IPL 2023: ಲಕ್ಷ ಮೌಲ್ಯದ 16 ಬ್ಯಾಟ್‌, ಶೂ, ಗ್ಲೌಸ್‌ ಕಳ್ಳತನ! ಡೆಲ್ಲಿ ತಂಡದ ನಿದ್ದೆಗೆಡಿಸಿದ ಕಳ್ಳರು

IPL 2023: ಲಕ್ಷ ಮೌಲ್ಯದ 16 ಬ್ಯಾಟ್‌, ಶೂ, ಗ್ಲೌಸ್‌ ಕಳ್ಳತನ! ಡೆಲ್ಲಿ ತಂಡದ ನಿದ್ದೆಗೆಡಿಸಿದ ಕಳ್ಳರು
IPL 2023 Delhi Capitals players lose bats and other equipment in transit

ಐಪಿಎಲ್‌ನ ಪ್ರತಿ ಸೀಸನ್‌ನಲ್ಲಿಯೂ ಒಂದಲ್ಲ ಒಂದು ವಿವಾದ ಇದ್ದೇ ಇರುತ್ತದೆ. ಇದೀಗ 16ನೇ ಸೀಸನ್ (IPL 2023) ಕೂಡ ಇದಕ್ಕೆ ಹೊರತಾಗಿಲ್ಲ. ಅದರಲ್ಲೂ ಸತತ ಸೋಲುಗಳಿಂದ ಕಂಗೆಟ್ಟಿರುವ ಡೆಲ್ಲಿ (Delhi Capitals) ತಂಡಕ್ಕೆ ಇದೀಗ ಬಿಗ್ ಶಾಕ್ ಎದುರಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರ ಬ್ಯಾಟ್ ಪ್ಯಾಡ್ ಸೇರಿದಂತೆ ಹಲವು ವಸ್ತುಗಳನ್ನು ಕಳತ್ತನ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಆಟಗಾರರಲ್ಲಿ ನಾಯಕ ಡೇವಿಡ್ ವಾರ್ನರ್ (David Warner) ಕೂಡ ಸೇರಿದ್ದಾರೆ. ಇವರಲ್ಲದೆ ಯಶ್ ಧುಲ್, ಮಿಚೆಲ್ ಮಾರ್ಷ್ (Mitchell Marsh), ಫಿಲ್ ಸಾಲ್ಟ್ ಅವರ ಬ್ಯಾಟ್ ಮತ್ತು ಪ್ಯಾಡ್ ಕೂಡ ನಾಪತ್ತೆಯಾಗಿದೆ. ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರ ಒಟ್ಟು 16 ಬ್ಯಾಟ್‌ಗಳನ್ನು ಕಳವು ಮಾಡಲಾಗಿದೆ. ಇದಲ್ಲದೇ ಆಟಗಾರರ ಇತರ ವಸ್ತುಗಳನ್ನೂ ಕಳವು ಮಾಡಲಾಗಿದೆ. ಕಳವಾದ ವಸ್ತುಗಳ ಮೌಲ್ಯ ಸುಮಾರು ಲಕ್ಷ ರೂ. ಎಂದು ಹೇಳಲಾಗುತ್ತಿದೆ.

ವಾಸ್ತವವಾಗಿ ಇದೇ ಏಪ್ರಿಲ್ 15 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​ಸಿಬಿ ವಿರುದ್ಧ ಪಂದ್ಯವನ್ನಾಡಿದ್ದ ಡೆಲ್ಲಿ ತಂಡ ಆ ಬಳಿಕ ದೆಹಲಿಗೆ ವಾಪಸ್ಸಾಗಿತ್ತು. ತಂಡದ ಆಟಗಾರರೆಲ್ಲರೂ ಹೋಟೆಲ್ ತಲುಪಿದ್ದಾರೆ. ಆದರೆ ಎಲ್ಲಾ ಆಟಗಾರರ ಲಗೇಜ್​ಗಳು ಒಂದು ದಿನದ ನಂತರ ಆಟಗಾರರ ಕೈ ಸೇರಿವೆ. ಈ ವೇಳೆ ಆಟಗಾರರೆಲ್ಲರು ತಮ್ಮ ತಮ್ಮ ಲಗೇಜ್ ಬ್ಯಾಗ್ ತೆರೆದಾಗ ಅವರೆಲ್ಲರಿಗೂ ಶಾಕ್ ಕಾದಿದೆ. ಏಕೆಂದರೆ ಲಗೇಜ್ ಬ್ಯಾಗ್​ನಲ್ಲಿ ಆಟಗಾರರು ಇರಿಸಿದ್ದ ಬ್ಯಾಟ್, ಪ್ಯಾಡ್, ಶೂ ಹಾಗೂ ಗ್ಲೌಸ್‌ ಸೇರಿದಂತೆ ಹಲವು ವಸ್ತುಗಳು ಬ್ಯಾಗ್​ನಿಂದ ನಾಪತ್ತೆಯಾಗಿದ್ದವು. ಡೇವಿಡ್ ವಾರ್ನರ್, ಫಿಲ್ ಸಾಲ್ಟ್ ಮತ್ತು ಮಿಚೆಲ್ ಮಾರ್ಷ್ ಅವರ ಬ್ಯಾಟ್‌ಗಳು ಮಿಸ್ ಆಗಿದ್ದು, ಈ ವಿದೇಶಿ ಆಟಗಾರರು ಕಳೆದುಕೊಂಡ ಬ್ಯಾಟ್‌ಗಳ ಬೆಲೆ ತಲಾ 1 ಲಕ್ಷ ರೂ. ಎಂದು ವರದಿಯಾಗಿದೆ.

WTC Final: ಭಾರತ ವಿರುದ್ಧದ ಡಬ್ಲ್ಯುಟಿಸಿ ಫೈನಲ್​ಗೆ 17 ಆಟಗಾರರ ಬಲಿಷ್ಠ ತಂಡ ಪ್ರಕಟಿಸಿದ ಕ್ರಿಕೆಟ್ ಆಸ್ಟ್ರೇಲಿಯಾ

ಬ್ಯಾಟ್‌ಗಳ ಬೆಲೆ ತಲಾ 1 ಲಕ್ಷ ರೂ.

ಇಷ್ಟೇ ಅಲ್ಲದೆ ಕೆಲ ಆಟಗಾರರ ಶೂ ಹಾಗೂ ಗ್ಲೌಸ್‌ಗಳನ್ನೂ ಕಳವು ಮಾಡಲಾಗಿದೆ. ಅದರಲ್ಲೂ ಡೆಲ್ಲಿ ತಂಡದ ಯುವ ಬ್ಯಾಟರ್ ಯಶ್ ಧುಲ್ ಅವರ ಐದು ಬ್ಯಾಟ್​ಗಳನ್ನು ಕಳ್ಳತನ ಮಾಡಲಾಗಿದೆ. ಮಿಚೆಲ್‌ ಮಾರ್ಷ್‌ ಅವರ ಎರಡು ಬ್ಯಾಟ್‌ಗಳನ್ನೂ ಕಳವು ಮಾಡಲಾಗಿದೆ. ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಫಿಲ್ ಸಾಲ್ಟ್ ಮೂರು ಬ್ಯಾಟ್‌ಗಳನ್ನು ಕಳೆದುಕೊಂಡಿದ್ದಾರೆ. ಇನ್ನು ಕೆಲ ಆಟಗಾರರ ಬಗ್ಗೆ ಹೇಳುವುದಾದರೆ ಅವರ ಕೈಗವಸು, ಬೂಟು ಮತ್ತಿತರ ವಸ್ತುಗಳನ್ನು ಕಳವು ಮಾಡಲಾಗಿದೆ. ಇಂತಹ ಘಟನೆ ನಡೆದಿರುವುದು ಇದೇ ಮೊದಲು ಎಂದು ದೆಹಲಿ ಕ್ಯಾಪಿಟಲ್ಸ್ ಮೂಲಗಳು ತಿಳಿಸಿವೆ. ಲಾಜಿಸ್ಟಿಕ್ಸ್ ಕಂಪನಿ, ಪೊಲೀಸರು ಮತ್ತು ದೆಹಲಿ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ದೂರು ನೀಡಲಾಗಿದೆ ಎಂದು ವರದಿಯಾಗಿದೆ.

ದೆಹಲಿ ತನ್ನ ಆರನೇ ಪಂದ್ಯವನ್ನು ಗುರುವಾರ ಆಡಲಿದ್ದು, ಈಗ ಆಟಕ್ಕೆ ಅಗತ್ಯವಾಗಿ ಬೇಕಾಗಿರುವ ವಸ್ತುಗಳನ್ನು ಕಳೆದುಕೊಂಡಿರುವುದು ಡೆಲ್ಲಿ ಆಟಗಾರರ ನಿದ್ದೆಗೆಡಿಸಿದೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಈ ಪಂದ್ಯ ನಡೆಯಲಿದೆ.

ಡೆಲ್ಲಿ ತಂಡಕ್ಕೆ ಸತತ 5 ಸೋಲು

ಇನ್ನು ಐಪಿಎಲ್ 2023ರಲ್ಲಿ ಡೆಲ್ಲಿ ತಂಡ ಆಡಿರುವ ಐದು ಪಂದ್ಯಗಳಲ್ಲೂ ಸತತ ಐದು ಸೋಲುಗಳನ್ನು ಅನುಭವಿಸಿದೆ. ಈ ತಂಡದಲ್ಲಿ ದೊಡ್ಡ ಹೆಸರುಗಳಿವೆ ಆದರೆ ಈ ಹೆಸರುಗಳ ಪ್ರದರ್ಶನವು ತುಂಬಾ ಕಳಪೆಯಾಗಿದೆ. ಪೃಥ್ವಿ ಶಾ , ಮಿಚೆಲ್ ಮಾರ್ಷ್, ರೋವ್‌ಮನ್ ಪೊವೆಲ್, ರಿಲೆ ರುಸ್ಸೋ ಅವರ ಬ್ಯಾಟ್ ಮೌನವಾಗಿದೆ. ನಾಯಕ ಡೇವಿಡ್ ವಾರ್ನರ್ ಮಾತ್ರ ತಂಡದ ಪರ ರನ್ ಗಳಿಸಿದ್ದಾರೆ ಆದರೆ ಅವರ ಸ್ಟ್ರೈಕ್ ರೇಟ್ ಕೂಡ ಕಳವಳಕ್ಕೆ ಕಾರಣವಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/ipl-2023-delhi-capitals-players-lose-bats-and-other-equipment-in-transit-psr-au14-559374.html

Leave a Reply

Your email address will not be published. Required fields are marked *