IPL 2023: ಹೀಗಾದ್ರೆ, ಪಂದ್ಯ ರದ್ದಾದರೂ RCB ಪ್ಲೇಆಫ್​​ಗೆ ಪ್ರವೇಶಿಸುತ್ತೆ..!

IPL 2023: ಐಪಿಎಲ್​ನ ಪ್ಲೇಆಫ್​ಗೆ ಎಂಟ್ರಿ ಕೊಡಲು ಇಂದು 2 ತಂಡಗಳು ನಿರ್ಣಾಯಕ ಪಂದ್ಯಗಳನ್ನಾಡುತ್ತಿದೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಆಡುತ್ತಿದೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆದ್ದರೆ 16 ಅಂಕಗಳೊಂದಿಗೆ ಪಾಯಿಂಟ್ಸ್​ ಟೇಬಲ್​ನಲ್ಲಿ 4ನೇ ಸ್ಥಾನ ಅಲಂಕರಿಸಬಹುದು.ಆದರೆ ರಾತ್ರಿ ನಡೆಯಲಿರುವ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ತಂಡವು ಜಯ ಸಾಧಿಸಿದರೆ ಉತ್ತಮ ನೆಟ್ ರನ್ ರೇಟ್​ನೊಂದಿಗೆ ಫಾಫ್ ಪಡೆಯು ಪ್ಲೇಆಫ್ ಪ್ರವೇಶಿಸಲಿದೆ. ಆದರೀಗ ಈ ನಿರ್ಣಾಯಕ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ.ಬೆಂಗಳೂರಿನ ಸುತ್ತ ಮುತ್ತ ಇಂದು ರಾತ್ರಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಇದರಿಂದ ಪಂದ್ಯ ರದ್ದಾದರೆ ಆರ್​ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳಿಗೆ ಒಂದೊಂದು ಪಾಯಿಂಟ್ಸ್ ಹಂಚಲಾಗುತ್ತದೆ. 
ಅಂದರೆ ಪಂದ್ಯ ರದ್ದಾದರೆ ಆರ್​ಸಿಬಿ ತಂಡದ ಒಟ್ಟು ಪಾಯಿಂಟ್ಸ್​ 15 ಆಗಲಿದೆ. ಇದರಿಂದ ಪ್ಲೇಆಫ್ ಪ್ರವೇಶಿಸಲು ಸಾಧ್ಯನಾ ಎಂದು ಪ್ರಶ್ನಿಸಿದರೆ, ಅದು ಎಸ್​ಆರ್​ಹೆಚ್​-ಮುಂಬೈ ಇಂಡಿಯನ್ಸ್ ನಡುವಣ ಫಲಿತಾಂಶದ ಮೇಲೆ ಅವಲಂಭಿತವಾಗಿರಲಿದೆ.
ಮುಂಬೈ ಇಂಡಿಯನ್ಸ್ ವಿರುದ್ಧ ಎಸ್​ಆರ್​ಹೆಚ್ ತಂಡ ಗೆದ್ದರೆ ಆರ್​ಸಿಬಿ ತಂಡವು ನೇರವಾಗಿ ಪ್ಲೇಆಫ್ ಪ್ರವೇಶಿಸಲಿದೆ. ಏಕೆಂದರೆ ಆರ್​ಸಿಬಿ ತಂಡದ ನೆಟ್ ರನ್​ ರೇಟ್ ಪ್ಲಸ್​ನಲ್ಲಿದ್ದು, ಮುಂಬೈ ಇಂಡಿಯನ್ಸ್ ತಂಡದ ನೆಟ್ ರನ್ ರೇಟ್ ಮೈನಸ್​ನಲ್ಲಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ಸೋತರೆ ಆರ್​ಸಿಬಿ ನೇರವಾಗಿ ಪ್ಲೇಆಫ್ ಪ್ರವೇಶಿಸಲಿದೆ. ಒಂದು ವೇಳೆ ಎಸ್​ಆರ್​ಹೆಚ್ ವಿರುದ್ಧ ಸೋತು ಮುಂಬೈ ಇಂಡಿಯನ್ಸ್ ಹೆಚ್ಚಿನ ನೆಟ್ ರನ್​ ರೇಟ್ ಪಡೆದರೂ ಆರ್​ಸಿಬಿ ಚಿಂತಿಸಬೇಕಿಲ್ಲ.ಏಕೆಂದರೆ ಕೊನೆಯ ಪಂದ್ಯ ರದ್ದಾದರೆ ಆರ್​ಸಿಬಿಗೆ 1 ಪಾಯಿಂಟ್ಸ್​ ಸಿಗಲಿದೆ. ಇದರೊಂದಿಗೆ ಆರ್​ಸಿಬಿ ತಂಡವು 15 ಪಾಯಿಂಟ್ಸ್​ನೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಅಲಂಕರಿಸಲಿದೆ.ಹೀಗಾಗಿಯೇ ಪಂದ್ಯ ರದ್ದಾದರೂ ಪ್ಲೇಆಫ್ ಪ್ರವೇಶಿಸುವ ಅವಕಾಶ ಆರ್​ಸಿಬಿಗೆ ಇದೆ. ಆದರೆ ಅದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ತಂಡವು ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲಬೇಕಷ್ಟೆ.

source https://tv9kannada.com/photo-gallery/cricket-photos/ipl-2023-rcb-and-mumbai-indians-playoffs-chances-kannada-news-zp-583937.html

Views: 0

Leave a Reply

Your email address will not be published. Required fields are marked *