IPL 2023 Final: ಚೆನ್ನೈ ಸೂಪರ್ ಕಿಂಗ್ಸ್​ ಪಾಲಿಗೆ ವಿಲನ್ ಆದ ಚೆನ್ನೈ ಕ್ರಿಕೆಟಿಗ..!

IPL 2023 Final CSK vs GT: ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಫೈನಲ್​ನಲ್ಲಿ ಅಬ್ಬರಿಸುವ ಮೂಲಕ ಸಾಯಿ ಸುದರ್ಶನ್ ಸಂಚಲನ ಸೃಷ್ಟಿಸಿದ್ದಾರೆ. ನಿರ್ಣಾಯಕ ಪಂದ್ಯದಲ್ಲಿ ಸಿಎಸ್​ಕೆ ಬೌಲರ್​ಗಳ ಬೆಂಡೆತ್ತಿದ ಸಾಯಿ ಸಿಕ್ಸ್​-ಫೋರ್​ಗಳ ಸುರಿಮಳೆಗೈದರು.8ನೇ ಓವರ್​ ವೇಳೆ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಾಯಿ ಸುದರ್ಶನ್ ಆರಂಭದ 12 ಎಸೆತಗಳಲ್ಲಿ ಕಲೆಹಾಕಿದ್ದು ಕೇವಲ 10 ರನ್ ಮಾತ್ರ. ಆದರೆ ತಂಡದ ಮೊತ್ತ 100ರ ಗಡಿದಾಟುತ್ತಿದ್ದಂತೆ ಸಾಯಿ ಕೂಡ ಬ್ಯಾಟಿಂಗ್ ಗೇರ್ ಬದಲಿಸಿದರು.ಸಾಯಿಯ ಅಬ್ಬರ ಶುರುವಾಗುತ್ತಿದ್ದಂತೆ ಅತ್ತ ಸಿಎಸ್​ಕೆ ಬೌಲರ್​ಗಳು ಲಯ ತಪ್ಪಿದರು. ಆ ಬಳಿಕ ಸುದರ್ಶನ್ ಹಿಂತಿರುಗಿ ನೋಡಿಲ್ಲ ಎನ್ನಬಹುದು. ಇದರ ನಡುವೆ ಧೋನಿ ಹಲವು ಬಾರಿ ಬೌಲಿಂಗ್​ನಲ್ಲಿ ಬದಲಾವಣೆ ತಂದರೂ ಸಾಯಿಯ ಅಬ್ಬರವನ್ನು ತಡೆಯಲಾಗಲಿಲ್ಲ.ಪರಿಣಾಮ 33 ಎಸೆತಗಳಲ್ಲಿ ಸಾಯಿ ಸುದರ್ಶನ್ ಅರ್ಧಶತಕ ಪೂರೈಸಿದರು. ಈ ವೇಳೆ ಕ್ರೀಸ್​ಗೆ ಆಗಮಿಸಿದ ಹಾರ್ದಿಕ್ ಪಾಂಡ್ಯ ಯುವ ಆಟಗಾರನಿಗೆ ಮನಸೊ ಇಚ್ಛೆ ಬ್ಯಾಟ್ ಬೀಸುವಂತೆ ಸಂಪೂರ್ಣ ಸ್ವಾತಂತ್ರ್ಯ ನೀಡಿದರು.ಅಲ್ಲಿಂದ ಶುರುವಾದ ಸಾಯಿ ಸುದರ್ಶನ್ ಅಬ್ಬರಕ್ಕೆ ಚೆನ್ನೈ ಸೂಪರ್ ಕಿಂಗ್ ಬೌಲರ್​ಗಳು ಪರದಾಡಿದರು. ಅದರಲ್ಲೂ 19ನೇ ಓವರ್​ವರೆಗೂ ಸಿಡಿಲಬ್ಬರ ಮುಂದುವರೆಸಿದ ಸಾಯಿ ಇನ್ನೇನು ಶತಕ ಪೂರೈಸಲಿದ್ದಾರೆ ಅನ್ನುವಷ್ಟರಲ್ಲಿ ಮತೀಶ ಪತಿರಾಣ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ಹೊರನಡೆದರು.ಆದರೆ ಅದಾಗಲೇ ಕೇವಲ 47 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 8 ಫೋರ್​ನೊಂದಿಗೆ ಸಾಯಿ ಸುದರ್ಶನ್ 96 ರನ್ ಚಚ್ಚಿದ್ದರು. ಪರಿಣಾಮ ಸಿಎಸ್​ಕೆ ತಂಡವು ನಿಗದಿತ 20 ಓವರ್​ಗಳಲ್ಲಿ 214 ರನ್​ಗಳಿಸಲು ಸಾಧ್ಯವಾಯಿತು.ವಿಶೇಷ ಎಂದರೆ ಇದೇ ಸಾಯಿ ಸುದರ್ಶನ್ ಅವರನ್ನು ಅತ್ಯುತ್ತಮ ಕ್ರಿಕೆಟಿಗನಾಗಿ ರೂಪಿಸಿದ ಕೀರ್ತಿ ಚೆನ್ನೈ ಸೂಪರ್ ಕಿಂಗ್ಸ್​ಗೆ ಸಲ್ಲುತ್ತದೆ. ಏಕೆಂದರೆ ತಮಿಳುನಾಡು ಮೂಲದ ಸಾಯಿ ಸುದರ್ಶನ್ 2018 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ನಡೆಸುವ ಜೂನಿಯರ್ ಸೂಪರ್ ಕಿಂಗ್ಸ್ ಲೀಗ್​ನಲ್ಲಿ ಕಾಣಿಸಿಕೊಂಡಿದ್ದರು. ಅಂದು ಲೈಕಾ ಕೋವೈ ಕಿಂಗ್ಸ್​ ಪರ ಕಣಕ್ಕಿಳಿದ ಸಾಯಿ ಸುದರ್ಶನ್ ಆ ಬಳಿಕ ಭಾರತ-ಎ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಇದಾದ ಬಳಿಕ ಸಾಯಿ ಸುದರ್ಶನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಐಪಿಎಲ್​ನಲ್ಲಿ ಖರೀದಿಸಲಿಲ್ಲ ಎಂಬುದೇ ಅಚ್ಚರಿ.ಆದರೆ ಕಳೆದ ಸೀಸನ್​ನಲ್ಲಿ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಚೆನ್ನೈನ ಆಟಗಾರನನ್ನು ಕೇವಲ 20 ಲಕ್ಷ ರೂ. ನೀಡಿ ಖರೀದಿಸಿತು. ಇದೀಗ 21 ವರ್ಷದ ಯುವ ಎಡಗೈ ದಾಂಡಿಗ ಸಾಯಿ ಸುದರ್ಶನ್ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧವೇ ಅಬ್ಬರಿಸಿ ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ.

source https://tv9kannada.com/photo-gallery/cricket-photos/ipl-2023-final-who-is-sai-sudharsan-kannada-news-zp-589788.html

Leave a Reply

Your email address will not be published. Required fields are marked *