IPL 2023 DC vs RCB Live Streaming: ಮತ್ತೆ ಕೊಹ್ಲಿ- ಗಂಗೂಲಿ ಮುಖಾಮುಖಿ; ಪಂದ್ಯ ಆರಂಭ ಎಷ್ಟು ಗಂಟೆಗೆ?

IPL 2023 DC vs RCB Live Streaming: ಮತ್ತೆ ಕೊಹ್ಲಿ- ಗಂಗೂಲಿ ಮುಖಾಮುಖಿ; ಪಂದ್ಯ ಆರಂಭ ಎಷ್ಟು ಗಂಟೆಗೆ?
IPL 2023 DC vs RCB live streaming when and where to watch Delhi Capitals vs Royal Challengers Bangalore in Kannada

ಐಪಿಎಲ್​​ನ ಡಬಲ್ ಹೆಡರ್​ ದಿನದಂದು 2 ಪಂದ್ಯಗಳು ನಡೆಯಲ್ಲಿದ್ದು, ಮೊದಲ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿಯ (Mahendra Singh Dhoni) ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರೋಹಿತ್ ಶರ್ಮಾ (Rohit Sharma) ನೇತೃತ್ವದ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿವೆ. ದಿನದ ಎರಡನೇ ಪಂದ್ಯದಲ್ಲಿ ಡೇವಿಡ್ ವಾರ್ನರ್ (David Warner) ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಫಾಫ್ ಡು ಪ್ಲೆಸಿಸ್ (Faf du Plessis) ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Delhi Capitals vs Royal Challengers Bangalore) ತಂಡಗಳು ಮುಖಾಮುಖಿಯಾಗಲಿವೆ . ಎರಡೂ ತಂಡಗಳು ತಮ್ಮ ಕೊನೆಯ ಪಂದ್ಯವನ್ನು ಗೆದ್ದಿರುವುದರಿಂದ ಎರಡೂ ತಂಡಗಳು ಗೆಲ್ಲುವ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯುತ್ತಿವೆ. ಹಿಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿದ್ದರೆ, ಇತ್ತ ಆರ್​ಸಿಬಿ ಲಕ್ನೋ ತಂಡವನ್ನು ಮಣಿಸಿತ್ತು. ಪ್ರಸಕ್ತ ಐಪಿಎಲ್‌ನ ಕೊನೆಯ ಪಂದ್ಯದಲ್ಲಿ ಆರ್‌ಸಿಬಿ ಚಿನ್ನಸ್ವಾಮಿ ಮೈದಾನದಲ್ಲಿ ಡೆಲ್ಲಿ ವಿರುದ್ಧ 23 ರನ್‌ಗಳ ಜಯ ಸಾಧಿಸಿತ್ತು. ಹೀಗಾಗಿ ತನ್ನ ಗೆಲುವಿನ ಸರಣಿಯನ್ನು ಮುಂದುವರೆಸುವ ತವಕದಲ್ಲಿ ಆರ್​ಸಿಬಿ ಇದೆ.

ಇನ್ನು ಉಭಯ ತಂಡಗಳ ಮುಖಾಮುಖಿ ವರದಿ ನೋಡಿದರೆ ಐಪಿಎಲ್ ವೇದಿಕೆಯಲ್ಲಿ ಉಭಯ ತಂಡಗಳು 30 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಆರ್‌ಸಿಬಿ 19 ಬಾರಿ ಗೆದ್ದಿದ್ದರೆ, ಡೆಲ್ಲಿ 10 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 1 ಪಂದ್ಯ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ.

ಪಂದ್ಯದ ಪೂರ್ಣ ವಿವರ ಇಲ್ಲಿದೆ.

ಡೆಲ್ಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ಯಾವಾಗ ನಡೆಯಲಿದೆ?

ಡೆಲ್ಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ (ಏಪ್ರಿಲ್ 6) ನಾಳೆ ಶನಿವಾರ ನಡೆಯಲಿದೆ.

ಡೆಲ್ಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ಎಲ್ಲಿ ನಡೆಯುತ್ತದೆ?

ದೆಹಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಡೆಲ್ಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ಯಾವಾಗ ಪ್ರಾರಂಭವಾಗುತ್ತದೆ?

ದೆಹಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯವು ಸಂಜೆ 7:30ಕ್ಕೆ ಆರಂಭವಾಗಲಿದೆ. ಪಂದ್ಯಕ್ಕೂ ಮುನ್ನ 7 ಗಂಟೆಗೆ ಟಾಸ್ ನಡೆಯಲಿದೆ.

ಡೆಲ್ಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ ಲೈವ್ ಸ್ಟ್ರೀಮಿಂಗ್ ಎಲ್ಲಿ ವೀಕ್ಷಿಸಬಹುದು?

ದೆಹಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಟಿವಿಯಲ್ಲಿ ನೋಡಬಹುದು. ಇದಲ್ಲದೆ, ವೀಕ್ಷಕರು ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಐಪಿಎಲ್ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/ipl-2023-dc-vs-rcb-live-streaming-when-and-where-to-watch-delhi-capitals-vs-royal-challengers-bangalore-in-kannada-psr-571072.html

Leave a Reply

Your email address will not be published. Required fields are marked *