IPL 2023: ಹೊಸ ಮೈಲುಗಲ್ಲು ದಾಟಿದ ಶುಭ್​ಮನ್ ಗಿಲ್: ರಿಷಭ್ ಪಂತ್ ದಾಖಲೆ ಜಸ್ಟ್ ಮಿಸ್

IPL 2023: ಅಹಮದಾಬಾದ್​ನಲ್ಲಿ ನಡೆದ ಐಪಿಎಲ್​ನ 13ನೇ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ ಶುಭ್​ಮನ್ ಗಿಲ್ (Shubman Gill) 39 ರನ್​ ಬಾರಿಸಿ ಮಿಂಚಿದ್ದರು. ಈ ರನ್​ಗಳೊಂದಿಗೆ ಗುಜರಾತ್ ಟೈಟಾನ್ಸ್ (Gujarat Titans) ತಂಡದ ಆರಂಭಿಕ ಆಟಗಾರ ಐಪಿಎಲ್​ನಲ್ಲಿ 2 ಸಾವಿರ ರನ್​ ಪೂರೈಸಿದ್ದಾರೆ.ವಿಶೇಷ ಎಂದರೆ ಈ 2 ಸಾವಿರ ರನ್​ಗಳೊಂದಿಗೆ ಐಪಿಎಲ್​ನಲ್ಲಿ ಅತೀ ವೇಗವಾಗಿ 2000 ರನ್​ ಕಲೆಹಾಕಿದ 2ನೇ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ರಿಷಭ್ ಪಂತ್ ಅಗ್ರಸ್ಥಾನದಲ್ಲಿದ್ದಾರೆ.ರಿಷಭ್ ಪಂತ್ 23 ವರ್ಷ, 27 ದಿನಗಳ ವಯಸ್ಸಿನಲ್ಲಿ ಐಪಿಎಲ್​ನಲ್ಲಿ 2 ಸಾವಿರ ರನ್​ ಪೂರೈಸಿದ್ದರು. ಈ ಮೂಲಕ ಶ್ರೀಮಂತ ಕ್ರಿಕೆಟ್​ ಲೀಗ್​ನಲ್ಲಿ 2000 ರನ್​ ಕಲೆಹಾಕಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.ಇದೀಗ 23 ವರ್ಷ, 214 ದಿನಗಳಲ್ಲಿ ಶುಭ್​ಮನ್ ಗಿಲ್ 2 ಸಾವಿರ ರನ್​ ಪೂರೈಸಿ ರಿಷಭ್ ಪಂತ್ ಅವರ ನಂತರದ ಸ್ಥಾನ ಅಲಂಕರಿಸಿದ್ದಾರೆ.ಐಪಿಎಲ್​ನಲ್ಲಿ ಕೆಕೆಆರ್ ಹಾಗೂ ಗುಜರಾತ್ ಟೈಟಾನ್ಸ್ ಪರ ಆಡಿರುವ ಶುಭ್​ಮನ್ ಗಿಲ್ ಒಟ್ಟು 74 ಇನಿಂಗ್ಸ್​ ಮೂಲಕ ಈ ಸಾಧನೆ ಮಾಡಿದ್ದಾರೆ. ಈ ವೇಳೆ ಅವರ ಬ್ಯಾಟ್​ನಿಂದ 15 ಅರ್ಧಶತಕಗಳು ಮೂಡಿಬಂದಿರುವುದು ವಿಶೇಷ.

source https://tv9kannada.com/photo-gallery/cricket-photos/ipl-2023-shubman-gill-in-youngest-players-to-2000-ipl-runs-list-kannada-news-zp-au50-553174.html

Views: 0

Leave a Reply

Your email address will not be published. Required fields are marked *