ಆ. 20ರಿಂದ ಚಿತ್ರದುರ್ಗದಲ್ಲಿ ನಡೆಯಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಪಂಚರಾತ್ರೋತ್ಸವದ ಬಗ್ಗೆ ಮಾಹಿತಿ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಆ. 19: ಶ್ರೀ ಗುರುಸಾರ್ವಭೌಮರು ಮಂತ್ರಾಲಯ ಮಹಾಕ್ಷೇತ್ರದಲ್ಲಿ ಸಶರೀರರಾಗಿ ಬೃಂದಾವನ ಪ್ರವೇಶ ಮಾಡಿದ ಸ್ಮರಣಾರ್ಥವಾಗಿ ಆಚರಿಸುವ 353ನೇ ಆರಾಧನಾ ಪಂಚರಾತ್ರೋತ್ಸವ ಆ. 20ರಿಂದ 22 ರವರೆಗೆ ಈ ಮೂರು ದಿನಗಳಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಗರದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ನಡೆಸಲು ಸಂಕಲ್ಪಿಸಲಾಗಿದ್ದು, ಇದರ ಅಂಗವಾಗಿ ಸೋಮವಾರ ಸಂಜೆ ಧ್ವಜಾರೋಹಣ, ಗೋಪೂಜೆ, ಧನ-ಧಾನ್ಯ ಪೂಜೆ, ಲಕ್ಷ್ಮೀ ಪೂಜೆ, ಸ್ವಸ್ತಿ ವಾಚನ, ಮಹಾಮಂಗಳಾರತಿ ಕಾರ್ಯಕ್ರಮವನ್ನು ನಡೆಸಲಾಯಿತು.

353ನೇ ಆರಾಧನಾ ಮಹೋತ್ಸವದ ಅಂಗವಾಗಿ ಇಂದು ಬೆಳಿಗ್ಗೆ ಋಗ್ವದ, ಯಜುರ್ವೇದ, ನಿತ್ಯ, ನೂತನ ಉಪಾಕರ್ಮ ಕಾರ್ಯಕ್ರಮ ನಡೆಸಲಾಯಿತು. ಸಂಜೆ ಧ್ವಜಾರೋಹಣ, ಗೋಪೂಜೆ, ಧನ-ಧಾನ್ಯ ಪೂಜೆ, ಲಕ್ಷ್ಮೀ ಪೂಜೆ, ಸ್ವಸ್ತಿ ವಾಚನ, ಮಹಾಮಂಗಳಾರತಿ ನಡೆಸಲಾಯಿತು. ಇದರಲ್ಲಿ ಮೂರು ದಿನಗಳ ನಡೆಯುವ ರಾಯರ ಆರಾಧನೆಗೆ ಅಗತ್ಯವಾಗಿ ಬೇಕಾದ ವಿವಿಧ ರೀತಿಯ ಧಾನ್ಯಗಳಾದ ಅಕ್ಕಿ,ಬೇಳೆ,ಬೆಲ್ಲ,ಎಣ್ಣೆ, ತರಕಾರಿಗಳು ಸೊಪ್ಪು, ರಾಯರಿಗೆ ಉಡಿಸುವ ಪಂಚೆ, ಬಾಳೆಹಣ್ಣು, ಸೇಬು, ತೆಂಗಿನ ಕಾಯಿ, ಎಳೆ ನೀರು,ಸೇಬು, ದಾಳಿಂಬೆ ಮೋಸುಂಬೆ, ಕಲ್ಲಂಗಡಿ, ಹುಣಸೇಹಣ್ಣು, ದೀಪದ ಬತ್ತಿಗಳನ್ನು ಪೂಜೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬ್ರಾಹ್ಮಣ ಸಂಘ(ರಿ)ದ ಅಧ್ಯಕ್ಷರಾದ ಪಿ.ಎಸ್.ಮಂಜುನಾಥ್, ಕಾರ್ಯದರ್ಶಿ ದೀಪಾನಂದ ಉಪಾಧ್ಯ ಮತ್ತು ಸಹೋದರರು ಶ್ರೀಗುರುರಾಯಸೇವಾ ಸಂಘದ ಅಧ್ಯಕ್ಷರಾದ ವೇದವ್ಯಾಸಾಚಾರ್, ಶ್ರೀ ಹರಿವಾಯು ಗುರು ಸೇವಾ ಟ್ರಸ್ಟ್‍ನ ಅಧ್ಯಕ್ಷರಾದ ಟಿ.ಕೆ. ನಾಗರಾಜ್‍ರಾವ್ ಭಾಗವಹಿಸಿದ್ದರು.

ಆ. 20ರ ಮಂಗಳವಾರ ಶ್ರೀ ಗುರುಸಾರ್ವಭೌಮರ ಪೂರ್ವಾರಾಧನೆ ಆ. 21ನೇ ಬುಧವಾರ ಶ್ರೀ ಗುರುಸಾರ್ವ ಭೌಮರ ಮಧ್ಯಾರಾಧನೆ,ಆ. 22ನೇ ಗುರುವಾರ ಶ್ರೀ ಗುರುಸಾರ್ವಭೌಮರ ಉತ್ತರಾರಾಧನೆ ಪ್ರಾತ: 10 ಗಂಟೆಗೆ ಶ್ರೀ ಗುರುಸಾರ್ವಭೌಮರ ಉತ್ತರಾರಾಧನೆ ಪ್ರಯುಕ್ತ ಮಹಾರಥೋತ್ಸವವು ಚಿತ್ರದುರ್ಗದ ರಾಜಬೀದಿ ಗಳಲ್ಲಿ ವಿವಿಧ ಭಜನಾಮಂಡಳಿಗಳು ಹಾಗೂ ಶ್ರೀ ಗುರುಸಾರ್ವಭೌಮರ ಭಕ್ತರೊಂದಿಗೆ ಜರುಗುವುದು. ಆ 23 ನೇ ಶುಕ್ರವಾರ ಶ್ರೀ ಸುಜ್ಞಾನೇಂದ್ರತೀರ್ಥರ ಆರಾಧನೆ, ಪವಮಾನ ಹೋಮ, ಸರ್ವಸಮರ್ಪಣೋತ್ಸವ ಕಾರ್ಯಕ್ರಮ ನಡೆಯಲಿದೆ.

ಆರಾಧನಾ ದಿನತ್ರಯಗಳಲ್ಲಿ ಬೆಳಿಗ್ಗೆ 05.30ಕ್ಕೆ ಬೆಳಿಗ್ಗೆ 07.30ಕ್ಕೆ : ನಿರ್ಮಾಲ್ಯ ಅಷ್ಟೋತ್ತರ ಸಹಿತ ಫಲಪಂಚಾಮೃತ ಅಭಿಷೇಕ ಬೆಳಿಗ್ಗೆ 09.30ಕ್ಕೆ : ಉತ್ಸವರಾಯರ ಪಾದಪೂಜೆ, ಕನಕಾಭಿಷೇಕ ಬೆಳಿಗ್ಗೆ 12.00ಕ್ಕೆ : ನೈವೇದ್ಯ, ಅಲಂಕಾರ ಪಂಕ್ತಿ, ಹಸ್ತೋದಕ,ಮಹಾಮಂಗಳಾರತಿ, ತೀರ್ಥಪ್ರಸಾದ ಬೆಳಿಗ್ಗೆ 11.00 ರಿಂದ : ಭಜನಾ ಕಾರ್ಯಕ್ರಮ ಸಂಜೆ 05.30 ರಿಂದ 07.30ವರೆಗೆ : ಸಾಂಸ್ಕೃತಿಕ ಕಾರ್ಯಕ್ರಮ ಸಂಜೆ 07.30 ರಿಂದ 09.00ವರೆಗೆ : ರಜತ ರಥೋತ್ಸವ, ಸ್ವಸ್ತಿವಾಚನ, ಅಷ್ಟಾವಧಾನ, ಮಹಾಮಂಗಳಾರತಿ, ಮಹಾ ಅನ್ನಸಂತರ್ಪಣೆ (ರಾಯರ ಮಹಾಪ್ರಸಾದ) ವಿತರಿಸಲಾಗುವುದು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆ. 20 ರಂದು ಬೆಳಿಗ್ಗೆ 11.00 ರಿಂದ ಭಜನೆ – ಶ್ರೀ ಪಾಂಡುರಂಗ ಭಜನಾ ಮಂಡಳಿ ಸಂಜೆ 5.30 ರಿಂದ 7.30 ರವರೆಗೆ ಭರತನಾಟ್ಯ ಕಾರ್ಯಕ್ರಮ ನಾಟ್ಯಶ್ರೀ ಭರತನಾಟ್ಯ ಶಾಲೆ, ಬೆಂಗಳೂರು ಇವರಿಂದ, ಆ. 21 ನೇ ಬುಧವಾರ ಬೆಳಿಗ್ಗೆ 11.00 ರಿಂದ ಭಜನೆ – ಶ್ರೀ ಸಪ್ತಗಿರಿ ಭಜನಾ ಮಂಡಳಿಯವರಿಂದ ಸಾಯಂಕಾಲ 5.30 ರಿಂದ 7.30 ರವರೆಗೆ ದಾಸವಾಣಿ ಕಾರ್ಯಕ್ರಮ.

(ಹಿಂದುಸ್ತಾನಿ) ಶ್ರೀ ಸುಜೀತ್ ಕುಲಕರ್ಣಿ ಇವರಿಂದ ಆ. 22 ನೇ ಗುರುವಾರ ಸಾಯಂಕಾಲ 5.30 ರಿಂದ ಶ್ರೀ ರಾಘವೇಂದ್ರ ಸ್ವಾಮಿಗಳವರ ಸ್ಮರಣೆ ರೂಪಕ, ಚಿತ್ರದುರ್ಗದ ಶ್ರೀ ಗುರುರಾಜರ ಭಕ್ತರಿಂದ ಆ 23 ನೇ ಶುಕ್ರವಾರ ಬೆಳಿಗ್ಗೆ 11.00 ರಿಂದ ಭಜನೆ ಶ್ರೀ ಬ್ರಹ್ಮಚೈತನ್ಯ ಮಹಿಳಾ ಭಜನಾ ಮಂಡಳಿಯವರಿಂದ ಸಂಜೆ 5.30 ರಿಂದ 7.30ರವರೆಗೆ ಚಂಪಕ ಶ್ರೀಧರ್ ಮತ್ತು ಶಿಷ್ಯವೃಂದದವರಿಂದ ಕರ್ನಾಟಕ ಸಂಗೀತ ಕಾರ್ಯಕ್ರಮ ನಡೆಯಲಿದೆ. ಶ್ರೀ ಗುರುರಾಜರ ಆರಾಧನಾ ವೈಭವವನ್ನು ಕಂಡು ಭಕ್ತರು ಕಣ್ಮನ ತುಂಬಿಕೊಳ್ಳಬಹುದಾಗಿದೆ. ಕಾರಣ ಆಸ್ತಿಕ ಸಜ್ಜನರು ಈ ಮೂರು ದಿವಸಗಳ ಕಾಲ ಶ್ರೀಮಠಕ್ಕೆ ಆಗಮಿಸಿ ಶ್ರೀ ಗುರುರಾಜರ ದರ್ಶನ, ಸೇವಾ ಸೌಭಾಗ್ಯವನ್ನು ಪಡೆದು ಆರಾಧನಾ ಮಹೋತ್ಸವದಲ್ಲಿ ಭಾಗವಹಿಸುವಂತೆ ಭಕ್ತರಲ್ಲಿ ಮನವಿ ಮಾಡಲಾಗಿದೆ.

Leave a Reply

Your email address will not be published. Required fields are marked *