Skip to content
  • Sunday, July 6, 2025
  • About us
  • Contact us
ಸಮಗ್ರ ಸುದ್ದಿ

ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

  • Home
  • Chitradurga
  • National
  • States
  • Cities
  • Business
  • Entertainment
  • Health
  • Sports
  • Tech
  • General Konwledge
  • Horoscope
  • Home
  • Sports
  • IPL 2023: ಈ ಐಪಿಎಲ್​ನಲ್ಲಿ ಕಳಪೆ ಪ್ರದರ್ಶನ ನೀಡಿದ ದುಬಾರಿ ವಿದೇಶಿ ಆಟಗಾರರಿವರು
Sports

IPL 2023: ಈ ಐಪಿಎಲ್​ನಲ್ಲಿ ಕಳಪೆ ಪ್ರದರ್ಶನ ನೀಡಿದ ದುಬಾರಿ ವಿದೇಶಿ ಆಟಗಾರರಿವರು

May 31, 2023
samagrasuddi

16ನೇ ಆವೃತ್ತಿಯ ಐಪಿಎಲ್​ಗೆ ರೋಚಕ ತೆರೆ ಬಿದ್ದಿದೆ. ಪ್ರತಿ ಬಾರಿಯಂತೆ ಈ ಸೀಸನ್​ ಕೂಡ ವಿಶ್ವ ಕ್ರಿಕೆಟ್‌ಗೆ ಅನೇಕ ಶ್ರೇಷ್ಠ ಆಟಗಾರರನ್ನು ನೀಡಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಫ್ರಾಂಚೈಸಿಗಳು ವಿದೇಶಿ ಆಟಗಾರರ ಮೇಲೆ ಹಣದ ಸುರಿಮಳೆಗೈದಿದ್ದವು. ಕೆಲವು ಆಟಗಾರರು ತಾವು ತೆಗೆದುಕೊಂಡ ಸಂಭಾವನೆಗೆ ತಕ್ಕಂತ ಪ್ರದರ್ಶನ ನೀಡಿದರು. ಆದರೆ ಇನ್ನು ಕೆಲವು ಆಟಗಾರರು ಭಾರಿ ಮೊತ್ತದ ಸಂಭಾವನೆ ಪಡೆದರಾದರೂ, ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದರು. ಅಂತಹ ಟಾಪ್ 5 ವಿದೇಶಿ ಆಟಗಾರರ ವಿವರ ಇಲ್ಲಿದೆ.ಸ್ಯಾಮ್ ಕರನ್ ಅವರನ್ನು ಪಂಜಾಬ್ ಕಿಂಗ್ಸ್ 18.5 ಕೋಟಿಗೆ ಖರೀದಿಸಿತ್ತು. ಐಪಿಎಲ್ ಇತಿಹಾಸದಲ್ಲಿ ಇಷ್ಟೊಂದು ಸಂಭಾವನೆ ಪಡೆದ ಮೊದಲ ಆಟಗಾರ ಎನಿಸಿಕೊಂಡ ಕರನ್ ಪ್ರದರ್ಶನ ಮಾತ್ರ ವಿಶೇಷವಾಗಿರಲಿಲ್ಲ.  ಈ ಸೀಸನ್​ನಲ್ಲಿ 14 ಪಂದ್ಯಗಳನ್ನಾಡಿದ್ದ ಕರನ್ ಬ್ಯಾಟಿಂಗ್​ನಲ್ಲಿ 276 ರನ್ ಸಿಡಿಸಿದರೆ, ಬೌಲಿಂಗ್​ನಲ್ಲಿ ಕೇವಲ 10 ವಿಕೆಟ್ ಪಡೆದರು. ಅಂತಿಮವಾಗಿ ಪಂಜಾಬ್ ತಂಡಕ್ಕೆ ಪ್ಲೇ ಆಫ್ ತಲುಪಲು ಸಾಧ್ಯವಾಗಲಿಲ್ಲ. ಭಾರಿ ಮೊತ್ತ ಪಡೆದು ವಿಫಲರಾದ ಆಟಗಾರರಲ್ಲಿ ಬೆನ್ ಸ್ಟೋಕ್ಸ್ ಕೂಡ ಸೇರಿದ್ದಾರೆ.  ಬೆನ್ ಸ್ಟೋಕ್ಸ್ 16.25 ಕೋಟಿಗೆ ಚೆನ್ನೈ ಸೇರಿಕೊಂಡಿದ್ದರು. ಆದರೆ ಚೆನ್ನೈ ಪರ ಕೇವಲ ಎರಡು ಪಂದ್ಯಗಳನ್ನು ಆಡಿದ ಸ್ಟೋಕ್ಸ್ ಬ್ಯಾಟಿಂಗ್​ನಲ್ಲಿ ಕೇವಲ 15 ರನ್ ಬಾರಿಸಿದರೆ, ಬೌಲಿಂಗ್​ನಲ್ಲಿ ಖಾಲಿ ಕೈಯಲ್ಲಿ ವಾಪಸ್ಸಾದರು.ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಅವರನ್ನು ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್‌ನ ಮೆಗಾ ಹರಾಜಿನಲ್ಲಿ ಎಂಟು ಕೋಟಿ ಮೊತ್ತವನ್ನು ಪಾವತಿಸಿ ಖರೀದಿಸಿತು.  ಆದರೆ ಗಾಯದ ಕಾರಣ ಕಳೆದ ಸೀಸನ್​ನಲ್ಲಿ ಆಡಲು ಆರ್ಚರ್​ಗೆ ಸಾಧ್ಯವಾಗಿರಲಿಲ್ಲ.  ಆದರೆ ಈ ಸೀಸನ್​ನಲ್ಲಿ ತಂಡದ ಪರ ಕಣಕ್ಕಿಳಿದಿದ್ದ ಆರ್ಚರ್ ಪ್ರದರ್ಶನ ಹೇಳಿಕೊಳ್ಳುವಂತಿರಲಿಲ್ಲ. ಮುಂಬೈ ಪರ ಐದು ಪಂದ್ಯಗಳನ್ನು ಆಡಿದ ಆರ್ಚರ್, ಕೇವಲ ಎರಡು ವಿಕೆಟ್ಗಳನ್ನು ಮಾತ್ರ ಉರುಳಿಸಿದರು. ಹಾಗೆಯೇ ಇಂಜುರಿಯಿಂದಾಗಿ ಇಡೀ ಸೀಸನ್​ ಕೂಡ ಆಡಲಿಲ್ಲ.ಪಾಕಿಸ್ತಾನ ಸೂಪರ್ ಲೀಗ್​ನಲ್ಲಿ ಅಮೋಘ ಆಟ ಪ್ರದರ್ಶಿಸಿ ಐಪಿಎಲ್​ ಹರಾಜಿಗೆ ಎಂಟ್ರಿಕೊಟ್ಟಿದ್ದ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ಅವರನ್ನು 13.25 ಕೋಟಿಗೆ ಸನ್ ರೈಸರ್ಸ್ ಹೈದರಾಬಾದ್ ಖರೀದಿಸಿತ್ತು.  ಆದರೆ ಈ ಆಟಗಾರ ಕೂಡ ವಿಫಲರಾದರು. ಒಂದು ಶತಕವನ್ನು ಹೊರತುಪಡಿಸಿ, ಬ್ರೂಕ್‌ಗೆ ಬೇರೆ ಯಾವುದೇ ಉತ್ತಮ ಇನ್ನಿಂಗ್ಸ್‌ಗಳನ್ನು ಆಡಲು ಸಾಧ್ಯವಾಗಲಿಲ್ಲ.  ಈ ಸೀಸನ್​ನಲ್ಲಿ 11 ಪಂದ್ಯಗಳನ್ನು ಆಡಿದ ಬ್ರೂಕ್, ಕೇವಲ 21.11ಸರಾಸರಿ ಮತ್ತು 123.38 ಸ್ಟ್ರೈಕ್ ರೇಟ್​ನಲ್ಲಿ ಕೇವಲ 190 ರನ್ ಬಾರಿಸಿದರು.10.50 ಕೋಟಿಗೆ ಆರ್​ಸಿಬಿ ಸೇರಿಕೊಂಡಿದ್ದ ವನಿಂದು ಹಸರಂಗ ಈ ಸೀಸನ್​ನಲ್ಲಿ ಹೇಳಿಕೊಳ್ಳುವ ಪ್ರದರ್ಶನ ನೀಡಲಿಲ್ಲ. ಆರ್​ಸಿಬಿ ಪರ ಎಂಟು ಪಂದ್ಯಗಳನ್ನಾಡಿದ  ಹಸರಂಗ ಕೇವಲ ಒಂಬತ್ತು ವಿಕೆಟ್‌ಗಳನ್ನು ಮಾತ್ರ ಪಡೆದರು. ಆದರೆ ಬರೋಬ್ಬರಿ 8.13ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟು ತೀರ ದುಬಾರಿಯಾದರು.

source https://tv9kannada.com/photo-gallery/cricket-photos/5-overseas-t20-stars-who-were-flops-in-ipl-2023-psr-591025.html

Tags: Cricket, IPL, IPL 2023, samagrasuddi, T-20, TATA IPL 2023, ಸಮಗ್ರ ಸುದ್ದಿ

Post navigation

Wrestlers Protest: ಬ್ರಿಜ್​ ಭೂಷಣ್​ರನ್ನು ಬಂಧಿಸಲು ಸಾಕಷ್ಟು ಸಾಕ್ಷ್ಯಗಳಿಲ್ಲ: ಪೊಲೀಸ್ ಮೂಲಗಳು
ನನ್ನ ವಿರುದ್ಧ ಒಂದೇ ಒಂದು ಆರೋಪ ಸಾಬೀತಾದರೆ ನೇಣು ಹಾಕಿಕೊಳ್ಳುತ್ತೇನೆ: ಡಬ್ಲ್ಯುಎಫ್‌ಐ ಮುಖ್ಯಸ್ಥ

Leave a Reply Cancel reply

Your email address will not be published. Required fields are marked *

Recent Comments

  1. Kaveri Sonkamble on SBI ನೇಮಕಾತಿ; ಸರ್ಕಲ್​ ಬೇಸ್ಡ್​​ ಆಫೀಸರ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನMay 31, 2025

    Kaveri Sonkamble

  2. Vani m on SBI Recruitment 2025: SBI ಬ್ಯಾಂಕಿನಲ್ಲಿ 2964 ಹುದ್ದೆಗಳಿಗೆ ನೇಮಕಾತಿ; ಪದವೀಧರರು ಕೂಡಲೇ ಅರ್ಜಿ ಸಲ್ಲಿಸಿMay 13, 2025

    I am complete b. Com in experience of work

  3. Sushma Basayya Hiremath on ಅಗ್ನಿವೀರ್​ ನೇಮಕಾತಿ: ರಾಜ್ಯದ 14 ಜಿಲ್ಲೆಗಳ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.April 9, 2025

    Sushma Basayya Hiremath

  4. samagrasuddi on ಮೈಸೂರು| ಶಾರದ ವಿಲಾಸ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣದಲ್ಲಿ ವಿಶ್ವ ಜಲ ದಿನ ಕಾರ್ಯಕ್ರಮ.March 24, 2025

    Tq

  5. Darshan K M on ಮೈಸೂರು| ಶಾರದ ವಿಲಾಸ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣದಲ್ಲಿ ವಿಶ್ವ ಜಲ ದಿನ ಕಾರ್ಯಕ್ರಮ.March 24, 2025

    Meaning full program..✨❤️

CITIES

Cities

🏫 ಕರ್ನಾಟಕದ 4,134 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ತರಗತಿಗಳಿಗೆ ಅವಕಾಶ

July 4, 2025
samagrasuddi

📅 ದಿನಾಂಕ: 4 ಜುಲೈ 2025✍️ ಸಮಗ್ರ ಸುದ್ದಿ ವಿಶೇಷ ✅ ಮಹತ್ವದ ನಿರ್ಧಾರ: ಕರ್ನಾಟಕ ಸರ್ಕಾರವು 2025–26ನೇ ಶೈಕ್ಷಣಿಕ ವರ್ಷದಿಂದ ರಾಜ್ಯದ 4,134 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ತರಗತಿಗಳನ್ನು ಪ್ರಾರಂಭಿಸಲು ಸಿದ್ಧತೆ ಮಾಡಿಕೊಂಡಿದೆ. ವಿದ್ಯಾರ್ಥಿಗಳಿಗೆ ಇಂದಿನ ಸ್ಪರ್ಧಾತ್ಮಕ…

Cities

ಕರ್ನಾಟಕದ ಪ್ರಮುಖ ಐತಿಹಾಸಿಕ ತಾಣಗಳು

July 4, 2025
samagrasuddi
Cities

ದಾವಣಗೆರೆ ಜಿಲ್ಲೆಯ ಮಾರುತಿ ಹೆಚ್ ಗೆ 2025ರ ಇಂಟರ್ ನ್ಯಾಷನಲ್ ಐಕಾನ್ ಪ್ರಶಸ್ತಿ ಪ್ರದಾನ.

July 4, 2025
samagrasuddi
Cities

“ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯ ಮುನ್ಸೂಚನೆ – ರೈತರಿಗೆ ಮುನ್ನೆಚ್ಚರಿಕೆ ಅಗತ್ಯ!”

July 4, 2025
samagrasuddi
Cities Health

ಚಿಂತೆ ಬೇಡ, ಹೃದಯ ಸೇಫ್! — ಹಾಸನ ಜಿಲ್ಲೆಯಲ್ಲಿನ ಹೃದಯಾಘಾತ ಪ್ರಕರಣಗಳಿಗೆ ತಡೆಗಟ್ಟಲು ಸರ್ಕಾರದಿಂದ ಕ್ರಮ

July 2, 2025
samagrasuddi

You may Missed

Health

“Health Tips”: ವಿಟಮಿನ್‌ ಡಿ: ನಮಗೇಕೆ ಬೇಕು?

July 6, 2025
samagrasuddi
Health

ತಿಂಗಳುಗಟ್ಟಲೆ ಕ್ಯಾರೆಟ್ ತಾಜಾವಾಗಿರಲು ಈ ಸಲಹೆಯನ್ನು ಅನುಸರಿಸಿ! “carrot”

July 5, 2025
samagrasuddi
Health

“ಕರ್ನಾಟಕದಲ್ಲಿ COVID-19 ಪ್ರಕರಣಗಳಲ್ಲಿ ಮತ್ತೆ ಹೆಚ್ಚಳ – ಆರೋಗ್ಯ ಇಲಾಖೆ ಎಚ್ಚರಿಕೆ”

July 4, 2025
samagrasuddi
Health

🌿 ತುಳಸಿಯ ಸೌಂದರ್ಯ ಮತ್ತು ಆರೋಗ್ಯ ಮಹತ್ವ

July 4, 2025
samagrasuddi
July 2025
M T W T F S S
 123456
78910111213
14151617181920
21222324252627
28293031  
« Jun    
  • “IND vs ENG”: ಗಿಲ್ ಶತಕ, ಸಿರಾಜ್- ಆಕಾಶ್ ಮಾರಕ ದಾಳಿ; ದಿನದಾಟದಂತ್ಯಕ್ಕೆ ಇಂಗ್ಲೆಂಡ್ 72/3
  • “Health Tips”: ವಿಟಮಿನ್‌ ಡಿ: ನಮಗೇಕೆ ಬೇಕು?
  • “Horoscope Today 06 July”: ಇಂದು ಈ ರಾಶಿಯವರಿಗೆ ಪುಣ್ಯ ಕರ್ಮಗಳನ್ನು ಮಾಡಲು ಅನಿರೀಕ್ಷಿತ ಅವಕಾಶ.
  • ನೀರಜ್ ಚೋಪ್ರಾ ಪ್ರಧಾನದ ಆಕರ್ಷಣೆ: ಬೆಂಗ್ಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇಂದು ಎನ್ ಸಿ ಕ್ಲಾಸಿಕ್ ಸ್ಪರ್ಧೆ
  • 📝 ಎಸ್‌ಎಸ್‌ಎಲ್‌ಸಿ ಬ್ಲೂಪ್ರಿಂಟ್‌ನಲ್ಲಿ ಎಲ್ಲಾ ಮಾದರಿ ಅಂಕಗಳ ಪ್ರಶ್ನೆ
Copyright © 2025 ಸಮಗ್ರ ಸುದ್ದಿ
Contact us
Theme by: Theme Horse
Proudly Powered by: WordPress