IPL 2023 Final Rain Rules: ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿ: ಹೀಗೆ ನಡೆಯಲಿದೆ ಮ್ಯಾಚ್..!

IPL 2023 Final: ಅಹಮದಾಬಾದ್​ನಲ್ಲಿ ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಿದೆ. 7.30 ಕ್ಕೆ ಶುರವಾಗಬೇಕಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಣ ಪಂದ್ಯವು ಮಳೆಯ ಕಾರಣ ವಿಳಂಬವಾಗಿದೆ.ಸದ್ಯ ಅಹಮದಾಬಾದ್​ನಲ್ಲಿ ಸತತ ಮಳೆಯಾಗುತ್ತಿದ್ದು, ಹೀಗಾಗಿ ಪಂದ್ಯ ಹೇಗೆ ನಡೆಯಲಿದೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಒಂದು ವೇಳೆ ಮಳೆ ನಿಂತರೆ, ಐಪಿಎಲ್ ರೈನ್ ರೂಲ್ಸ್ ಪ್ರಕಾರ ಪಂದ್ಯವನ್ನು ನಡೆಯಲಿದೆ. ಅಂದರೆ ಮಳೆ ಬಂದರೆ ಪಂದ್ಯವನ್ನು ಆಯೋಜಿಸಲು ಕೆಲ ನಿಯಮಗಳನ್ನು ರೂಪಿಸಲಾಗಿದೆ. ಸದ್ಯ ಅಹಮದಾಬಾದ್​ನಲ್ಲಿ ಸತತ ಮಳೆಯಾಗುತ್ತಿದ್ದು, ಹೀಗಾಗಿ ಪಂದ್ಯ ಹೇಗೆ ನಡೆಯಲಿದೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಒಂದು ವೇಳೆ ಮಳೆ ನಿಂತರೆ, ಐಪಿಎಲ್ ರೈನ್ ರೂಲ್ಸ್ ಪ್ರಕಾರ ಪಂದ್ಯವನ್ನು ನಡೆಸಲಾಗುತ್ತದೆ. ಅಂದರೆ ಮಳೆ ಬಂದರೆ ಪಂದ್ಯವನ್ನು ಆಯೋಜಿಸಲು ಕೆಲ ನಿಯಮಗಳನ್ನು ರೂಪಿಸಲಾಗಿದೆ. ಆ ನಿಯಮಗಳೇನು? ಫಲಿತಾಂಶ ನಿರ್ಧರಿಸುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...- ಫೈನಲ್​ಗೂ ಮುನ್ನ ಮಳೆ ಬಂದು ಪಂದ್ಯ ತಡವಾಗಿ ಆರಂಭವಾದರೂ ಓವರ್​ಗಳನ್ನು ಕಡಿತಗೊಳಿಸುವುದಿಲ್ಲ. ಅಂದರೆ ಪಂದ್ಯವು ರಾತ್ರಿ 9.40 ರೊಳಗೆ ಶುರುವಾದರೆ ಯಾವುದೇ ಓವರ್​ ಕಡಿತ ಇರುವುದಿಲ್ಲ. 2 ತಂಡಗಳು 20 ಓವರ್​ಗಳನ್ನು ಆಡಲಿದೆ. (ಒಂದು ವೇಳೆ ಮತ್ತೆ ಅಡಚಣೆ ಉಂಟಾಗಲಿದೆ ಎಂಬ ಸೂಚನೆಯಿದ್ದರೆ ಮಾತ್ರ ಓವರ್​ಗಳ ಕಡಿತಕ್ಕೆ ಮುಂದಾಗಬಹುದು) - ಮಳೆಯಿಂದಾಗಿ ವಿಳಂಬವಾಗಿ ರಾತ್ರಿ 9.40 ರ ಬಳಿಕ ಪಂದ್ಯ ಆರಂಭವಾಗುವುದಾರೆ, ಓವರ್​ಗಳ ಕಡಿತ ಮಾಡಲಾಗುತ್ತದೆ. ಅಲ್ಲದೆ ಆ ಬಳಿಕ ಡಕ್​ವರ್ತ್​ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಬೇಕಿದ್ದರೆ ಉಭಯ ತಂಡಗಳು ಕನಿಷ್ಠ 5 ಓವರ್​ಗಳನ್ನು ಆಡಿರಬೇಕು.- ಇನ್ನು ನಿಗದಿತ ಸಮಯದೊಳಗೆ ಪಂದ್ಯ ನಡೆಯದಿದ್ದರೆ ಹೆಚ್ಚುವರಿ ಸಮಯ ತೆಗೆದುಕೊಳ್ಳಲಾಗುತ್ತದೆ. ಈ ಮೂಲಕ 5 ಓವರ್​ಗಳ ಪಂದ್ಯವನ್ನು ಆಯೋಜಿಸಲಿದೆ. ಈ 5 ಓವರ್​ಗಳ ಪಂದ್ಯವು ರಾತ್ರಿ 11.56 ರಿಂದ ಶುರುವಾಗಲಿದ್ದು, 12.50 ರೊಳಗೆ ಮುಗಿಯಲಿದೆ.- ಇನ್ನು 11.56 ರಿಂದ 12.50 ರೊಳಗೆ 5 ಓವರ್​ಗಳ ಪಂದ್ಯ ಆಯೋಜಿಸಲು ಸಾಧ್ಯವಾಗದಿದ್ದರೆ ಸೂಪರ್ ಓವರ್​ ನಡೆಯಲಿದೆ. ಆದರೆ ಸೂಪರ್ ಓವರ್​ ನಡೆಸಲು ಪಿಚ್ ಮತ್ತು ಮೈದಾನವು ಆಟಕ್ಕೆ ಸಿದ್ಧವಾಗಿರಬೇಕು. ಅದರಂತೆ 12.50 ಕ್ಕೆ ಸೂಪರ್ ಓವರ್​ ಪಂದ್ಯ ಶುರುವಾಗಲಿದೆ.- ಇನ್ನು ಸೂಪರ್ ಓವರ್​ ಕೂಡ ನಡೆಸಲು ಸಾಧ್ಯವಾಗದಿದ್ದರೆ ಮಾತ್ರ ಫೈನಲ್ ಪಂದ್ಯವು ರದ್ದಾಗಲಿದೆ. ಒಂದು ವೇಳೆ ಪಂದ್ಯ ರದ್ದಾದರೆ ಲೀಗ್ ಹಂತದ ಪಾಯಿಂಟ್ಸ್ ಟೇಬಲ್​ ಮೂಲಕ ಚಾಂಪಿಯನ್ಸ್ ತಂಡವನ್ನು ನಿರ್ಧರಿಸಲಾಗುತ್ತದೆ.- ಸೂಪರ್ ಓವರ್ ಮೂಲಕ ಫಲಿತಾಂಶ ನಿರ್ಧರಿಸಲು ಸಾಧ್ಯವಾಗದಿದ್ದರೆ, ಲೀಗ್​ ಹಂತದ 70 ಪಂದ್ಯಗಳ ನಂತರ ಪಾಯಿಂಟ್ಸ್​ ಟೇಬಲ್​ನಲ್ಲಿ ಅಗ್ರಸ್ಥಾನ ಅಲಂಕರಿಸಿದ ತಂಡವನ್ನು ಚಾಂಪಿಯನ್ಸ್ ಎಂದು ಘೋಷಿಸಲಾಗುತ್ತದೆ.ಅಂದಹಾಗೆ IPL 2022 ರಲ್ಲಿ ಫೈನಲ್ ಪಂದ್ಯಕ್ಕಾಗಿ ಮೀಸಲು ದಿನವನ್ನು ಘೋಷಿಸಲಾಗಿತ್ತು. ಆದರೆ ಈ ಬಾರಿ ಐಪಿಎಲ್ ವೇಳಾಪಟ್ಟಿಯಲ್ಲಿ ಫೈನಲ್ ಪಂದ್ಯದ ವೇಳೆ ಮಳೆ ಬಂದರೆ ಮೀಸಲು ದಿನವನ್ನು ಘೋಷಿಸಿಲ್ಲ. ಒಂದು ವೇಳೆ ಮಳೆಯಿಂದಾಗಿ ಭಾನುವಾರ ಪಂದ್ಯ ನಡೆಯದಿದ್ದರೆ, ಮರುದಿನಕ್ಕೆ ಪಂದ್ಯವನ್ನು ಮುಂದೂಡುವ ಬಗ್ಗೆ ಚರ್ಚಿಸಬಹುದು. ಇಲ್ಲದಿದ್ದರೆ ಲೀಗ್ ಹಂತದ ಪಾಯಿಂಟ್ಸ್ ಟೇಬಲ್​ನಲ್ಲಿ ಅಗ್ರಸ್ಥಾನ ಅಲಂಕರಿಸಿದ ತಂಡವನ್ನೇ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ.

source https://tv9kannada.com/photo-gallery/cricket-photos/ipl-2023-final-rain-rules-ipl-2023-final-csk-vs-gt-kannada-news-zp-589114.html

Leave a Reply

Your email address will not be published. Required fields are marked *