IPL 2023: 3 ವರ್ಷಗಳಿಂದ RCB ತಂಡದಲ್ಲಿದ್ದರೂ ಒಂದೇ ಒಂದು ಚಾನ್ಸ್ ನೀಡಿಲ್ಲ..!

IPL 2023: ಮಾರ್ಚ್ 10, 2021...ಆರ್​ಸಿಬಿ ತಂಡದಲ್ಲಿದ್ದ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಜೋಶ್ ಫಿಲಿಪೆ ಗಾಯಗೊಂಡಿದ್ದರು. ಹೀಗಾಗಿ ಅವರು ಐಪಿಎಲ್ ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿದ್ದರು. ಅತ್ತ ನ್ಯೂಜಿಲೆಂಡ್ ಟಿ20 ಲೀಗ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಫಿನ್ ಅಲೆನ್​ಗೆ ಅದೃಷ್ಟ ಖುಲಾಯಿಸಿತು. ಜೋಶ್ ಫಿಲಿಪೆ ಸ್ಥಾನದಲ್ಲಿ ನ್ಯೂಜಿಲೆಂಡ್​ನ ಯುವ ಆಟಗಾರ ಆರ್​ಸಿಬಿ ತಂಡಕ್ಕೆ ಆಯ್ಕೆಯಾದರು.ಇದು ನಡೆದು ಇದೀಗ 2 ವರ್ಷಗಳೇ ಕಳೆದಿವೆ. ಅಂದರೆ 2 ಸೀಸನ್​ ಐಪಿಎಲ್ ಮುಗಿದಿದು 3ನೇ ಸೀಸನ್ ನಡೆಯುತ್ತಿದೆ. ಇದಾಗ್ಯೂ ಫಿನ್ ಅಲೆನ್​ಗೆ ಒಂದೇ ಒಂದು ಪಂದ್ಯವಾಡಲು ಅವಕಾಶ ನೀಡಿಲ್ಲ ಎಂಬುದೇ ಅಚ್ಚರಿ. ಅತ್ತ ಆರ್​ಸಿಬಿ ಫ್ರಾಂಚೈಸಿ ಕಳೆದೆರಡು ವರ್ಷಗಳಿಂದ ಅಲೆನ್ ಅವರನ್ನು ತಂಡದಿಂದ ಕೈ ಬಿಟ್ಟಿಲ್ಲ, ಇತ್ತ ಚಾನ್ಸ್​ ಅನ್ನೂ ಕೂಡ ನೀಡುತ್ತಿಲ್ಲ.ಈ 3 ವರ್ಷಗಳ ನಡುವೆ ಫಿನ್ ಅಲೆನ್ ನ್ಯೂಜಿಲೆಂಡ್ ತಂಡದ ಪರ ಪದಾರ್ಪಣೆ ಮಾಡಿದ್ದಾರೆ. ಕಿವೀಸ್ ತಂಡದ ಆರಂಭಿಕನಾಗಿ ಸ್ಪೋಟಕ ಇನಿಂಗ್ಸ್ ಆಡಿದ್ದಾರೆ. ಅಲ್ಲದೆ 28 ಪಂದ್ಯಗಳಲ್ಲಿ 160 ರ ಸ್ಟ್ರೈಕ್ ರೇಟ್​ನಲ್ಲಿ 616 ರನ್​ ಬಾರಿಸಿದ್ದಾರೆ.ಆದರೆ ಐಪಿಎಲ್​ಗೆ ಆಗಮಿಸಿದರೆ ಫಿನ್ ಅಲೆನ್​ ಬೆಂಚ್ ಕಾದಿದ್ದೇ ಬಂತು. ಇದೀಗ ಆರ್​ಸಿಬಿ ಪರ ಮೂರನೇ ವರ್ಷಕ್ಕೆ ಕಾಲಿಟ್ಟಿರುವ ನ್ಯೂಜಿಲೆಂಡ್ ದಾಂಡಿಗ ಒಂದೇ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದಾರೆ.ಇತ್ತ ಆರ್​ಸಿಬಿ ತಂಡವು ಈಗಾಗಲೇ 8 ಪಂದ್ಯಗಳನ್ನಾಡಿದೆ. ಈ ಪಂದ್ಯಗಳಲ್ಲಿ ಅಲೆನ್​ಗೆ ಆಡುವ ಅವಕಾಶ ನೀಡಿಲ್ಲ. ಅದರಲ್ಲೂ ಮಧ್ಯಮ ಕ್ರಮಾಂಕದಲ್ಲಿ ಆರ್​​ಸಿಬಿ ಸತತ ವೈಫಲ್ಯ ಅನುಭವಿಸಿದರೂ ಟೀಮ್ ಬ್ಯಾಟಿಂಗ್​ ಲೈನಪ್​ನಲ್ಲಿ ಮಹತ್ವದ ಬದಲಾವಣೆ ಮಾಡುತ್ತಿಲ್ಲ. ಅಲ್ಲದೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಅಲೆನ್​ ಅವರನ್ನು ಕಣಕ್ಕಿಳಿಸಲು ಅವಕಾಶ ಇದ್ದರೂ, ಅಂತಹ ಪ್ರಯೋಗಕ್ಕೂ ಆರ್​ಸಿಬಿ ಮುಂದಾಗುತ್ತಿಲ್ಲ.ಇದೀಗ ಆರ್​ಸಿಬಿ ತನ್ನ 9ನೇ ಪಂದ್ಯಕ್ಕಾಗಿ ಸಜ್ಜಾಗುತ್ತಿದೆ. ಈ ಬಾರಿಯಾದರೂ ಆರ್​ಸಿಬಿ ಟೀಮ್ ಮ್ಯಾನೇಜ್ಮೆಂಟ್ ಮನಸ್ಸು ಬದಲಿಸಲಿದೆಯಾ ಎಂಬ ಕುತೂಹಲ ಅಭಿಮಾನಿಗಳದ್ದು. ಏಕೆಂದರೆ 3 ಸೀಸನ್​ಗಳಲ್ಲಿ RCB 39 ಪಂದ್ಯಗಳನ್ನಾಡಿದ್ದರೂ, ಒಂದೇ ಒಂದು ಪಂದ್ಯದಲ್ಲಿ ಅಲೆನ್​ಗೆ ಅವಕಾಶ ನೀಡಿಲ್ಲ. ಹೀಗಾಗಿ ಲಕ್ನೋ ಸೂಪರ್ ಜೈಂಟ್ಸ್​ ವಿರುದ್ಧದ ಪಂದ್ಯದಲ್ಲಾದರೂ ಚಾನ್ಸ್ ನೀಡುತ್ತಾರಾ ಎಂಬುದೇ ದೊಡ್ಡ ಪ್ರಶ್ನೆ. RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಮೈಕೆಲ್ ಬ್ರೇಸ್​ವೆಲ್​, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ವೇಯ್ನ್ ಪಾರ್ನೆಲ್, ವೈಶಾಕ್ ವಿಜಯಕುಮಾರ್.

source https://tv9kannada.com/photo-gallery/cricket-photos/ipl-2023-rcb-vs-lsg-finn-allen-will-get-chance-in-rcb-playing-11-kannada-news-zp-au50-566414.html

Leave a Reply

Your email address will not be published. Required fields are marked *