ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ರಾಜ್ಯಮಟ್ಟದ ಪರಿಶಿಷ್ಟ ಜಾತಿ ಸಮಾವೇಶ: ಎಚ್. ಆಂಜನೇಯ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 30

ಸಂವಿಧಾನದ ರಕ್ಷಕರಾದ ರಾಜ್ಯಪಾಲರು ಸರ್ಕಾರದ ತೀರ್ಮಾನಗಳನ್ನು ಅನುಷ್ಠಾನ ಮಾಡಬೇಕು. ನೀವು ಒಪ್ಪಿದರೂ.. ಒಪ್ಪದೇ ಇದ್ದರೂ.ಒಳ ಮೀಸಲಾತಿ ಅನುಷ್ಠಾನಗೊಳ್ಳುತ್ತದೆ ಎಂಬ ವಿಶ್ವಾಸವನ್ನು ಮಾಜಿ ಸಚಿವ ಎಚ್.ಆಂಜನೇಯ ವ್ಯಕ್ತಪಡಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಳ ಮೀಸಲಾತಿಯನ್ನು ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತಂದಿದೆ.ಆದರೆ ಇದರಿಂದಾಗಿ ಅಲೆಮಾರಿ ಸಮುದಾಯಕ್ಕೆ ಅನ್ಯಾಯವಾಗಿದೆ.ಅಸ್ಪೃಶ್ಯರಾದ ಅಲೆಮಾರಿ ಸಮುದಾಯಕ್ಕೆ ಶೇ 1% ರಷ್ಟು ಒಳ ಮೀಸಲಾತಿಯನ್ನು ಕೊಡಬೇಕಾಗಿತ್ತು, ಆದರೆ ಅದನ್ನು ಬೇರೆ ವರ್ಗದವರ ಜೊತೆ ಸೇರಿಸಿದ್ದಾರೆ,ಇದನ್ನು ವಿರೋಧಿಸಿ ಅಲೆಮಾರಿಗಳು ಹೈಕೋರ್ಟ್‍ಲ್ಲಿ ಅರ್ಜಿ ಸಲ್ಲಿಸಿ ಸ್ಟೇ ತಂದಿದ್ದಾರೆ ಇದನ್ನು ಮುಂದೆ ಸರಿಪಡಿಸಬಹುದು, ಎಸ್.ಸಿ ಆಯೋಗ ಇರುತ್ತೆ.. ಇದರ ಮುಖಾಂತರ ಮುಂದೆ ಬದಲಾವಣೆ ತರಬಹುದು ಎಂದು ಮನವರಿಕೆ ಮಾಡಿದರೂ ಸಹ ಅವರು ಹೈಕೋರ್ಟ್‍ನಲ್ಲಿ ಅರ್ಜಿಯನ್ನು ವಾಪಾಸ್ ಪಡೆದಿಲ್ಲ.ಇದರಿಂದ ನಮ್ಮ ಸಮುದಾಯದವರು ಗೊಂದಲಕ್ಕೆ ಒಳಗಾಗಿದ್ದಾರೆ.. ಆದರೆ ಯಾವುದೇ ಗೊಂದಲಕ್ಕೆ ಒಳಗಾಗುವುದು ಬೇಡ ಎಂದು ಸಮುದಾಯಕ್ಕೆ ಧೈರ್ಯವನ್ನು ತುಂಬಿದ್ದಾರೆ.

ಈಗಾಗಲೇ ಶಿಕ್ಷಣ ಕ್ಷೇತ್ರದಲ್ಲಿ ಒಳ ಮೀಸಲಾತಿ ಅನುಷ್ಠಾನಗೊಂಡಿದೆ,ಉದ್ಯೋಗಕ್ಕೆ ಮಾತ್ರ ತಡೆಯಿದೆ, ಈಗಾಗಲೇ ಒಳ ಮೀಸಲಾತಿ ಅನುಷ್ಠಾನಗೊಂಡಿದೆ ಆದರೆ ಕಾನೂನಾತ್ಮಕವಾಗಿ ಬಲ ಇರಲಿ ಎಂದು ರಾಜ್ಯಪಾಲರಿಗೆ ಕಳುಹಿಸಿಕೊಡಲಾಗಿದೆ.ಆದರೆ ರಾಜ್ಯಪಾಲರು ಮೀಸಲಾತಿಯ ಪ್ರಮಾಣ ಶೇ 50% ರಷ್ಟು ಮೀರಿದೆ ಎಂಬ ಕಾರಣ ನೀಡಿ ವಾಪಾಸ್ ಕಳುಹಿಸಿದ್ದಾರೆ. ಸಂವಿಧಾನದ ರಕ್ಷಕರಾದ ರಾಜ್ಯಪಾಲರು ಸರ್ಕಾರದ ತೀರ್ಮಾನಗಳನ್ನು ಅನುಷ್ಠಾನ ಮಾಡಬೇಕು. ನೀವು ಒಪ್ಪಿದರೂ. ಒಪ್ಪದೇ ಇದ್ದರೂ.. ಒಳ ಮೀಸಲಾತಿ ಅನುಷ್ಠಾನಗೊಳ್ಳುತ್ತದೆ ಎಂದ ಅಂಜನೇಯ ಆದರೂ ಎರಡೂ ಸದನಗಳಲ್ಲಿ ಸರ್ವಾನುಮತದಿಂದ ಒಪ್ಪಿರುವ ಈ ಬಿಲ್‍ನ್ನು ಸಂವಿಧಾನದ ರಕ್ಷಕರಾಗಿ ರಾಜ್ಯಪಾಲರು ಅನುಮೋದನೆ ಮಾಡಬೇಕು ಎಂದು ಒತ್ತಾಯ ಮಾಡಲಿದ್ದೇವೆ ಎಂದರು.

ಸರ್ಕಾರ ಖಾಲಿರುವ ಉದ್ಯೋಗಗಳನ್ನು ತುಂಬಲು ಮುಂದಾಗಬೇಕು, ನೇಮಕಾತಿ ಪ್ರಕ್ರಿಯೆಗಳನ್ನು ಪ್ರಾರಂಭ ಮಾಡಬೇಕು, ಅದೇ ರೀತಿ ಬ್ಯಾಕ್‍ಲಾಗ್ ಹುದ್ದೆಗಳನ್ನು ಸಹ ತುಂಬಲು ಸರ್ಕಾರ ಕ್ರಮ ಕೈಗೊಳ್ಳಬೇಕು, ಹಾಗೆಯೇ ನಿರುದ್ಯೋಗ ಯುವಕರ ಕಣ್ಣೀರು ಒರೆಸಬೇಕೆಂದು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದು, ಇಂದಿರಾ ಸಹಾನಿ ಪ್ರಕರಣದಲ್ಲಿ ಮೀಸಲಾತಿಯನ್ನು ಶೇ.50 ಮೀರಬಾರದು ಎಂದು ನ್ಯಾಯಾಲಯ ಹೇಳಿತ್ತು. ಆದರೆ, ವಿಶೇಷ ಸಂದರ್ಭಗಳಲ್ಲಿ ರಾಜ್ಯದಲ್ಲಿ ಹಿಂದುಳಿದವರು, ಬಡವರು ಹೆಚ್ಚಾಗಿದ್ದಾಗ ಮೀರಲು ಅವಕಾಶ ಇದೆ. ಬೇರೆ ಬೇರೆ ರಾಜ್ಯಗಳಲ್ಲಿ ಮಾಡಿರುವಂತೆ ಇಲ್ಲಿಯೂ ಮೀಸಲಾತಿ ಅಳವಡಿಸಬೇಕು ಎಂದು ಒತ್ತಾಯ ಮಾಡಿ ನ್ಯಾಯಾಲಯಗಳು ಶೇ.50% ರಷ್ಟನ್ನು ಗಮನದಲ್ಲಿ ಇಟ್ಟುಕೊಂಡು ತೀರ್ಮಾನಗಳನ್ನು ತೆಗೆದುಕೊಳ್ಳುತ್ತವೆ ಇದನ್ನು ನ್ಯಾಯಾಲಯಗಳಿಗೆ ಮನವರಿಕೆ ಮಾಡಿ ಒಳ ಮೀಸಲಾತಿ ಜಾರಿ ಮಾಡಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

1932 ರಲ್ಲಿ ಮೀಸಲಾತಿ ಪ್ರಮಾಣವನ್ನು ನಿಗದಿ ಮಾಡಲಾಗಿತ್ತು ಆದರೆ ಆ ಮೀಸಲಾತಿ ಪ್ರಮಾಣ ಅಂದಿನ ಜನಸಂಖ್ಯೆಗೆ ಅನುಗುಣವಾಗಿ ನಿಗದಿ ಮಾಡಿದ್ದರು.. ಆದರೆ ಪ್ರಸ್ತುತ ಜನಸಂಖ್ಯೆ ಜಾಸ್ತಿಯಾಗಿದೆ.. ಆದ್ದರಿಂದ ಇದರಲ್ಲೂ ಬದಲಾವಣೆ ಆಗಬೇಕಾಗಿದೆ.ಕೇಂದ್ರ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಏನನ್ನು ಕೇಳದೇ ಇರುವವರಿಗೆ ಮೀಸಲಾತಿಯನ್ನು ನೀಡುತ್ತಿದೆ. ಆದರೆ ಸುಮಾರು 35 ವರ್ಷಗಳಿಂದ ಒಳ ಮೀಸಲಾತಿಗಾಗಿ ಹೋರಾಟ ಮಾಡುತ್ತಾ ಬಂದಿದ್ದೇವೆ ನಮ್ಮ ಬಗ್ಗೆಯೂ ಸಹಾ ಗಮನ ನೀಡಬೇಕಿದೆ ಇದರ ಬಗ್ಗೆ ಒಳ ಮೀಸಲಾತಿ ಜಾರಿ ವಿಚಾರವಾಗಿ ಸರ್ಕಾರದ ಗಮನ ಸೆಳೆಯಲು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಪರಿಶಿಷ್ಟ ಜಾತಿಗಳ ಸಮಾವೇಶವನ್ನು ಮಾಡಲಿದ್ದೇವೆ ಎಂದರು. ಶೇ.6 ರಷ್ಟು ಮೀಸಲಾತಿ ಹೆಚ್ಚಾಗುತ್ತದೆ. ಇದನ್ನು ಕಡಿಮೆ ಮಾಡಿದರೆ ನಮಗೆಲ್ಲಾ ಅನ್ಯಾಯ ಆಗುತ್ತದೆ. ಈಗ ಇರುವ ಮೀಸಲಾತಿ ಬ್ರಿಟೀಷರ ಕಾಲದ್ದು. ನೂರು ವರ್ಷಗಳಾಗಿವೆ. ಇದನ್ನು ಹೊಸ ಅಂಕಿ ಅಂಶಗಳ ಆಧಾರದಲ್ಲಿ ಮೀರಬೇಕು. ಕೇಂದ್ರದಲ್ಲಿ ಇಡಬ್ಕ್ಯುಎಸ್ ಜಾರಿ ಮಾಡಿದಂತೆ ಮಾಡಬೇಕು. ಮೀಸಲಾತಿ ಶೇ.50ಕ್ಕಿಂತ ಹೆಚ್ಚು ಮಾಡಿದ್ದು ಬಿಜೆಪಿ ಸರ್ಕಾರ ಬಿಜೆಪಿಯವರು ಹೆಚ್ಚು ಚುರುಕಾಗಿ ಕೆಲಸ ಮಾಡಬೇಕು.

ಗೋಷ್ಠಿಯಲ್ಲಿ ರವಿವರ್ಮ ವಕೀಲರಾದ ರವೀಂದ್ರ, ಕಾಂಗ್ರೆಸ್ ಮುಖಂಡ ಅನಿಲ್ ಕೋಟಿ ಭಾಗವಹಿಸಿದ್ದರು

Leave a Reply

Your email address will not be published. Required fields are marked *