ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಮಾ. 28
ನಗರದ ವೀರಶೈವ ಸಮಾಜ (ರಿ.)ದವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹಾ ಏ, 2 ರ ಗುರುವಾರದಂದು ನಗರದಲ್ಲಿ ಶ್ರೀ ವೀರಭದ್ರ ದೇವರ ಗುಗ್ಗುಳ ಮತ್ತು ಅಗ್ನಿಕುಂಡ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವೀರಶೈವ ಸಮಾಜದ ಅಧ್ಯಕ್ಷರಾದ ಎಸ್.ಎಂ.ಎಲ್ ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಏ.2ರ ಗುರುವಾರ ಬೆಳಗ್ಗೆ ಹರಪನಹಳ್ಳಿ ಪಟ್ಟಣದ ಮೇಗಳಪೇಟೆ ಶ್ರೀ ಗುಗ್ಗುಳ ವೀರಭದ್ರೇಶ್ವರ ದೇವಸ್ಥಾನ ಸಮಿತಿ ಇವರಿಂದ ಶ್ರೀ ವೀರಭದ್ರ ದೇವರ ಗುಗ್ಗುಳ ಮತ್ತು ಅಗ್ನಿಕುಂಡ ನಡೆಯಲಿದ್ದು, ಬೆಳಗ್ಗೆ 7.00 ಗಂಟೆಗೆ ಗಂಗಾಪೂಜೆಯ ನಂತರ ಉಜ್ಜಯಿನಿ ಮಠದಿಂದ ಹೊರಟು ರಂಗಯ್ಯನಬಾಗಿಲು, ದೊಡ್ಡಪೇಟೆ, ಚಿಕ್ಕಪೇಟೆ, ಆನೆಬಾಗಿಲು, ಮಹಾತ್ಮಗಾಂಧಿ ವೃತ್ತದ ಮುಖಾಂತರವಾಗಿ ಶ್ರೀ ನೀಲಕಂಠೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದ ಅಗ್ನಿಕುಂಡ ಹಾಯುವುದರ ಮೂಲಕ ಬಿಜಯಂಗೈಯುವುದು. ಮಹಾಮಂಗಳಾರತಿ ನಂತರ ಶ್ರೀ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದಾಸೋಹ ಏರ್ಪಡಿಸಲಾಗಿದೆ.
ಗುಗ್ಗುಳ ಮೆರವಣಿಗೆ ಬರುವ ದಾರಿಯಲ್ಲಿ ಭಕ್ತರು ಮನೆಗಳ ಮುಂದೆ ನೀರು, ಹಾಕಿ ರಂಗೋಲಿಯನ್ನು ಹಾಕಿ ಸಹಕರಿಸಿ ಶ್ರೀ ವೀರಭದ್ರಸ್ವಾಮಿ ಮನೆ ದೇವರ ಮನೆತನದವರು, ಗುಗ್ಗುಳದಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶ್ರೀ ವೀರಭದ್ರ ದೇವರ ಗುಗ್ಗುಳ ಮತ್ತು ಅಗ್ನಿಕುಂಡದಲ್ಲಿ ಭಾಗವಹಿಸಿ, ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಮನವಿ ಮಾಡಿದ್ದಾರೆ.

