IPL 2023: ಇಬ್ಬರು ಗೈರು; ಐಪಿಎಲ್ ಟ್ರೋಫಿಯೊಂದಿಗೆ ಕಾಣಿಸಿಕೊಂಡ 8 ತಂಡದ ನಾಯಕರು

ಐಪಿಎಲ್ ಆರಂಭಕ್ಕೆ ಇನ್ನೊಂದೆ ದಿನ ಬಾಕಿ ಉಳಿದಿದ್ದು, 8 ತಂಡಗಳ ಆಟಗಾರರು ಇಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್ ಟ್ರೋಫಿಯೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ನಾಳೆ ನಡೆಯುವ ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಈ ಎಲ್ಲಾ ತಂಡಗಳ ನಾಯಕರನ್ನೂ ನೋಡಬಹುದಾಗಿದೆ.ಹೈದರಾಬಾದ್ ತಂಡದ ನಾಯಕ ಈಡನ್ ಮಾರ್ಕ್ರಾಮ್ ಅವರ ಬದಲಿಗೆ ಭುವನೇಶ್ವರ್ ಕುಮಾರ್ ಅವರು ಫೋಟೋ ಶೂಟ್‌ಗೆ ಬಂದಿದ್ದರೆ, ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಗೈರಾಗಿದ್ದರು.ಇನ್ನು ಯಾವ ತಂಡವನ್ನು ಯಾವ ಆಟಗಾರ ಮುನ್ನಡೆಸುತ್ತಿದ್ದಾರೆ ಎಂಬ ವಿಚಾರಕ್ಕೆ ಬಂದರೆ, ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್ (ರಿಷಭ್ ಪಂತ್ ಅನುಪಸ್ಥಿತಿಯಲ್ಲಿ), ಗುಜರಾತ್ ಟೈಟಾನ್ಸ್: ಹಾರ್ದಿಕ್ ಪಾಂಡ್ಯ, ಕೋಲ್ಕತ್ತಾ ನೈಟ್ ರೈಡರ್ಸ್: ನಿತೀಶ್ ರಾಣಾ (ಗಾಯಗೊಂಡ ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ), ಲಕ್ನೋ ಸೂಪರ್ಜೈಂಟ್ಸ್: ಕೆಎಲ್ ರಾಹುಲ್, ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ಪಂಜಾಬ್ ಕಿಂಗ್ಸ್: ಶಿಖರ್ ಧವನ್, ಚೆನ್ನೈ ಸೂಪರ್ ಕಿಂಗ್: ಎಂಎಸ್ ಧೋನಿ, ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್, ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್, ಸನ್ ರೈಸರ್ಸ್ ಹೈದರಾಬಾದ್: ಏಡನ್ ಮಾರ್ಕ್ರಾಮ್.  ಎಲ್ಲಾ 10 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು ಅದರಲ್ಲಿ ಎ ಗುಂಪಿಯನಲ್ಲಿ: ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್, ಹಾಗೂ ಬಿ ಗುಂಪಿನಲ್ಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟಾನ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಸ್ಥಾನ ಪಡೆದಿವೆ.ಈ ಬಾರಿಯ ಐಪಿಎಲ್​ನಲ್ಲಿ ಒಟ್ಟು 70 ಲೀಗ್ ಪಂದ್ಯಗಳು ಮತ್ತು 4 ಪ್ಲೇಆಫ್ ಪಂದ್ಯಗಳನ್ನು ಆಡಲಾಗುತ್ತದೆ. ಇನ್ನು ಲೀಗ್ ಪಂದ್ಯಗಳ ಬಗ್ಗೆ ಮಾತನಾಡಿದರೆ ಕೆಲವು ದಿನಗಳು ಎರಡು ಪಂದ್ಯಗಳು ಮತ್ತು ಕೆಲವು ದಿನಗಳಲ್ಲಿ ಒಂದು ಪಂದ್ಯವನ್ನು ಆಡಲಾಗುತ್ತದೆ. ಡಬಲ್ ಹೆಡ್ಡರ್ ಪಂದ್ಯಗಳಿದ್ದರೆ, ಮೊದಲ ಪಂದ್ಯವು ಮಧ್ಯಾಹ್ನ 3.30 ಕ್ಕೆ ಪ್ರಾರಂಭವಾಗುತ್ತದೆ ಮತ್ತು ನಂತರ ಎರಡನೇ ಪಂದ್ಯವು ರಾತ್ರಿ 7:30 ಕ್ಕೆ ಪ್ರಾರಂಭವಾಗುತ್ತದೆ.  ಈ ಎಲ್ಲಾ ಪಂದ್ಯಗಳ ಟಾಸ್ ಪಂದ್ಯಕ್ಕೆ ನಿಖರವಾಗಿ 30 ನಿಮಿಷಗಳ ಮೊದಲು ನಡೆಯಲಿದೆ. ಅಂದರೆ ಮಧ್ಯಾಹ್ನದ ಪಂದ್ಯಕ್ಕೆ ಟಾಸ್ 3 ಗಂಟೆಗೆ ಮತ್ತು ಸಂಜೆಯ ಪಂದ್ಯಕ್ಕೆ ಟಾಸ್ 7 ಗಂಟೆಗೆ ನಡೆಯಲಿದೆ.ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಭಾರತದಲ್ಲಿ ಟಿವಿಯಲ್ಲಿ ನೇರ ಪ್ರಸಾರ ಮಾಡುವ ಪ್ರಸಾರದ ಹಕ್ಕನ್ನು ಪಡೆದುಕೊಂಡಿದೆ.  ಆದ್ದರಿಂದ ಟಿವಿಯಲ್ಲಿ ಎಲ್ಲಾ ಇಂಡಿಯನ್ ಪ್ರೀಮಿಯರ್ ಲೀಗ್ 2023 ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.  Viacom18 ಪಂದ್ಯಾವಳಿಯ ಡಿಜಿಟಲ್ ಹಕ್ಕುಗಳನ್ನು ಖರೀದಿಸಿದ್ದು, OTT ಪ್ಲಾಟ್‌ಫಾರ್ಮ್‌ನಲ್ಲಿ ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಲಭ್ಯವಿರುತ್ತದೆ.

source https://tv9kannada.com/photo-gallery/cricket-photos/ipl-2023-captains-of-10-ipl-teams-took-a-photoshoot-together-with-the-ipl-trophy-psr-au14-545886.html

Views: 0

Leave a Reply

Your email address will not be published. Required fields are marked *