IPL 2023: ಶತಕ ಬಾರಿಸು ಎಂದ ಧೋನಿ ಫ್ಯಾನ್​ಗೆ ಕೊಹ್ಲಿ ಪಾಠ ಕಲಿಸಿದ್ದು ಹೇಗೆ ಗೊತ್ತಾ? ವಿಡಿಯೋ ನೋಡಿ

IPL 2023: ಶತಕ ಬಾರಿಸು ಎಂದ ಧೋನಿ ಫ್ಯಾನ್​ಗೆ ಕೊಹ್ಲಿ ಪಾಠ ಕಲಿಸಿದ್ದು ಹೇಗೆ ಗೊತ್ತಾ? ವಿಡಿಯೋ ನೋಡಿ
IPL 2023 Virat Kohli recalls funny altercation with fan giving batting tips see video

ಜೀವನದಲ್ಲಿ ಯಾರೂ ಪರ್ಫೆಕ್ಟ್ ಅಲ್ಲ. ಅದು ಆಟವೇ ಆಗಿರಲಿ, ಅಥವಾ ಯಾವುದೇ ಉದ್ಯೋಗವಾಗಿರಲಿ. ಆತ ಎಂತಹ ಅನುಭವವುಳ್ಳವನಾಗಿದ್ದರೂ, ಆತನೂ ಕೂಡ ಎಡವುತ್ತಾನೆ. ಇದನ್ನು ಕ್ರೀಡೆಯಲ್ಲಿ ನಾವು ಸಾಕಷ್ಟು ಬಾರಿ ನೋಡಿದ್ದೇವೆ. ಇದಕ್ಕೆ ಕ್ರಿಕೆಟ್ ದೇವರು ಎನಿಸಿಕೊಳ್ಳುವ ಸಚಿನ್ ತೆಂಡೂಲ್ಕರ್ (Sachin Tendulkar), ವಿಶ್ವ ಕ್ರಿಕೆಟ್​ನ ರನ್ ಮಷಿನ್ ಎನಿಸಿಕೊಳ್ಳುವ ಕಿಂಗ್ ಕೊಹ್ಲಿ (Virat Kohli) ಕೂಡ ಹೊರತಾಗಿಲ್ಲ. ಕೊಹ್ಲಿ ಬ್ಯಾಟ್ ಮೌನವಾದಗಲೆಲ್ಲ. ಕ್ರಿಕೆಟ್ ಅಭಿಮಾನಿಗಳ, ಪರಿಣಿತರ ಬಾಯಿ ಮಾತನಾಡಲಾರಂಭಿಸುತ್ತದೆ. ಅಂತಹ ಟೀಕೆಗಳಿಗೆ ವಿರಾಟ್ ತಮ್ಮದೇ ಶೈಲಿಯಲ್ಲಿ ಉತ್ತರ ನೀಡುತ್ತಿರುತ್ತಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಅಂತಹದ್ದೆ ವಿಡಿಯೋವೊಂದು ಹರಿದಾಡುತ್ತಿದ್ದು ಅದರಲ್ಲಿ, ತನ್ನ ಕಳಪೆ ಫಾರ್ಮ್​ ಬಗ್ಗೆ ಮಾತನಾಡಿದ ಅಭಿಮಾನಿಯೊಬ್ಬನಿಗೆ ಅವನದ್ದೆ ದಾಟಿಯಲ್ಲಿ ವಿರಾಟ್ ಕೊಹ್ಲಿ ನೀತಿ ಪಾಠ ಹೇಳಿದ್ದನ್ನು ಕಾಣಬಹುದಾಗಿದೆ. ಸದ್ಯ ಐಪಿಎಲ್​ನಲ್ಲಿ (IPL) ಆರ್​ಸಿಬಿ (RCB) ಪರ ಕಣಕ್ಕಿಳಿಯುತ್ತಿರುವ ಕೊಹ್ಲಿ, ಈ ಫ್ರಾಂಚೈಸಿಯ ಪಾಡ್‌ಕಾಸ್ಟ್ ಸಮಯದಲ್ಲಿ ಈ ಸ್ವಾರಸ್ಯಕರ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ಧೋನಿಗೆ ನಾಯಕತ್ವದ ಟಿಪ್ಸ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದೆ. ಇದರಲ್ಲಿ 2014ರಲ್ಲಿ ನಡೆದಿದ್ದ ಘಟನೆಯೊಂದನ್ನು ಕೊಹ್ಲಿ ಮೆಲುಕು ಹಾಕಿದ್ದಾರೆ. 2014ರಲ್ಲಿ ನನ್ನ ಬ್ಯಾಟಿಂಗ್ ಹೇಳಿಕೊಳ್ಳುವಂತಿರಲಿಲ್ಲ. ಇಂಗ್ಲೆಂಡ್ ಪ್ರವಾಸ ಸೇರಿದಂತೆ ಏಕದಿನ ಮಾದರಿಯಲ್ಲಿ ನಾನು ರನ್ ಬರ ಎದುರಿಸುತ್ತಿದೆ. ಈ ವೇಳೆ ನಮ್ಮ ತಂಡ ಕೊಚ್ಚಿಯಿಂದ ದೆಹಲಿಗೆ ಹೋಗುತ್ತಿತ್ತು. ತಂಡದ ಆಟಗಾರರು ವಿಮಾನದ ಮುಂಭಾಗದಲ್ಲಿ ಕುಳಿತಿದ್ದರು. ನಾನು ಕೂಡ ಅವರೊಂದಿಗೆ ಕುಳಿತಿದ್ದೆ. ಈ ವೇಳೆ ಚೆನ್ನೈನಿಂದ ಬಂದಿದ್ದ ಧೋನಿ ಅವರ ಕಟ್ಟಾ ಅಭಿಮಾನಿಯೊಬ್ಬರು ಧೋನಿಯನ್ನು ಭೇಟಿಯಾಗಿ ಅವರೊಂದಿಗೆ ಮಾತಿಗಿಳಿದರು.

ಧೋನಿಯನ್ನು ಭೇಟಿಯಾದ ಸಂತೋಷದಲ್ಲಿದ್ದ ಆ ವ್ಯಕ್ತಿ, ಧೋನಿಗೆ ತಂಡದ ಸಂಯೋಜನೆ ಮತ್ತು ನಾಯಕತ್ವದ ಬಗ್ಗೆ ಸಲಹೆಗಳನ್ನು ನೀಡಲು ಪ್ರಾರಂಭಿಸಿದರು. ಧೋನಿ ಸಾಕಷ್ಟು ತಾಳ್ಮೆಯಿಂದ ಆ ವ್ಯಕ್ತಿಯ ಮಾತುಗಳನ್ನು ಕೇಳಿದರು. ಧೋನಿಯೊಂದಿಗೆ ಸಾಕಷ್ಟು ಮಾತನಾಡಿದ ಬಳಿಕ ಆ ವ್ಯಕ್ತಿ ತನ್ನ ಸೀಟ್​ನತ್ತ ತೆರಳುತ್ತಿದ್ದರು. ಅಷ್ಟರಲ್ಲಿ ನಾನು ನಾನು ನನ್ನ ಸೀಟಿನಿಂದ ಎದ್ದೇಳುತ್ತಿದ್ದಂತೆ, ಆ ವ್ಯಕ್ತಿ ನನ್ನನ್ನು ನೋಡಿ ನನ್ನೊಂದಿಗೆ ಮಾತನಾಡಲು ಆರಂಭಿಸಿದರು.

IPL 2023: ಐಪಿಎಲ್​ನಲ್ಲಿ ಸೋಲುಗಳ ಸರದಾರ ಕಿಂಗ್​ ಕೊಹ್ಲಿ! ಹೆಚ್ಚು ಗೆಲುವು ಯಾರ ಹೆಸರಲ್ಲಿದೆ ಗೊತ್ತಾ?

3 ತಿಂಗಳಲ್ಲಿ ಛೇರ್ಮನ್ ಆಗಬೇಕು ಎಂದೆ; ಕೊಹ್ಲಿ

ನನ್ನನ್ನು ಕಂಡೊಡನೆ ಆ ವ್ಯಕ್ತಿ, ‘ಕೊಹ್ಲಿ, ಏನಾಗಿದೆ?. ಮುಂದಿನ ಪಂದ್ಯದಲ್ಲಿ ನಾನು ನಿಮ್ಮಿಂದ ಶತಕ ನಿರೀಕ್ಷಿಸುತ್ತೇನೆ ಎಂದರು. ಆಗ ನಾನು ಯುವ ಆಟಗಾರನಾಗಿದ್ದರಿಂದ ಇಂತಹ ಸಲಹೆ ನನ್ನನ್ನು ಕೆಣಕಿತು. ಕೂಡಲೇ ಆ ವ್ಯಕ್ತಿಯೊಂದಿಗೆ ಮಾತಿಗಿಳಿದ ನಾನು, ನೀವು ಯಾವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೀರಿ ಎಂದು ಕೇಳಿದೆ. ಅದಕ್ಕೆ ಅವರು ಯಾವುದೋ ಕಂಪನಿಯ ಹೆಸರು ಹೇಳಿದರು. ಆ ಕಂಪನಿಯಲ್ಲಿ ಯಾವ ಹುದ್ದೆ ನಿರ್ವಹಿಸುತ್ತಿದ್ದೀರಿ ಎಂದೆ. ಅದಕ್ಕೆ ಆತ ಯಾವುದೋ ವಿಭಾಗದಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದರು. ಕೂಡಲೇ ನಾನು, ನಿಮಗೆ ನಾನು ಇನ್ನು ಮೂರು ತಿಂಗಳು ಸಮಯ ಕೊಡ್ತೀನಿ ಅಷ್ಟರಲ್ಲಿ ನೀವು ಆ ಕಂಪನಿಯ ಛೇರ್ಮನ್ ಆಗಬೇಕು ಎಂದೆ.

ನನ್ನ ಮಾತಿನಿಂದ ಕಕ್ಕಾಬಿಕ್ಕಿಯಾದ ಅವರು, ಅದು ಹೇಗೆ ಸಾಧ್ಯ ಎಂದರು. ನಾನು ಹೇಳಿದ್ದನ್ನು ನಿಮಗೆ ಮಾಡಲು ಸಾಧ್ಯವಾಗಲ್ಲ ಎನ್ನುವುದಾದರೆ ನೀವು ಹೇಳಿದ್ದನ್ನು ನಾನು ಹೇಗೆ ಮಾಡಲು ಸಾಧ್ಯ ಎಂಬುದನ್ನು ಆ ವ್ಯಕ್ತಿಗೆ ಅರ್ಥ ಮಾಡಿಸಲು ಯತ್ನಿಸಿದೆ. ಅವರು ಹೇಳಿದ ಕೂಡಲೇ ಶತಕ ಬಾರಿಸಲು ಹೇಗೆ ಸಾಧ್ಯ? ಅವರು ಹೇಳಿದ ಕೂಡಲೇ ನಾನು ಶತಕ ಬಾರಿಸುವುದಕ್ಕೆ ಅದು ವಿಡಿಯೋ ಗೇಮ್ ಅಲ್ಲ. ನನ್ನ ಮಾರ್ಮಿಕ ಉತ್ತರ ಆ ವ್ಯಕ್ತಿಗೆ ಬೇಗ ಅರ್ಥವಾಯಿತು ಎಂದು ತೋರಿತು. ಅಷ್ಟರಲ್ಲಿ ತಂಡದ ಇತರ ಆಟಗಾರರು ಕೋಚ್ ಕೋಚ್ ಎಂದು ಕೂಗಲು ಆರಂಭಿಸದರು. ನನ್ನೊಂದಿಗೆ ಮಾತನಾಡಿದ ಬಳಿಕ ಆ ವ್ಯಕ್ತಿ ನಗುತ್ತಾ ತನ್ನ ಸೀಟ್​ನಲ್ಲಿ ಹೋಗಿ ಕುಳಿತರು ಎಂದು ಕೊಹ್ಲಿ 2014ರಲ್ಲಿ ನಡೆದಿದ್ದ ಘಟನೆಯನ್ನು ನೆನೆದಿದ್ದಾರೆ.

ವೇಯ್ಟರ್‌ ಸಲಹೆ ಸ್ವೀಕರಿಸಿದ್ದ ಸಚಿನ್

ಕೊಹ್ಲಿಗೂ ಮುನ್ನ ಇಂತಹದ್ದೆ ಘಟನೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಜೀವನದಲ್ಲೂ ನಡೆದಿತ್ತು. ಈ ಬಗ್ಗೆ ಸ್ವತಃ ಸಚಿನ್ ಅವರೇ ಒಮ್ಮೆ ಹೇಳಿಕೊಂಡಿದ್ದರು. ‘ಟೆಸ್ಟ್‌ ಕ್ರಿಕೆಟ್‌ ಸರಣಿ ಸಲುವಾಗಿ ಚೆನ್ನೈನ ತಾಜ್‌ ಕೋರಮಂಡಲ್‌ ಹೋಟೆಲ್‌ನಲ್ಲಿ ನಮ್ಮ ತಂಡ ಉಳಿದುಕೊಂಡಿತ್ತು. ಆ ಸಂದರ್ಭದಲ್ಲಿ ನಾನು ಕಾಫಿ ಆರ್ಡರ್‌ ಮಾಡಿದ್ದೆ. ಕಾಫಿ ಸರ್ವ್‌ ಮಾಡಲು ಬಂದಿದ್ದ ವೇಯ್ಟರ್‌, ನನ್ನ ಬ್ಯಾಟಿಂಗ್​ನಲ್ಲಾಗುತ್ತಿರುವ ಲೋಪವನ್ನು ಎತ್ತಿ ತೋರಿಸಿದ್ದ. ನನಗೆ ಬ್ಯಾಟಿಂಗ್ ಮಾಡುವಲ್ಲಿ ಆಗುತ್ತಿರುವ ತೊಂದರೆಯ ಬಗ್ಗೆ ವಿವರಿಸಿದ್ದ ಆ ವ್ಯಕ್ತಿ, ನೀವು ಮೊಣಕೈಗೆ ತೊಡುವ ಪ್ಯಾಡ್​ನಿಂದಾಗಿ ನಿಮಗೆ ಬ್ಯಾಟ್‌ ಸರಿಯಾಗಿ ಬೀಸಲಾಗುತ್ತಿಲ್ಲ. ಇದನ್ನು ನಾನು ನಿಮ್ಮ ಹಲವು ಬ್ಯಾಟಿಂಗ್ ವಿಡಿಯೋಗಳನ್ನು ನೋಡಿ ಪತ್ತೆ ಮಾಡಿದ್ದೇನೆ ಎಂದ. ಕೂಡಲೇ ನಾನು ನನ್ನ ಕೊಠಡಿಗೆ ತೆರಳಿ ನಾನು ನನ್ನ ಮೊಣಕೈಗೆ ತೊಡುವ ಪ್ಯಾಡ್​ನಲ್ಲಿ ಬೇಕಾದ ಬದಲಾವಣೆಗಳನ್ನು ತಂದುಕೊಂಡೆ. ಅದರ ಉದ್ದಗಲ ಮತ್ತು ಸ್ಟ್ರ್ಯಾಪ್‌ ಎಲ್ಲವನ್ನೂ ಬದಲಾಯಿಸಿದೆ ಎಂದು ಸಚಿನ್‌ ಅಪರೂಪದ ಘಟನೆಯೊಂದನ್ನು ಮೆಲುಕು ಹಾಕಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/ipl-2023-virat-kohli-recalls-funny-altercation-with-fan-giving-batting-tips-see-video-psr-au14-551249.html

Views: 0

Leave a Reply

Your email address will not be published. Required fields are marked *