IPL 2023: ಭರ್ಜರಿ ದಾಖಲೆ ನಿರ್ಮಾಣ: ಐಪಿಎಲ್​ ಅಂಗಳದಲ್ಲಿ ಹೊಸ ಕ್ರಿಸ್ ಗೇಲ್

IPL 2023: ಲಕ್ನೋ ಸೂಪರ್ ಜೈಂಟ್ಸ್ ತಂಡದ ಆರಂಭಿಕ ಆಟಗಾರ ಕೈಲ್ ಮೇಯರ್ಸ್ ಅವರ ಆಟ ನೋಡುತ್ತಿದ್ದರೆ ಕ್ರಿಸ್ ಗೇಲ್ ನೆನಪಾಗುತ್ತಾರೆ. ಹೀಗೆ ಅಂದಿದ್ದು ಮತ್ಯಾರೂ ಅಲ್ಲ, ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ.ಹೌದು, ಇದೇ ಮೊದಲ ಬಾರಿಗೆ ಐಪಿಎಲ್​ ಅಂಗಳಕ್ಕೆ ಕಾಲಿಟ್ಟಿರುವ ಕೈಲ್ ಮೇಯರ್ಸ್ ಅಬ್ಬರ ನೋಡುತ್ತಿದ್ದರೆ ಕ್ರಿಸ್ ಗೇಲ್ ಒಮ್ಮೆ ಕಣ್ಮುಂದೆ ಬರುತ್ತಾರೆ. ಏಕೆಂದರೆ ಮೇಯರ್ಸ್ ಅಬ್ಬರ ಮೊದಲ ಓವರ್​​ನಿಂದಲೇ ಶುರುವಾಗುತ್ತಿದೆ. ಇದಕ್ಕೆ ಸಾಕ್ಷಿಯೇ ಮೊದಲೆರಡು ಪಂದ್ಯಗಳು.ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಪಂದ್ಯದ ಮೂಲಕ ಐಪಿಎಲ್​ಗೆ ಪಾದರ್ಪಣೆ ಮಾಡಿದ್ದ ಕೈಲ್ ಮೇಯರ್ಸ್, ಮೊದಲ ಪಂದ್ಯದಲ್ಲೇ 38 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 2 ಫೋರ್​ನೊಂದಿಗೆ 73 ರನ್​ ಸಿಡಿಸಿದ್ದರು.ಇದರೊಂದಿಗೆ 2008 ರ ಬಳಿಕ ಐಪಿಎಲ್​ನಲ್ಲಿ ಆಡಿದ ಚೊಚ್ಚಲ ಪಂದ್ಯದಲ್ಲೇ ಅತೀ ಹೆಚ್ಚು ರನ್​ ಕಲೆಹಾಕಿದ ದಾಖಲೆ ಕೈಲ್ ಮೇಯರ್ಸ್ ಪಾಲಾಗಿತ್ತು. ಇದೀಗ ಸಿಎಸ್​ಕೆ ವಿರುದ್ಧದ ಪಂದ್ಯದಲ್ಲೂ ವೆಸ್ಟ್ ಇಂಡೀಸ್ ದಾಂಡಿಗ ಮತ್ತೊಮ್ಮೆ ಅಬ್ಬರಿಸಿದ್ದಾರೆ.ಸಿಎಸ್​ಕೆ ವಿರುದ್ಧ 22 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 8 ಫೋರ್​ನೊಂದಿಗೆ 53 ರನ್​ ಬಾರಿಸಿದ್ದಾರೆ. ಇದರೊಂದಿಗೆ ಚೊಚ್ಚಲ ಐಪಿಎಲ್​ನ ಮೊದಲೆರಡು ಇನಿಂಗ್ಸ್​ಗಳಲ್ಲಿ ಅರ್ಧಶತಕ ಬಾರಿಸಿದ ವಿಶೇಷ ದಾಖಲೆಯೊಂದು ಕೈಲ್ ಮೇಯರ್ಸ್ ಪಾಲಾಗಿದೆ.ಇನ್ನು ಕೈಲ್ ಮೇಯರ್ಸ್ ಅಬ್ಬರನ್ನು ಕ್ರಿಸ್ ಗೇಲ್​ಗೆ ಹೋಲಿಸಲು ಮತ್ತೊಂದು ಕಾರಣ, ಎರಡೂ ಪಂದ್ಯಗಳಲ್ಲೂ 200 ಕ್ಕಿಂತ ಅಧಿಕ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿರುವುದು. ಇನ್ನು ನಿರ್ಭಯವಾಗಿ ಬ್ಯಾಟ್ ಬೀಸುತ್ತಿರುವ ಮೇಯರ್ಸ್ ಮುಂಬರುವ ದಿನಗಳಲ್ಲಿ ಐಪಿಎಲ್​ನ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದರೂ ಅಚ್ಚರಿಪಡಬೇಕಿಲ್ಲ.

source https://tv9kannada.com/photo-gallery/cricket-photos/kyle-mayers-looks-like-new-chris-gayle-in-ipl-says-suresh-raina-kannada-news-zp-au50-549201.html

Leave a Reply

Your email address will not be published. Required fields are marked *