IPL 2023: ಮುಂದುವರೆದ ಕೊಹ್ಲಿ-ಧವನ್ ನಡುವಣ ಪೈಪೋಟಿ: ದಾಖಲೆ ಸಮಬಲ

IPL 2023: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಅರ್ಧಶತಕ ಸಿಡಿಸಿ ಮಿಂಚಿದ್ದರು. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್​ಸಿಬಿ ಪರ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ಇನಿಂಗ್ಸ್ ಆರಂಭಿಸಿದ್ದರು.ಆರಂಭದಿಂದಲೇ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಕೊಹ್ಲಿ ಕೇವಲ 35 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆ ಬಳಿಕ ಬಿರುಸಿನ ಆಟಕ್ಕೆ ಮುಂದಾದ ಕೊಹ್ಲಿ 44 ಎಸೆತಗಳಲ್ಲಿ 4 ಫೋರ್ ಹಾಗೂ 4 ಸಿಕ್ಸ್​ ಒಳಗೊಂಡಂತೆ 61 ರನ್​ ಬಾರಿಸಿ ಔಟಾದರು.
ಈ ಅರ್ಧಶತಕದೊಂದಿಗೆ ವಿರಾಟ್ ಕೊಹ್ಲಿ ಐಪಿಎಲ್​ನಲ್ಲಿ ಅತೀ ಹೆಚ್ಚು ಬಾರಿ 50+ ರನ್​ ಕಲೆಹಾಕಿದ ಭಾರತೀಯ ಬ್ಯಾಟರ್​ ಎನಿಸಿಕೊಂಡಿರುವ ಶಿಖರ್ ಧವನ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ವಿಶೇಷ ಎಂದರೆ ಐಪಿಎಲ್​ ಆರಂಭಕ್ಕೂ ಮುನ್ನ ಈ ದಾಖಲೆ ಕೊಹ್ಲಿಯ ಹೆಸರಿನಲ್ಲಿತ್ತು. ಆದರೆ ಬ್ಯಾಕ್ ಟು ಬ್ಯಾಕ್ 2 ಅರ್ಧಶತಕ ಬಾರಿಸುವ ಮೂಲಕ ಧವನ್ ಈ ದಾಖಲೆಯನ್ನು ಮುರಿದು ಮುನ್ನುಗ್ಗಿದ್ದರು. ಇದೀಗ ಕಿಂಗ್ ಕೊಹ್ಲಿ ಮತ್ತೆ ಆ ದಾಖಲೆಯನ್ನು ಸರಿಗಟ್ಟಿದ್ದಾರೆ.ಸದ್ಯ ವಿರಾಟ್ ಕೊಹ್ಲಿ 218 ಇನಿಂಗ್ಸ್​ಗಳ ಮೂಲಕ ಒಟ್ಟು 51 ಬಾರಿ 50+ ಸ್ಕೋರ್​ಗಳಿಸಿದ್ದಾರೆ. ಮತ್ತೊಂದೆಡೆ ಶಿಖರ್ ಧವನ್ 208 ಇನಿಂಗ್ಸ್​ ಮೂಲಕ 51 ಬಾರಿ 50 ಪ್ಲಸ್ ರನ್​ಗಳಿಸಿದ್ದಾರೆ. ಈ ಮೂಲಕ ಇಬ್ಬರು ಆಟಗಾರರು ಜಂಟಿಯಾಗಿ 2ನೇ ಸ್ಥಾನ ಅಲಂಕರಿಸಿದ್ದಾರೆ.ಇನ್ನು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಡೇವಿಡ್ ವಾರ್ನರ್. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ವಾರ್ನರ್ 165 ಐಪಿಎಲ್​ ಇನಿಂಗ್ಸ್​ಗಳಲ್ಲಿ ಒಟ್ಟು 61 ಬಾರಿ 50+ ಸ್ಕೋರ್​ಗಳಿಸಿ ದಾಖಲೆ ನಿರ್ಮಿಸಿದ್ದಾರೆ.

source https://tv9kannada.com/photo-gallery/cricket-photos/ipl-2023-virat-kohli-equals-shikhar-dhawans-record-kannada-news-zp-au50-553338.html

Views: 0

Leave a Reply

Your email address will not be published. Required fields are marked *