ದಿನಾಂಕ :- 18.08.2025 ರಂದು ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ( RLHP) ಮೈಸೂರು ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು, ಸಿದ್ದರಾಮನಹುಂಡಿ ಸಹಯೋಗದಲ್ಲಿ ಅಂತರಾಷ್ಟ್ರೀಯ ಯುವಜನ ದಿನಾಚರಣೆ ಕಾರ್ಯಕ್ರಮ ವನ್ನು ನಡೆಸಲಾಯಿತು. ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮುಖಾಂತರ ಉದ್ಘಾಟಿಸಲಾಯಿತು.

ಶ್ರೀ ಶಶಿಕುಮಾರ್ ಸಂಯೋಜಕರು ಆರ್.ಎಲ್.ಹೆಚ್.ಪಿ ಸಂಸ್ಥೆ ಮೈಸೂರು ಇವರು ಮಾತನಾಡುತ್ತಾ ಸ್ಥಳೀಯ ಸಂಸ್ಥೆಗಳು ಮತ್ತು ಸರ್ಕಾರಗಳ ಜೊತೆ ಯುವಕರ ಒಗ್ಗಟ್ಟಿನಿಂದ ಉತ್ತಮ ಯೋಜನೆಗಳು ರೂಪಗೊಳ್ಳುತ್ತವೆ. ಗ್ರಾಮ ಪಂಚಾಯತ್, ಸ್ಥಳೀಯ ಶಾಲೆಗಳು ಮತ್ತು ಸಂಘಟನೆಗಳು ಯುವಕರ ತಾಳ್ಮೆ, ಉತ್ಸಾಹ ಮತ್ತು ಆಲೋಚನೆಗಳನ್ನು ಗೌರವಿಸಬೇಕು. ಇವರಿಂದ ಸಕಾರಾತ್ಮಕ ಬದಲಾವಣೆ ಸಾಧ್ಯ. ಅಂತರರಾಷ್ಟ್ರೀಯ ಯುವ ದಿನಾಚರಣೆ ಕೇವಲ ಆಚರಣೆಗಷ್ಟೇ ಸೀಮಿತವಲ್ಲ. ಇದು ಪ್ರತಿಯೊಂದು ಯುವಕ ಮತ್ತು ಯುವತಿಯಲ್ಲಿರುವ ಶಕ್ತಿ ಮತ್ತು ಸೃಜನಶೀಲತೆಯ ಹಬ್ಬವಾಗಿದೆ. ಪರಿಸರ ನಮಗೇನು ಕೊಡುಗೆ ನೀಡಿದೆ ಎಂದು ಚರ್ಚಿಸುತ್ತಾ ಪರಿಸರಕ್ಕೆ ನಾವೇನು ಕೊಡುಗೆ ನೀಡಿದ್ದೇವೆ ಎಂಬುದನ್ನು ಸೂಚಕವಾಗಿ ತಿಳಿಸಿದರು. ನಂತರ ಪರಿಸರಕ್ಕೆ ನಮ್ಮ ಕೊಡುಗೆ ನೀಡಬೇಕಾದರೆ ನಮ್ಮ ಹುಟ್ಟು ಹಬ್ಬದ ದಿನದಂದು ಒಂದು ಗಿಡವನ್ನು ನೆಡೋಣ, ಪ್ಲಾಸ್ಟಿಕ್ ಚೀಲಗಳನ್ನು ಬಳಸದೆ ಬಟ್ಟೆ ಬ್ಯಾಗ್ ಗಳನ್ನು ಬಳಸೋಣ, ಹಸಿ ಕಸ ಮತ್ತು ಒಣ ಕಸವನ್ನು ಮನೆಯಿಂದಲೇ ಬೇರ್ಪಡಿಸೋಣ, ನೀರು ಪೋಲಾಗುತ್ತಿರುವುದನ್ನು ಸರಿಪಡಿಸೋಣ, ಈ ರೀತಿ ಮಾಡಿದಲ್ಲಿ ನಾವು ಸಹ ಪರಿಸರಕ್ಕೆ ಕೊಡುಗೆಯನ್ನು ನೀಡಿದಂತಾಗುತ್ತದೆ ಮತ್ತು ಮುಂದಿನ ಪೀಳಿಗೆಗೆ ಉತ್ತಮವಾದ ವಾತಾವರಣವನ್ನು ಕಲ್ಪಿಸಿದಂತಾಗುತ್ತದೆ ಎಂದು ತಿಳಿಸಿದರು.
ಕುಮಾರಿ ಸ್ಮಿತಾ ಸದಸ್ಯರು, ಕರ್ನಾಟಕ ಸ್ಟೇಟ್ ಯೂತ್ ನೆಟ್ವರ್ಕ್, ಅಂತರಾಷ್ಟ್ರೀಯ ಯುವಜನ ದಿನಾಚರಣೆಯ ಹಿನ್ನೆಲೆ, ದಿನದ ಥೀಮ್ ಅಂತರರಾಷ್ಟ್ರೀಯ ಯುವ ದಿನಾಚರಣೆ ಪ್ರತಿ ವರ್ಷ ಆಗಸ್ಟ್ 12ರಂದು ಆಚರಿಸಲಾಗುತ್ತದೆ. ಈ ದಿನವನ್ನು ಸಂಯುಕ್ತ ರಾಷ್ಟ್ರ ಸಂಸ್ಥೆ 1999ರಲ್ಲಿ ಪ್ರಾರಂಭಿಸಿದ್ದು, ಯುವಕರ ಬಾಳಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಚರ್ಚಿಸುವುದರ ಜೊತೆಗೆ ಅವರ ಸಾಧನೆಗಳನ್ನು ಗೌರವಿಸುವ ದಿನವಾಗಿದೆ. 2025ನೇ ಸಾಲಿನ ಯುವ ದಿನದ ಥೀಮ್ “SDG ಗಳು ಮತ್ತು ಅದಕ್ಕಿಂತ ಹೆಚ್ಚಿನದಕ್ಕಾಗಿ ಸ್ಥಳೀಯ ಯುವಕರ ಕ್ರಿಯೆಗಳು” ಎಂಬಾಗಿದೆ ಎಂದು ಮಾಹಿತಿಯನ್ನು ನೀಡಿದರು.
ಶ್ರೀ ಜೀವನ್ ಸದಸ್ಯರು, ಕರ್ನಾಟಕ ಯೂಥ್ ನೆಟ್ವರ್ಕ್ ನಾ ಕಾರ್ಯ ವೈಕರಿಗಳು ಹಾಗೂ ಪರಿಸರ ಸಂರಕ್ಷಣೆಯಲ್ಲಿ ಯುವಜನರ ಪಾತ್ರದ ಕುರಿತು ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷ ನುಡಿಯನ್ನು ಕಾಲೇಜಿನ ಶ್ರೀಮತಿ ಎಂ.ಎಸ್ ರಾಜಶ್ರೀ, ಪ್ರಾಂಶುಪಾಲರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರು ನೂರಕ್ಕೂ ಹೆಚ್ಚು ಯುವಜನ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
Views: 80