Indira Canteen: ಇಂದಿರಾ ಕ್ಯಾಂಟೀನ್ ಹೊಸ ಮೆನು ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ.

Indira Canteen new Menu: ‘ಬಡಜನರ ಹಸಿವು ನೀಗಿಸುವ ಉದ್ದೇಶದೊಂದಿಗೆ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್‍ಗಳು ಈಗ ಮತ್ತಷ್ಟು ಶುಚಿ-ರುಚಿಯಾಗಿ ಹೊಸ ಬಗೆಯ ಆಹಾರದೊಂದಿಗೆ ಗ್ರಾಹಕರ ಸೇವೆಗೆ ಸಿದ್ಧಗೊಂಡಿವೆ. ರಿಯಾಯಿತಿ ದರದಲ್ಲಿ ಸ್ವಾದಿಷ್ಟ ತಿಂಡಿ-ಊಟ ದೊರೆಯುವ ಇಂದಿರಾ ಕ್ಯಾಂಟೀನ್ ಯೋಜನೆಯ ಸಂಪೂರ್ಣ ಸದುಪಯೋಗ ಪಡೆಯಿರಿ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ​

  • ಹಸಿದವರ ಹೊಟ್ಟೆಗೆ ಅಕ್ಷಯಪಾತ್ರೆ ಇಂದಿರಾ ಕ್ಯಾಂಟೀನ್​
  • ಅಗ್ಗದ ದರದಲ್ಲಿ ದೇಹಕ್ಕೆ ಒಗ್ಗುವ ಊಟ-ಉಪಹಾರ
  • ಇಂದಿರಾ ಕ್ಯಾಂಟೀನ್‍ ಹೊಸ ಮೆನು ಹೀಗಿದೆ ನೋಡಿ…

ಬೆಂಗಳೂರು: ಬಡವರಿಗೆ ಕಡಿಮೆ ಖರ್ಚಿನಲ್ಲಿ ಆಹಾರ ಪೂರೈಸುವ ಸಿಎಂ ಸಿದ್ದರಾಮಯ್ಯರ ಕನಸಿನ ಯೋಜನೆ ಇಂದಿರಾ ಕ್ಯಾಂಟೀನ್ ಹಸಿದವರ ಹೊಟ್ಟೆ ತುಂಬಿಸುತ್ತಿದೆ. ಲಕ್ಷಾಂತರ ಜನರ ಹೊಟ್ಟೆ ತುಂಬಿಸುವ ಈ ಯೋಜನೆ ಬಡವರ ಪಾಲಿಗೆ ಅನ್ನಪೂರ್ಣೆ ಎಂದು ಹೇಳಬಹದು. ಇದೀಗ ಮತ್ತಷ್ಟು ಶುಚಿ-ರುಚಿಯಾಗಿ ಹೊಸ ಬಗೆಯ ಆಹಾರದೊಂದಿಗೆ ಜನರ ಸೇವೆಗೆ ಇಂದಿರಾ ಕ್ಯಾಂಟೀನ್ ಸಜ್ಜಾಗಿದೆ.    

ಹೌದು, ಯಾವುದೇ ಹೋಟೆಲ್‌ ಮೆನುವಿಗೂ ಕಡಿಮೆ ಇಲ್ಲವೆಂಬಂತೆ  ಇಂದಿರಾ ಕ್ಯಾಂಟೀನ್ ಹೊಸ ಮೆನುವನ್ನು ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದಾರೆ. ಈ ಹೊಸ ಮೆನುವಿನಲ್ಲಿ ರಾಜ್ಯದ ಎಲ್ಲಾ ಪ್ರದೇಶದ ಊಟ-ತಿಂಡಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.  

ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಇಂದಿರಾ ಕ್ಯಾಂಟೀನ್‍ ಹೊಸ ಮೆನುವನ್ನು ಬಿಡುಗಡೆ ಮಾಡಿದ್ದಾರೆ. ‘ಬಡಜನರ ಹಸಿವು ನೀಗಿಸುವ ಉದ್ದೇಶದೊಂದಿಗೆ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್‍ಗಳು ಈಗ ಮತ್ತಷ್ಟು ಶುಚಿ-ರುಚಿಯಾಗಿ ಹೊಸ ಬಗೆಯ ಆಹಾರದೊಂದಿಗೆ ಗ್ರಾಹಕರ ಸೇವೆಗೆ ಸಿದ್ಧಗೊಂಡಿವೆ. ರಿಯಾಯಿತಿ ದರದಲ್ಲಿ ಸ್ವಾದಿಷ್ಟ ತಿಂಡಿ-ಊಟ ದೊರೆಯುವ ಇಂದಿರಾ ಕ್ಯಾಂಟೀನ್ ಯೋಜನೆಯ ಸಂಪೂರ್ಣ ಸದುಪಯೋಗ ಪಡೆಯಿರಿ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹಸಿದವರ ಹೊಟ್ಟೆಗೆ ಅಕ್ಷಯಪಾತ್ರೆ ಇಂದಿರಾ ಕ್ಯಾಂಟೀನ್​ನಲ್ಲಿ ಅಗ್ಗದ ದರದಲ್ಲಿ ದೇಹಕ್ಕೆ ಒಗ್ಗುವ ಊಟ-ಉಪಹಾರ ನೀಡಲಾಗುತ್ತಿದೆ.

ಬಡಜನರ ಹಸಿವು ನೀಗಿಸುವ ಉದ್ದೇಶದೊಂದಿಗೆ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್ ಗಳು ಈಗ ಮತ್ತಷ್ಟು ಶುಚಿ, ರುಚಿಯಾಗಿ ಹೊಸ ಬಗೆಯ ಆಹಾರದೊಂದಿಗೆ ಗ್ರಾಹಕರ ಸೇವೆಗೆ ಸಿದ್ಧಗೊಂಡಿವೆ.
ರಿಯಾಯಿತಿ ದರದಲ್ಲಿ ಸ್ವಾದಿಷ್ಟ ತಿಂಡಿ, ಊಟ ದೊರೆಯುವ ಇಂದಿರಾ ಕ್ಯಾಂಟೀನ್ ಯೋಜನೆಯ ಸಂಪೂರ್ಣ ಸದುಪಯೋಗ ಪಡೆಯಿರಿ.
-… pic.twitter.com/c2k9uEQQFd

— CM of Karnataka (@CMofKarnataka) December 20, 2023

ಇಂದಿರಾ ಕ್ಯಾಂಟೀನ್‍ ಹೊಸ ಮೆನು ಹೀಗಿದೆ ನೋಡಿ…

ಬೆಳಗಿನ ಉಪಹಾರಕ್ಕೆ ಪ್ಲೇಟ್​ಗೆ 5 ರೂ. (ಬೆಳಿಗ್ಗೆ 7ರಿಂದ 10)

ಇಡ್ಲಿ-ಸಾಂಬಾರ್​, ಇಡ್ಲಿ-ಚಟ್ನಿ

ವೆಜ್​ ಪುಲಾವ್​-ರಾಯಿತಾ, ಬಿಸಿಬೇಳೆ ಬಾತ್​​-ಬೂಂದಿ,

ಖಾರಾಬಾತ್​-ಚಟ್ನಿ, ಪೊಂಗಲ್​-ಚಟ್ನಿ

ಚೌಚೌಬಾತ್​- ಚಟ್ನಿ, ಬ್ರೆಡ್​​-ಜಾಮ್

ಮಂಗಳೂರು ಬನ್ಸ್​​ ಮತ್ತು ಬನ್ಸ್  

ಮಧ್ಯಾಹ್ನದ ಊಟಕ್ಕೆ ಪ್ಲೇಟ್​ಗೆ 10 ರೂ. (ಮಧ್ಯಾಹ್ನ 1ರಿಂದ 3)

ಅನ್ನ-ತರಕಾರಿ ಸಂಬಾರು, ಖೀರು

ಅನ್ನ-ತರಕಾರಿ ಸಾಂಬಾರು, ರಾಯಿತಾ

ಅನ್ನ-ತರಕಾರಿ ಸಾಂಬಾರು, ಮೊಸರನ್ನ

ರಾಗಿ ಮುದ್ದೆ-ಸೊಪ್ಪಿನ ಸಾರು, ಖೀರು

ಚಪಾತಿ-ಸಾಗು, ಖೀರು  

ರಾತ್ರಿ ಊಟಕ್ಕೆ ಪ್ಲೇಟ್​ಗೆ 10 ರೂ. (ಸಂಜೆ 7:30 ರಿಂದ ರಾತ್ರಿ 9)

ಅನ್ನ-ತರಕಾರಿ ಸಾಂಬಾರು

ಅನ್ನ-ತರಕಾರಿ ಸಾಂಬಾರು, ರಾಯಿತಾ

ರಾಗಿ ಮುದ್ದೆ-ಸೊಪ್ಪಿನ ಸಾರು

ಚಪಾತಿ-ವೆಜ್​​ ಗ್ರೇವಿ ಇರುತ್ತದೆ.

ಸ್ಪೆಷಲ್

ಮಾವಿನಕಾಯಿ ಸೀಸಸ್​ನಲ್ಲಿ ಮಾವಿನಕಾಯಿ ಚಿತ್ರಾನ್ನ ಲಭ್ಯವಿರಲಿದೆ.

Source : https://zeenews.india.com/kannada/karnataka/indira-canteen-cm-siddaramaiah-launched-the-new-menu-of-indira-canteen-178202

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *