ಚಿತ್ರದುರ್ಗ| ಪ್ರಣಾವಾನಂದ ಶ್ರೀಗಳಿಂದ ಮಹಾ ಪ್ರತ್ಯಂಗಿರಿ ದೇವಿಯಾಗಕ್ಕೆ ಎಚ್.ಡಿ.ಕುಮಾರಸ್ವಾಮಿಗೆ ಆಮಂತ್ರಣ. 

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 11: ಶರಣ ಬಸವೇಶ್ವರ ಮಹಾ ಸಂಸ್ಥಾನದ ಶ್ರೀಗಳಾದ ಡಾ.ಶ್ರೀ ಪ್ರಣಾವಾನಂದ ಶ್ರೀಗಳು ಶನಿವಾರ ಬೆಂಗಳೂರಿನ ಜೆಪಿ ನಗರದಲ್ಲಿರುವ ಕೇಂದ್ರ ಉಕ್ಕು ಮತ್ತು ಗಣಿ ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಏಪ್ರಿಲ್ 28ರಂದು ನಡೆಯಲಿರುವ ಮಹಾ ಪ್ರತ್ಯಂಗಿರಿ ದೇವಿಯಾಗಕ್ಕೆ ಆಮಂತ್ರಣ ಪತ್ರಿಕೆ ನೀಡಲಾಯಿತು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಕರಪತ್ರಗಳನ್ನು ಕೇಂದ್ರ ಸಚಿವರು ಬಿಡುಗಡೆ ಮಾಡಿ ಈ ಮಹಾಯಾಗಕ್ಕೆ ಭಾಗವಹಿಸುವುದಕ್ಕೆ
ರಾಣೆಬೆನ್ನೂರು ತಾಲೂಕಿನ ಅರೆಮಲ್ಲಾಪುರ ಗ್ರಾಮದಲ್ಲಿರುವ ಶ್ರೀ ಶರಣಬಸವೇಶ್ವರ ಮಠಕ್ಕೆ ಆಗಮಿಸುತ್ತೇನೆಂದು ಕೇಂದ್ರ ಸಚಿವರು
ಶ್ರೀಗಳಿಗೆ ತಿಳಿಸಿದರು

ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಜಗದ್ಗುರುಗಳಾದ ಶ್ರೀ ದೊಡ್ಡ ಮಹಾಸ್ವಾಮಿಗಳು ಈಡಿಗ ಸಮಾಜದ ಮುಖಂಡರಾದ
ಬಾಲರಾಜ್ ಗುತ್ತೇದಾರ್ ಶ್ರೀಗಳೊಂದಿಗೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *