IPL 2023 Final CSK vs GT: ಓವರ್​ಗಳ ಕಡಿತ: ಮಳೆ ಮುಂದುವರೆದರೆ ನಾಳೆ ಫೈನಲ್ ಫೈಟ್

IPL 2023 Final CSK vs GT: ಐಪಿಎಲ್ ಫೈನಲ್ ಪಂದ್ಯಕ್ಕೆ ಮಳೆ ಅಡಚಣೆಯಾಗಿದೆ. 7.30 ಕ್ಕೆ ಶುರುವಾಗಬೇಕಿದ್ದ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯವು ಇನ್ನೂ ಕೂಡ ಆರಂಭವಾಗಿಲ್ಲ. ಇತ್ತ ಫೈನಲ್ ಪಂದ್ಯವು ಮಳೆಯಿಂದ ರದ್ದಾದರೆ ಮುಂದೇನು ಎಂಬ ಪ್ರಶ್ನೆ ಮೂಡುವುದು ಸಹಜ.ಇದಕ್ಕಾಗಿ ಬಿಸಿಸಿಐ ಕೆಲ ನಿಯಮಗಳನ್ನು ರೂಪಿಸಿದೆ. ಈ ನಿಯಮಗಳಂತೆ 9.35 ರ ಬಳಿಕ ಪಂದ್ಯ ಶುರುವಾದರೆ ಓವರ್​ಗಳ ಕಡಿತವಾಗಲಿದೆ. ಉದಾಹರಣೆಗೆ 10 ಗಂಟೆಗೆ ಪಂದ್ಯ ಶುರುವಾದರೆ 17 ಓವರ್​ಗಳ ಮ್ಯಾಚ್ ನಡೆಯಲಿದೆ. 10.30 ಗಂಟೆಗೆ ಆರಂಭವಾದರೆ 15 ಓವರ್​ಗಳ ಪಂದ್ಯ, ಹಾಗೆಯೇ 11 ಗಂಟೆಗೆ ಶುರುವಾದರೆ 12 ಓವರ್​ಗಳ ಪಂದ್ಯ ನಡೆಯಲಿದೆ. ಇನ್ನು 11.30 ಕ್ಕೆ ಆರಂಭವಾದರೆ ಕೇವಲ 9 ಓವರ್​ಗಳ ಪಂದ್ಯ ನಡೆಯಲಿದೆ.ಅಲ್ಲದೆ ಆ ಬಳಿಕ ಡಕ್​ವರ್ತ್​ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಬೇಕಿದ್ದರೆ ಉಭಯ ತಂಡಗಳು ಕನಿಷ್ಠ 5 ಓವರ್​ಗಳನ್ನು ಆಡಿರಲೇಬೇಕು. ಅಂದರೆ ಮಾತ್ರ ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರ ವಿಜಯಿಯನ್ನು ಘೋಷಿಸಲಾಗುತ್ತದೆ.ಇನ್ನು ನಿಗದಿತ ಸಮಯದೊಳಗೆ ಪಂದ್ಯ ನಡೆಯದಿದ್ದರೆ ಹೆಚ್ಚುವರಿ ಸಮಯ ತೆಗೆದುಕೊಳ್ಳಲಾಗುತ್ತದೆ. ಈ ಮೂಲಕ 5 ಓವರ್​ಗಳ ಪಂದ್ಯವನ್ನು ಆಯೋಜಿಸಲಿದೆ. ಈ 5 ಓವರ್​ಗಳ ಪಂದ್ಯವು ರಾತ್ರಿ 11.56 ರಿಂದ ಶುರುವಾಗಲಿದ್ದು, 12.50 ರೊಳಗೆ ಮುಗಿಯಲಿದೆ.ಇನ್ನು 11.56 ರಿಂದ 12.50 ರೊಳಗೆ 5 ಓವರ್​ಗಳ ಪಂದ್ಯ ಆಯೋಜಿಸಲು ಸಾಧ್ಯವಾಗದಿದ್ದರೆ ಮೀಸಲು ದಿನಕ್ಕೆ ಪಂದ್ಯವನ್ನು ಮುಂದೂಡಲಾಗುತ್ತದೆ.ಈ ಬಗ್ಗೆ ಗುಜರಾತ್ ಟೈಟಾನ್ಸ್​ ಟ್ವೀಟ್ ಮಾಡಿದ್ದು, ಸೋಮವಾರ ಮೀಸಲು ದಿನ ಇದೆ ಎಂದು ಖಚಿತಪಡಿಸಿದೆ. ಹೀಗಾಗಿ 12 ಗಂಟೆಯ ಬಳಿಕ ಕೂಡ ಪಂದ್ಯವನ್ನು ಆಯೋಜಿಸಲು ಸಾಧ್ಯವಾಗದಿದ್ದರೆ ಪಂದ್ಯವು ಸೋಮವಾರ ನಡೆಯುವುದು ಬಹುತೇಕ ಖಚಿತ ಎನ್ನಬಹುದು.ಒಂದು ವೇಳೆ ಸೋಮವಾರ ಕೂಡ ಮಳೆಯಿಂದಾಗಿ ಕನಿಷ್ಠ ಸೂಪರ್ ಓವರ್ ಪಂದ್ಯ ನಡೆಯದಿದ್ದರೆ, ಲೀಗ್​ ಹಂತದ 70 ಪಂದ್ಯಗಳ ನಂತರ ಪಾಯಿಂಟ್ಸ್​ ಟೇಬಲ್​ನಲ್ಲಿ ಅಗ್ರಸ್ಥಾನ ಅಲಂಕರಿಸಿದ ತಂಡವನ್ನು ಚಾಂಪಿಯನ್ಸ್ ಎಂದು ಘೋಷಿಸಲಾಗುತ್ತದೆ.

source https://tv9kannada.com/photo-gallery/cricket-photos/ipl-2023-tomorrow-is-a-reserve-day-for-ipl-2023-final-kannada-news-zp-589155.html

Leave a Reply

Your email address will not be published. Required fields are marked *