi-games