IPL 2023: ಐಪಿಎಲ್ ನಡುವೆ ಸಿಹಿ ಸುದ್ದಿ ನೀಡಿದ ಗ್ಲೆನ್ ಮ್ಯಾಕ್ಸ್​ವೆಲ್ ದಂಪತಿಗಳು

ಸದ್ಯ 16ನೇ ಆವೃತ್ತಿಯ ಐಪಿಎಲ್​ನಲ್ಲಿ ಆರ್​ಸಿಬಿ ಪರ ಅಬ್ಬರಿಸುತ್ತಿರುವ ಆಸೀಸ್ ಆಲ್​​ರೌಂಡರ್ ಗ್ಲೆನ್ ಮ್ಯಾಕ್ಸ್​​ವೆಲ್​ ದಂಪತಿಗಳು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.ಕಳೆದ ವರ್ಷ ಮಾರ್ಚ್ 18 ರಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ಭಾರತೀಯ ಮೂಲದ ವಿನಿ ರಾಮನ್ ಹಾಗೂ ಆಸ್ಟ್ರೇಲಿಯಾ ಮೂಲದ ಕ್ರಿಕೆಟರ್ ಗ್ಲೆನ್ ಮ್ಯಾಕ್ಸ್‌ವೆಲ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.ಸ್ವತಃ ಈ ವಿಚಾರವನ್ನು ಮ್ಯಾಕ್ಸ್​ವೆಲ್ ಅವರ ಪತ್ನಿ ವಿನಿ ರಾಮನ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಮುಂದಿನ ಸೆಪ್ಟೆಂಬರ್‌ನಲ್ಲಿ ನಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಬರೆದುಕೊಂಡಿದ್ದಾರೆ.ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಭಾರತೀಯ ಮೂಲದ ವಿನಿ ರಾಮನ್ 5 ವರ್ಷಗಳ ಡೇಟಿಂಗ್ ನಂತರ ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ವಿನಿ ತಮಿಳು ಬ್ರಾಹ್ಮಣ ಕುಟುಂಬದ ಮಗಳಾಗಿದ್ದು ಅವರು ಚೆನ್ನೈ ಮೂಲದವರಾಗಿದ್ದು, ಆಸ್ಟ್ರೇಲಿಯಾದಲ್ಲಿ ನೆಲೆ ನಿಂತಿದ್ದಾರೆ. ವಿನ್ನಿ ವೃತ್ತಿಯಲ್ಲಿ ವೈದ್ಯೆಯಾಗಿದ್ದಾರೆ.ಇನ್ನು ಐಪಿಎಲ್​​ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಗ್ಲೆನ್ ಮ್ಯಾಕ್ಸ್​ವೆಲ್ ಆರ್​ಸಿಬಿ ಬ್ಯಾಟಿಂಗ್ ವಿಭಾಗದ ಬೆನ್ನೇಲುಬಾಗಿದ್ದಾರೆ. ಆಡಿರುವ 11 ಪಂದ್ಯಗಳಲ್ಲಿ 330 ರನ್ ಕಲೆ ಹಾಕಿ ಆರೆಂಜ್ ಕ್ಯಾಪ್ ರೇಸ್​ನಲ್ಲಿದ್ದಾರೆ.

source https://tv9kannada.com/photo-gallery/cricket-photos/ipl-2023-rcb-star-glenn-maxwells-wife-announces-couple-is-expecting-their-first-child-psr-575675.html

Leave a Reply

Your email address will not be published. Required fields are marked *