IPL 2023: 4 ಕೋಟಿಗೆ 575 ರನ್ಸ್​: 3.8 ಕೋಟಿಗೆ 39 ರನ್ಸ್​​..!

IPL 2023: ಐಪಿಎಲ್​ನ 56ನೇ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಬಾರಿಸಿ ಯಶಸ್ವಿ ಜೈಸ್ವಾಲ್ ಅಬ್ಬರಿಸಿದ್ದಾರೆ. ಕೇವಲ 13 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಐಪಿಎಲ್​ನಲ್ಲಿ ಹೊಸ ಇತಿಹಾಸವನ್ನೂ ಕೂಡ ನಿರ್ಮಿಸಿದ್ದಾರೆ.ವಿಶೇಷ ಎಂದರೆ ಇದಕ್ಕೂ ಮುನ್ನ ಯಶಸ್ವಿ ಜೈಸ್ವಾಲ್ ಮುಂಬೈ ಇಂಡಿಯನ್ಸ್ ವಿರುದ್ಧ 124 ರನ್​ ಬಾರಿಸಿ ದಾಖಲೆ ನಿರ್ಮಿಸಿದ್ದರು. ಇದರೊಂದಿಗೆ ಐಪಿಎಲ್​ ಇತಿಹಾಸದಲ್ಲೇ ಗರಿಷ್ಠ ಸ್ಕೋರ್​ಗಳಿಸಿದ ಅನ್​ಕ್ಯಾಪ್ಡ್​ ಆಟಗಾರ ಎಂಬ ದಾಖಲೆ ಕೂಡ ಜೈಸ್ವಾಲ್​ ಪಾಲಾಗಿತ್ತು.ಇಲ್ಲಿ ಈ ಬಾರಿ ಕಣಕ್ಕಿಳಿಯುತ್ತಿರುವ ಅನ್​ಕ್ಯಾಪ್ಡ್​ (ಟೀಮ್ ಇಂಡಿಯಾ ಪರ ಆಡದ ಆಟಗಾರ) ಆಟಗಾರರ ಪೈಕಿ ರಾಜಸ್ಥಾನ್ ರಾಯಲ್ಸ್ ತಂಡದ ಯಶಸ್ವಿ ಜೈಸ್ವಾಲ್ ಹಾಗೂ ಆರ್​ಸಿಬಿ ತಂಡದ ಅನೂಜ್ ರಾವತ್ ಕೋಟಿ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ. ಆರ್​ಸಿಬಿ ಫ್ರಾಂಚೈಸಿಯು ಅನೂಜ್ ರಾವತ್​ಗೆ 3.8 ಕೋಟಿ ರೂ. ನೀಡುತ್ತಿದ್ದರೆ, ರಾಜಸ್ಥಾನ್ ರಾಯಲ್ಸ್ ಯಶಸ್ವಿ ಜೈಸ್ವಾಲ್​ಗೆ 4 ಕೋಟಿ ರೂ. ನೀಡುತ್ತಿದೆ. ಆದರೆ ಇವರಿಬ್ಬರ ಪ್ರದರ್ಶನ ಅಜಗಜಾಂತರದ ವ್ಯತ್ಯಾಸವಿದೆ ಎಂಬುದೇ ಇಲ್ಲಿ ವಿಶೇಷ.
ಅಂದರೆ 4 ಕೋಟಿ ರೂ. ಪಡೆಯುತ್ತಿರುವ ಯಶಸ್ವಿ ಜೈಸ್ವಾಲ್ 12 ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಈ ವೇಳೆ ಕಲೆಹಾಕಿರುವುದು ಬರೋಬ್ಬರಿ 575 ರನ್​ಗಳು. ಈ ವೇಳೆ 4 ಅರ್ಧಶತಕ ಹಾಗೂ 1 ಶತಕವನ್ನೂ ಕೂಡ ಬಾರಿಸಿದ್ದಾರೆ.ಅಂದರೆ 4 ಕೋಟಿ ರೂ. ಪಡೆಯುತ್ತಿರುವ ಯಶಸ್ವಿ ಜೈಸ್ವಾಲ್ 12 ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಈ ವೇಳೆ ಕಲೆಹಾಕಿರುವುದು ಬರೋಬ್ಬರಿ 575 ರನ್​ಗಳು. ಈ ವೇಳೆ 4 ಅರ್ಧಶತಕ ಹಾಗೂ 1 ಶತಕವನ್ನೂ ಕೂಡ ಬಾರಿಸಿದ್ದಾರೆ.ಮತ್ತೊಂದೆಡೆ ಆರ್​ಸಿಬಿ ಆಟಗಾರ ಅನೂಜ್ ರಾವತ್ 6 ಪಂದ್ಯಗಳಲ್ಲಿ ಕಣಕ್ಕಿಳಿದು ಕಲೆಹಾಕಿರುವುದು ಕೇವಲ 39 ರನ್​ಗಳು ಅಂದರೆ ನಂಬಲೇಬೇಕು.ಇಲ್ಲಿ ಮತ್ತೊಂದು ಅಚ್ಚರಿಯ ವಿಷಯ ಎಂದರೆ ಯಶಸ್ವಿ ಜೈಸ್ವಾಲ್ 12 ಪಂದ್ಯಗಳಲ್ಲಿ 74 ಫೋರ್ ಹಾಗೂ 26 ಸಿಕ್ಸ್​ ಸಿಡಿಸಿದ್ದಾರೆ. ಆದರೆ ಅನೂಜ್ ರಾವತ್ 6 ಪಂದ್ಯಗಳಲ್ಲಿ ಬಾರಿಸಿದ್ದು 2 ಫೋರ್ ಹಾಗೂ 1 ಸಿಕ್ಸ್ ಮಾತ್ರ.ಒಂದು ವೇಳೆ ಯಶಸ್ವಿ ಜೈಸ್ವಾಲ್ ಆರಂಭಿಕನಾಗಿ ಕಣಕ್ಕಿಳಿಯುತ್ತಿರುವ ಕಾರಣ ಬೃಹತ್ ಸ್ಕೋರ್​ಗಳಿಸಿದ್ದಾರೆ ಎಂದು ನೀವು ಹೇಳುವುದಾದರೆ, ಅನೂಜ್ ರಾವತ್ ಐಪಿಎಲ್ 2022 ರಲ್ಲಿ ಆರ್​ಸಿಬಿ ಪರ 8 ಪಂದ್ಯಗಳಲ್ಲಿ ಆರಂಭಿಕರಾಗಿ ಬ್ಯಾಟ್ ಬೀಸಿದ್ದರು.ಈ ವೇಳೆ ಅನೂಜ್ ರಾವತ್ ಬ್ಯಾಟ್​ನಿಂದ ಮೂಡಿಬಂದಿರುವುದು ಕೇವಲ 10 ಫೋರ್ ಹಾಗೂ 7 ಸಿಕ್ಸ್​ಗಳು ಮಾತ್ರ. ಹಾಗೆಯೇ 8 ಪಂದ್ಯಗಳಿಂದ ಕಲೆಹಾಕಿರುವುದು 129 ರನ್​ ಮಾತ್ರ. ಅಂದರೆ ಆರ್​ಸಿಬಿ ಪರ ಒಟ್ಟು 14 ಪಂದ್ಯಗಳನ್ನಾಡಿರುವ ಅನೂಜ್ ರಾವತ್ ಇದುವರೆಗೆ ಕಲೆಹಾಕಿರುವುದು 168 ರನ್​ಗಳು ಮಾತ್ರ. ಇದುವೇ ಆರ್​ಸಿಬಿ ಹಾಗೂ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಖರೀದಿಸಿರುವ ಆಟಗಾರರ ನಡುವಣ ವ್ಯತ್ಯಾಸ ಎಂದಷ್ಟೇ ಹೇಳಬಹುದು.

source https://tv9kannada.com/photo-gallery/cricket-photos/ipl-2023-yashasvi-jaiswal-ipl-price-and-anuj-rawat-ipl-price-kannada-news-zp-576657.html

Views: 0

Leave a Reply

Your email address will not be published. Required fields are marked *