ತರಳಬಾಳು ಹುಣ್ಣಿಮೆ-ಸಾಂಸ್ಕೃತಿಕ ಸ್ಪರ್ಧೆಗಳ ಊರಣ, ಸಾಂಸ್ಕೃತಿಕ ಕ್ರೀಡಾಸ್ಪರ್ಧೆಗಳಿಗೆ ಆಹ್ವಾನ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಸಿರಿಗೆರೆ ಫೆ.3: ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ವಾರ್ಷಿಕ ಸಮಾರಂಭವಾದ ತರಳಬಾಳು ಹುಣ್ಣಿಮೆ ಮಹೋತ್ಸವು ಫೆ.4ರಿಂದ 12 ರವರೆಗೆ ಚಿತ್ರದುರ್ಗ ಜಿಲ್ಲೆಯ ಭರಮಸಾಗರದಲ್ಲಿ ಜರುಗಲಿದ್ದು, ಈ ಕಾರ್ಯಕ್ರಮದಲ್ಲಿ ವಿಶಿಷ್ಟ ಸಾಂಪ್ರದಾಯಿಕ ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಶ್ರೀಮಠವು ಅನೇಕ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಿದೆ.

ಫೆ.5ರ ಬುಧವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 4ರ ವರೆಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಖೋ-ಖೋ, ವಾಲಿಬಾಲ್, ಕಬ್ಬಡಿ, ಷಟಲ್‍ಬ್ಯಾಡ್ಮಿಟನ್, ಅಥ್ಲೆಟಿಕ್ಸ್, ಯೋಗಾಸನಸ್ಪರ್ಧೆ, ಕ್ರೀಡಾ ಅಂಕಣಗಳ ಮಾದರಿ ವಸ್ತು ಪ್ರದರ್ಶನಗಳು ಜರುಗಲಿವೆ.

ಪುರುಷರ ಮುಕ್ತ ಪಂದ್ಯಾವಳಿಗಳಾಗಿ ಫೆ.6ರ ಗುರುವಾರ ಕಬಡ್ಡಿ, ಫೆ.7ರಂದು ಶುಕ್ರವಾರ ವಾಲಿಬಾಲ್ ಸ್ಪರ್ಧೆಗಳು ನಡೆಯಲಿದ್ದು, ಎರಡು ಸ್ಪರ್ಧೆಗಳಿಗೆ ತಲಾ ಪ್ರಥಮ 30,000, ದ್ವಿತೀಯ 20000, ತೃತೀಯ 10000 ರೂಗಳ ಬಹುಮಾನ ಜೊತೆಗೆ ತರಳಬಾಳು ಕಪ್ ನೀಡಲಾಗುವುದು.

ಫೆ.8ರಂದು ಶನಿವಾರ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಖೋ-ಖೋ, ವಾಲಿಬಾಲ್, ಯೋಗಾಸನ ಸ್ಪರ್ಧೆ, ಷಟಲ್‍ಬ್ಯಾಡ್ಮಿಟನ್,
ಅಥ್ಲೆಟಿಕ್ಸ್, ಫೆ.9ರ ಭಾನುವಾರ ಕಾಲೇಜು ವಿದ್ಯಾರ್ಥಿಗಳಿಗೆ ಖೋ-ಖೋ, ವಾಲಿಬಾಲ್, ಕಬಡ್ಡಿ, ಯೋಗಾಸನ ಸ್ಪರ್ಧೆ, ಷಟಲ್‍ಬ್ಯಾಡ್ಮಿಟನ್, ಪುರುಷ ನೌಕರ ವಿಭಾಗದಲ್ಲಿ ವಾಲಿಬಾಲ್, ಷಟಲ್‍ಬ್ಯಾಡ್ಮಿಟನ್, ಮಹಿಳಾ ನೌಕರರ ವಿಭಾಗದಲ್ಲಿ ಥ್ರೋಬಾಲ್, ಟೆನಿಕಾಯ್ಟ್ ಸ್ಪರ್ಧೆಗಳನ್ನು ಆಯೋಜಿಸಿದ್ದು, ಫೆ.10 ಸೋಮವಾರ ಮಹಿಳಾ ಮತ್ತು ಪುರುಷರ ಗ್ರಾಮೀಣ ಕ್ರೀಡೆಗಳಾದ ಹಗ್ಗಜಗ್ಗಾಟ, ಚಮಚ ಮತ್ತು ನಿಂಬೆಹಣ್ಣು ಓಟ, ಗೋಣಿಚೀಲದ ಓಟ, ಮ್ಯೂಸಿಕಲ್ ಚೇರ್, ಮಡಿಕೆ ಹೊಡೆಯುವ ಆಟದ ಸ್ಪರ್ಧೆಗಳನ್ನು ಆಯೋಜಿಸಿದೆ.

ಕುಸ್ತಿ ಸ್ಪರ್ಧೆಗಳು:

ಫೆ.11ರ ಮಂಗಳವಾರ ರಾಜ್ಯಮಟ್ಟದ ಪುರುಷರ ಮುಕ್ತ ಕುಸ್ತಿ ಪಂದ್ಯಾವಳಿಗಳು ಜರುಗಲಿದ್ದು, ಪ್ರಥಮ 15000 ಜೊತೆ ಬೆಳ್ಳಿಗದೆ,
ದ್ವಿತೀಯ 12500, ತೃತೀಯ 10000, ಚತುರ್ಥ 7500 ರೂಗಳ ನಗದು ಬಹುಮಾನ, ಪಾರಿತೋಷಕ ಮತ್ತು ಪ್ರಶಸ್ತಿಪತ್ರದ ಜೊತೆಗೆ
ಶ್ರೀ ತರಳಬಾಳು ಕಂಠೀರವ ಪ್ರಶಸ್ತಿ ನೀಡಲಾಗುತ್ತದೆ. ಉಚಿತ ಪ್ರವೇಶವಿದ್ದು, ಪುರುಷರ ದೇಹ ತೂಕ 65 ರಿಂದ 74 ಕೆಜಿ
ನಿಗಮಾಡಲಾಗಿದೆ.

ತರಳಬಾಳು ಕೇಸರಿ ಪ್ರಶಸ್ತಿಗೆ ಪ್ರಥಮ 12500, ದ್ವಿತೀಯ 9500, ತೃತೀಯ 7500, ಚತುರ್ಥ 6000 ನಗದು ಬಹುಮಾನ,
ಪಾರಿತೋಷಕ ಮತ್ತು ಪ್ರಶಸ್ತಿಪತ್ರ ನೀಡಲಿದ್ದು, ಪುರುಷರ ದೇಹ ತೂಕ 61 ರಿಂದ 65 ಕೆಜಿಗೆ ನಿಗಮಾಡಲಾಗಿದೆ.

ಶ್ರೀ ತರಳಬಾಳು ಕುಮಾರ ಪ್ರಶಸ್ತಿಗೆ ಪ್ರಥಮ 9000, ದ್ವಿತೀಯ 7,000, ತೃತೀಯ 6,000 ಚತುರ್ಥ 5000 ನಗದು ಬಹುಮಾನ,
ಪಾರಿತೋಷಕ ಮತ್ತು ಪ್ರಶಸ್ತಿಪತ್ರ ನೀಡಲಿದ್ದು, ಪುರುಷರ ದೇಹ ತೂಕ 57 ರಿಂದ 61 ಕೆಜಿ ನಿಗದಿ ಮಾಡಲಾಗಿದೆ. ಎಲ್ಲಾ
ಸ್ಪರ್ಧಾರ್ಥಿಗಳಿಗೂ ಉಚಿತ ಪ್ರವೇಶವಿರಲಿದ್ದು, ಪ್ರಯಾಣ ಭತ್ಯೆ ನೀಡಲಾಗುವುದಿಲ್ಲ.

ಫೆ.12ರ ಬುಧವಾರ ವಿವಿಧ ರಾಜ್ಯ, ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ ಪುರುಷ ಮತ್ತು ಮಹಿಳಾ ಆಹ್ವಾನಿತ ಕುಸ್ತಿ ಪಂದ್ಯಾವಳಿಗಳು
ಜರುಗಲಿವೆ.

ಪ್ರತಿಭಾನ್ವಿತರಿಗೆ ಸುವರ್ಣ ಆಹ್ವಾನ.

ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ವಿಶಿಷ್ಟ ಸಾಂಪ್ರದಾಯಿಕ ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಶ್ರೀಮಠವು ಅನೇಕ
ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಿದೆ.

ಫೆ.5ರ ಬುಧವಾರ ವಚನನೃತ್ಯ ಮತ್ತು ಜನಪದ ನೃತ್ಯ ಸ್ಪರ್ಧೆಗಳು, ಗುರುವಾರ ಕೃಷಿ ಮತ್ತು ಜಲ ಸಂರಕ್ಷಣೆ ಭಾಷಣ ಸ್ಪರ್ಧೆ,
ಶುಕ್ರವಾರ ಭಜನಾ ಮೇಳ, ಶನಿವಾರ ವಿಜ್ಞಾನ ಮೇಳ ಮತ್ತು ವಿಜ್ಞಾನಿಗಳೊಂದಿಗೆ ಸಂವಾದ, ಭಾನುವಾರ ಪ್ರತಿಭಾನ್ವೇಷಣೆ,
ಸೋಮವಾರ ಕೋಲಾಟ ಮತ್ತು ಸೋಬಾನೆ ಸ್ಪರ್ಧೆ, ಮಂಗಳವಾರ ಕೃಷಿ ಮೇಳ ಮತ್ತು ರೈತರ ಸಂವಾದ, ಬುಧವಾರ ಕರ್ನಾಟಕ
ವಿವಿಧ ಜಾನಪದ ಕಲಾತಂಡಗಳಿಂದ ಕಲಾಪ್ರದರ್ಶನ ಜರುಗಲಿದೆ.

ಫೆ.5ರ ಬೆಳಗ್ಗೆ 10 ಗಂಟೆಗೆ ಜರುಗುವ ವಚನನೃತ್ಯ ಮತ್ತು ಜನಪದ ನೃತ್ಯ ಸ್ಪರ್ಧೆಗಳಲ್ಲಿ ಜಗಳೂರು, ಹರಪನಹಳ್ಳಿ, ದಾವಣಗೆರೆ
ಹಾಗೂ ಚಿತ್ರದುರ್ಗ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಲು ಅವಕಾಶ ನೀಡಿದ್ದು, ವಿಜೇತರಾದ
ತಂಡಗಳಿಗೆ ಪ್ರಥಮ 10,000, ದ್ವಿತೀಯ 7,000, ತೃತೀಯ 5,000ಗಳನ್ನ ನಗದು ಬಹುಮಾನ ಜೊತೆಗೆ ಆಕರ್ಷಕ ಪ್ರಶಸ್ತಿ
ಫಲಕಗಳನ್ನು ನೀಡಲಾಗುವುದು.

ಫೆ.6ರ ಬೆಳಗ್ಗೆ 9.30ಕ್ಕೆ ಕೃಷಿ ಮತ್ತು ಜಲ ಸಂರಕ್ಷಣೆ ವಿಷಯಕ್ಕೆ ಸಂಬಂಸಿದಂತೆ ಭಾಷಣ ಸ್ಪರ್ಧೆ ಏರ್ಪಡಿಸಿದ್ದು, ತರಳಬಾಳು
ವಿದ್ಯಾಸಂಸ್ಥೆಯ ಸಿರಿಗೆರೆ, ಚಿತ್ರದುರ್ಗ, ಹೊಳಲ್ಕೆರೆ, ದಾವಣಗೆರೆ, ಹರಪ್ಪನಹಳ್ಳಿ ಹಾಗೂ ಭರಮಸಾಗರ ಹೋಬಳಿ ಎಲ್ಲಾ
ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಿದ್ದು, ಪ್ರಥಮ 3000, ದ್ವಿತೀಯ 2000, ತೃತೀಯ 1000
ನಗದು ಬಹುಮಾನಗಳನ್ನ ನೀಡಲಾಗುವುದು.

ಫೆ.7ರ ಬೆಳಗ್ಗೆ 9:30ಕ್ಕೆ ಭಜನಾ ಮೇಳ ಏರ್ಪಡಿಸಿದ್ದು, ಜಗಳೂರು, ಹರಪನಹಳ್ಳಿ, ದಾವಣಗೆರೆ ಹಾಗೂ ಚಿತ್ರದುರ್ಗ ತಾಲೂಕಿನ
ಆಸಕ್ತರೂ ಭಾಗವಹಿಸಬಹುದಾಗಿದೆ. ಪ್ರಥಮ 8000, ದ್ವಿತೀಯ, 6,000, ತೃತೀಯ 4000 ರೂಗಳ ಬಹುಮಾನದ ಜೊತೆಗೆ
ಪ್ರಯಾಣ ಭತ್ಯೆ ನೀಡಲಾಗುವುದು.

ಫೆ.10ರ ಬೆಳಗ್ಗೆ 9:30ಕ್ಕೆ ಕೋಲಾಟ ಸ್ಪರ್ಧೆ ಏರ್ಪಡಿಸಿದ್ದು, ಜಾನಪದ ಸೊಗಡಿನ ಕಲೆಯ ಜೊತೆಗೆ ಪ್ರತಿ ತಂಡದಲ್ಲಿ 8 ರಿಂದ 10
ಕಲಾವಿದರಿಗೆ ಮಾತ್ರ ಅವಕಾಶ ಇರಲಿದೆ. ಸ್ಪರ್ಧೆಯಲ್ಲಿ ವಿಜೇತರಾದ ತಂಡದವರಿಗೆ ಪ್ರಥಮ 8000, ದ್ವಿತೀಯ 6,000, ತೃತೀಯ
4000 ರಂತೆ ಬಹುಮಾನದ ಜೊತೆಗೆ ಪ್ರಯಾಣ ಭತ್ಯೆ ನೀಡಲಾಗುವುದು.

ಫೆ.11ರ ಬೆಳಗ್ಗೆ 9.30ಕ್ಕೆ ಕೃಷಿ ಮೇಳ ಮತ್ತು ರೈತರ ಸಂವಾದ ಕಾರ್ಯಕ್ರಮ ಇರಲಿದ್ದು, ರಾಜ್ಯದ ಸಮಸ್ತ ರೈತ ಬಂಧುಗಳು
ಕಾರ್ಯಕ್ರಮಕ್ಕೆ ಆಗಮಿಸಿ ಆಧುನಿಕ ರೀತಿಯ ಕೃಷಿಗೆ ಸಂಬಂಸಿದಂತಹ ಯಂತ್ರೋಪಕರಣಗಳನ್ನು ಅದರ ಉಪಯೋಗ ಬಗ್ಗೆ
ವಿಶೇಷ ಕೃಷಿ ತಜ್ಞರಿಂದ ಮಾಹಿತಿ ಪಡೆಯಬಹುದಾಗಿದೆ.

ಪ್ರತಿಭಾನ್ವಿತರಿಗೆ ಸುವರ್ಣ ಆಹ್ವಾನ.
ತರಳಬಾಳು ಹುಣ್ಣಿಮೆಯಲ್ಲಿ ಫೆ. 9ರ ಭಾನುವಾರ ಬೆಳಿಗ್ಗೆ 10 ಗಂಟೆಯ ಪ್ರತಿಭಾನ್ವೇಷಣಾ ಸ್ಪರ್ಧೆಗಳು ಸಂಗೀತ, ನೃತ್ಯ, ಅಭಿನಯ
ಎಂಬ ಮೂರು ವಿಭಾಗಗಳಲ್ಲಿ ನಡೆಯಲಿವೆ. ಪ್ರತಿ ಭಾಗದಲ್ಲಿ ಕಿರಿಯರ ಹಂತ, ವಯಸ್ಕರಹಂತ, ಹಿರಿಯರ ಹಂತ ಎಂದು
ನಿಗದಿಪಡಿಸಿದ್ದು, ವಿಜೇತರಿಗೆ ಪ್ರಥಮ 3000, ದ್ವಿತೀಯ 2000, ತೃತೀಯ 1000 ರೂಗಳ ನಗದು ಬಹುಮಾನಗಳ ಜೊತೆಗೆ
ಆಕರ್ಷಕ ಪ್ರಶಸ್ತಿ ಫಲಕವನ್ನು ನೀಡಲಾಗುವುದು.

Leave a Reply

Your email address will not be published. Required fields are marked *