IPL 2025 Restart: ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯಿಂದಾಗಿ ಮುಂದೂಡಲ್ಪಟ್ಟಿದ್ದ ಐಪಿಎಲ್ 2025 ಮೇ 17 ರಿಂದ ಮತ್ತೆ ಆರಂಭವಾಗುತ್ತಿದೆ. ಆದರೆ, ಅನೇಕ ವಿದೇಶಿ ಆಟಗಾರರು ತಮ್ಮ ದೇಶಗಳಿಗೆ ಮರಳಿದ್ದು, ಆರ್ಚರ್, ಓವರ್ಟನ್, ಕರನ್ ಮತ್ತೆ ಭಾರತಕ್ಕೆ ಬರುವುದಿಲ್ಲ ಎಂಬ ಸುದ್ದಿ ಹೊರಬಿದ್ದಿದೆ. ಆದರೆ ಜೋಸ್ ಬಟ್ಲರ್, ವಿಲ್ ಜ್ಯಾಕ್ಸ್, ಲಿಯಾಮ್ ಲಿವಿಂಗ್‌ಸ್ಟೋನ್, ಜೇಕಬ್ ಬೆಥೆಲ್ ಭಾರತಕ್ಕೆ ಮರಳುತ್ತಿದ್ದಾರೆ. ಸಾಲ್ಟ್ ಮತ್ತು ಮೊಯಿನ್ ಅಲಿ ಅವರ ಲಭ್ಯತೆ ಇನ್ನೂ ಅನಿಶ್ಚಿತವಾಗಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಐಪಿಎಲ್ 2025 (IPL 2025) ಅನ್ನು ಮುಂದೂಡಲಾಗಿತ್ತು. ಆದರೆ ಈಗ ಈ ಮಿಲಿಯನ್ ಡಾಲರ್ ಟೂರ್ನಿ ಮೇ 17 ರಿಂದ ಮತ್ತೆ ಪ್ರಾರಂಭವಾಗುತ್ತಿದೆ. ಆದಾಗ್ಯೂ ತಮ್ಮ ತಮ್ಮ ದೇಶಕ್ಕೆ ಮರಳಿದ್ದ ಅನೇಕ ವಿದೇಶಿ ಆಟಗಾರರು ಈ ಲೀಗ್‌ನಲ್ಲಿ ಭಾಗವಹಿಸಲು ಭಾರತಕ್ಕೆ ಬರುತ್ತಿಲ್ಲ. ಅವರುಗಳ ಪಟ್ಟಿಗೆ ಇದೀಗ ರಾಜಸ್ಥಾನ್ ತಂಡದ ಪರ ಆಡುತ್ತಿದ್ದ ಜೋಫ್ರಾ ಆರ್ಚರ್ ಹಾಗೂ ಸಿಎಸ್ಕೆ (CSK) ಪರ ಆಡುತ್ತಿದ್ದ ಜೇಮೀ ಓವರ್ಟನ್ ಮತ್ತು ಸ್ಯಾಮ್ ಕರನ್ ಐಪಿಎಲ್‌ನ ಉಳಿದ ಪಂದ್ಯಗಳನ್ನಾಡಲು ಭಾರತಕ್ಕೆ ಹಿಂತಿರುಗುತ್ತಿಲ್ಲ ಎಂಬುದು ಖಚಿತವಾಗಿದೆ. ಈ ಎರಡೂ ತಂಡಗಳು ಈಗಾಗಲೇ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿರುವುದರಿಂದ ಅವರ ಅಲಭ್ಯತೆ ಯಾವುದೇ ಪರಿಣಾಮ ಬೀರುವುದಿಲ್ಲ.
ಆರ್‌ಸಿಬಿ-ಮುಂಬೈ ತಂಡಕ್ಕೆ ಒಳ್ಳೆಯ ಸುದ್ದಿ
ಆದರೆ, ಈ ಮಧ್ಯೆ, ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಂಡಕ್ಕೆ ಬಹಳ ಒಳ್ಳೆಯ ಸುದ್ದಿ ಸಿಕ್ಕಿದೆ. ಏಕೆಂದರೆ ಜೋಸ್ ಬಟ್ಲರ್, ವಿಲ್ ಜ್ಯಾಕ್ಸ್, ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಜಾಕೋಬ್ ಬೆಥೆಲ್ ಮೇ 15 ರೊಳಗೆ ಭಾರತಕ್ಕೆ ಬರಲಿದ್ದಾರೆ. ವಿಲ್ ಜ್ಯಾಕ್ಸ್ ಮುಂಬೈ ಇಂಡಿಯನ್ಸ್ ಪರ ಪ್ರಮುಖ ಆಟಗಾರನಾಗಿದ್ದರೆ, ಜಾಕೋಬ್ ಬೆಥಾಲ್, ಲಿವಿಂಗ್‌ಸ್ಟೋನ್ ಆರ್‌ಸಿಬಿಯ ಭಾಗವಾಗಿದ್ದಾರೆ. ಜೋಸ್ ಬಟ್ಲರ್ ಕೂಡ ಗುಜರಾತ್ ಟೈಟಾನ್ಸ್ ತಂಡದ ಪ್ರಮುಖ ಆಟಗಾರನಾಗಿದ್ದಾರೆ. ಈ ಮೂರು ತಂಡಗಳು ಈ ಸೀಸನ್ನ ಚಾಂಪಿಯನ್ ಆಗುವ ಸ್ಪರ್ಧಿಗಳಾಗಿರುವ ಕಾರಣ ಈ ಮೂವರ ಲಭ್ಯತೆ ತಂಡಗಳನ್ನು ಇನ್ನಷ್ಟು ಬಲಿಷ್ಠವಾಗಿಸಲಿದೆ.
ಸಾಲ್ಟ್ ಬರುವುದು ಖಚಿತವಾಗಿಲ್ಲ
ಆದಾಗ್ಯೂ, ಫಿಲ್ ಸಾಲ್ಟ್ ಲಭ್ಯತೆಯ ಬಗ್ಗೆ ಯಾವುದೇ ಸುದ್ದಿ ಇಲ್ಲ. ವಾಸ್ತವವಾಗಿ ಸಾಲ್ಟ್ ಇಂಜುರಿಯಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರ ಸ್ಥಾನದಲ್ಲಿ ಬೆಥೆಲ್ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆಯುತ್ತಿದ್ದರು. ಈಗ ಸಾಲ್ಟ್ ಭಾರತಕ್ಕೆ ಬರುತ್ತಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಉಳಿದಂತೆ ಜೋಫ್ರಾ ಆರ್ಚರ್ ತಂಡಕ್ಕೆ ಹಿಂತಿರುಗದಿರುವ ಬಗ್ಗೆ ಮಾಹಿತಿ ನೀಡಿರುವ ರಾಜಸ್ಥಾನ್ ರಾಯಲ್ಸ್, ಆರ್ಚರ್ ಗಾಯಗೊಂಡಿದ್ದು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದೆ. ಹಾಗೆಯೇ ಇಂಗ್ಲೆಂಡ್‌ನ ಮತ್ತೊಬ್ಬ ಸ್ಟಾರ್ ಆಟಗಾರ ಮೊಯಿನ್ ಅಲಿ ತಂಡಕ್ಕೆ ಮರಳುತ್ತಾರೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮುಂದಿನ 24 ಗಂಟೆಗಳಲ್ಲಿ ಮೊಯಿನ್ ಅಲಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಅವರ ತಂದೆ ಮುನೀರ್ ಅಲಿ ವೆಬ್‌ಸೈಟ್‌ಗೆ ತಿಳಿಸಿದ್ದಾರೆ.
TV9 Kannada
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1