IPL 2023: 5 ಭರ್ಜರಿ ಸಿಕ್ಸ್, 6 ಫೋರ್: ರಹಾನೆ ಸಿಡಿಲಬ್ಬರಕ್ಕೆ ಕಂಗಾಲಾದ KKR

IPL 2023: ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಸಿಎಸ್​ಕೆ ಬ್ಯಾಟರ್ ಅಜಿಂಕ್ಯ ರಹಾನೆ ಅಕ್ಷರಶಃ ಅಬ್ಬರಿಸಿದ್ದಾರೆ. ಅದು ಅಂತಿಂಥ ಅಬ್ಬರವಲ್ಲ..ಸಿಡಿಲಬ್ಬರ..!ಹೌದು, ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ನಾಯಕ ನಿತೀಶ್ ರಾಣಾ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ಸಿಎಸ್​ಕೆ ಪರ ಆರಂಭಿಕರಾಗಿ ಕಣಕ್ಕಿಳಿದ ರುತುರಾಜ್ ಗಾಯಕ್ವಾಡ್ ಹಾಗೂ ಡೆವೊನ್ ಕಾನ್ವೆ ಕೆಕೆಆರ್ ತಂಡದ ಲೆಕ್ಕಚಾರಗಳನ್ನು ಆರಂಭದಲ್ಲೇ ತಲೆಕೆಳಗಾಗಿಸಿದರು.ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ರುತುರಾಜ್ ಗಾಯಕ್ವಾಡ್ 20 ಎಸೆತಗಳಲ್ಲಿ 35 ರನ್ ಬಾರಿಸಿ ಔಟಾದರು. ಆದರೆ ಅದಕ್ಕೂ ಮುನ್ನ ಕಾನ್ವೆ ಜೊತೆ 7.2 ಓವರ್​ಗಳಲ್ಲಿ 73 ರನ್​ಗಳ ಜೊತೆಯಾಟವಾಡಿದ್ದರು. ಇದಾದ ಬಳಿಕ ಕಾನ್ವೆ ಹಾಗೂ ಅಜಿಂಕ್ಯ ರಹಾನೆ ಜೊತೆಯಾದರು.ಒಂದೆಡೆ ಕಾನ್ವೆ ಅಬ್ಬರ ಶುರು ಮಾಡುತ್ತಿದ್ದಂತೆ, ಮತ್ತೊಂದೆಡೆ ರಹಾನೆ ಸಿಡಿಲಬ್ಬರದ ಆರಂಭಿಸಿದ್ದರು. ಇತ್ತ ಇವರಿಬ್ಬರ ಬಿರುಸಿನ ಬ್ಯಾಟಿಂಗ್ ನಡುವೆ ಕೆಕೆಆರ್ ಬೌಲರ್​ಗಳು ಪರದಾಡಿದರು. ಇದರ ನಡುವೆ 40 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 4 ಫೋರ್​ನೊಂದಿಗೆ 56 ರನ್ ಬಾರಿಸಿ ಕಾನ್ವೆ ಔಟಾದರು.
ಆದರೆ ಮತ್ತೊಂದೆಡೆ ಅದಾಗಲೇ ಬಿರುಗಾಳಿ ಬ್ಯಾಟಿಂಗ್​ಗೆ ಒತ್ತು ನೀಡಿದ್ದ ರಹಾನೆ ಕೆಕೆಆರ್ ಬೌಲರ್​ಗಳ ಬೆಂಡೆತ್ತಿದರು. ಪರಿಣಾಮ ಕೇವಲ 24 ಎಸೆತಗಳಲ್ಲಿ ಅಜಿಂಕ್ಯ ರಹಾನೆ ಬ್ಯಾಟ್​ನಿಂದ ಅರ್ಧಶತಕ ಮೂಡಿಬಂತು.ಮತ್ತೊಂದೆಡೆ ರಹಾನೆಗೆ ಉತ್ತಮ ಸಾಥ್ ನೀಡಿದ ಶಿವಂ ದುಬೆ ಕೂಡ ಅಬ್ಬರಿಸಲಾರಂಭಿಸಿದರು. ಕೆಕೆಆರ್​ ಬೌಲರ್​ಗಳನ್ನು ಮನಸ್ಸೊ ಇಚ್ಛೆ ದಂಡಿಸಿದ ದುಬೆ ಕೇವಲ 20 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್​ನೊಂದಿಗೆ ಅರ್ಧಶತಕ ಪೂರೈಸಿ ವಿಕೆಟ್ ಒಪ್ಪಿಸಿದರು.ಇದಾಗ್ಯೂ ಅಜಿಂಕ್ಯ ರಹಾನೆ ಅಬ್ಬರ ಮಾತ್ರ ಕಮ್ಮಿಯಾಗಿರಲಿಲ್ಲ. ಅರ್ಧಶತಕದ ಬಳಿಕ ಬೀಸ್ಟ್ ಮೋಡ್​ನಲ್ಲಿ ಕಾಣಿಸಿಕೊಂಡ ರಹಾನೆ ತೂಫಾನ್ ಬ್ಯಾಟಿಂಗ್ ಮುಂದುವರೆಸಿದರು. ಕೊನೆಯವರೆಗೂ ಕ್ರೀಸ್​ ಕಚ್ಚಿ ನಿಂತು ಆಡಿದ ಅಜಿಂಕ್ಯ ರಹಾನೆ 29 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 6 ಫೋರ್​ನೊಂದಿಗೆ ಅಜೇಯ 71 ರನ್ ಬಾರಿಸಿದರು. ಪರಿಣಾಮ 20 ಓವರ್​ಗಳಲ್ಲಿ ಸಿಎಸ್​ಕೆ ತಂಡದ ಮೊತ್ತ 4 ವಿಕೆಟ್​ ನಷ್ಟಕ್ಕೆ 235 ಕ್ಕೆ ಬಂದು ನಿಂತಿತು.ಒಟ್ಟಿನಲ್ಲಿ ತನ್ನನ್ನು ಟೆಸ್ಟ್ ಕ್ರಿಕೆಟಿಗ ಎಂದು ಬಣ್ಣಿಸುತ್ತಿದ್ದವರಿಗೆ ಈ ಬಾರಿಯ ಐಪಿಎಲ್​ ಮೂಲಕ ಅಜಿಂಕ್ಯ ರಹಾನೆ ಉತ್ತರ ನೀಡುತ್ತಿದ್ದಾರೆ. ಇದಕ್ಕೆ ಸಾಕ್ಷಿಯೇ ಈ ಬಾರಿ ಮುಂಬೈ ಇಂಡಿಯನ್ಸ್ ವಿರುದ್ಧ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದು, ಇದೀಗ 29 ಎಸೆತಗಳಲ್ಲಿ 71 ರನ್ ಚಚ್ಚಿರುವುದು.

source https://tv9kannada.com/photo-gallery/cricket-photos/ajinkya-rahane-lights-up-eden-gardens-with-classy-batting-kannada-news-zp-au50-562287.html

Views: 0

Leave a Reply

Your email address will not be published. Required fields are marked *